ಬೆಂಕಿ ಆಕಸ್ಮಿಕ: ವೃದ್ಧೆ ಮೃತ್ಯು
ಅಮಾಸೆಬೈಲು, ಸೆ.16: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಅಮಾಸೆಬೈಲಿನ ಕಲ್ಯಾಣಿ ಬಾಯಿ(80) ಎಂದು ಗುರುತಿಸಲಾಗಿದೆ. ಇವರು ರಾತ್ರಿ ದೀಪಕ್ಕೆ ಸೀಮೆ ಎಣ್ಣೆ ಹಾಕುತ್ತಿದ್ದಾಗ ಕ್ಯಾನ್ ಮಗುಚಿ ಮೈಗೆ ಬೆಂಕಿ ತಗುಲಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story