Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಾಲಿವುಡ್: ಕುಂಕುಮ ತಂದ ದೌರ್ಭಾಗ್ಯ

ಬಾಲಿವುಡ್: ಕುಂಕುಮ ತಂದ ದೌರ್ಭಾಗ್ಯ

ವಾರ್ತಾಭಾರತಿವಾರ್ತಾಭಾರತಿ17 Sept 2016 11:38 AM IST
share
ಬಾಲಿವುಡ್: ಕುಂಕುಮ ತಂದ ದೌರ್ಭಾಗ್ಯ

ಒಂದು ಕಾಲವಿತ್ತು ಕುಂಕುಮ ಹೆಣ್ಣಿನ ಪಾಲಿಗೆ ಸೌಭಾಗ್ಯ ಹೌದೋ ಅಲ್ಲವೋ, ಆದರೆ ಸಿನೆಮಾದ ಪಾಲಿಗೆ ಕುಂಕುಮ ಅನಿವಾರ್ಯವಾಗಿತ್ತು. ಕುಂಕುಮವನ್ನು ಜೊತೆಗಿಟ್ಟು ಕನ್ನಡದಲ್ಲಿ ಬಂದಿರುವ ಸಿನೆಮಾಗಳನ್ನು ಒಮ್ಮೆ ನೆನೆಸಿಕೊಳ್ಳೋಣ. ಕುಂಕುಮ ಸೌಭಾಗ್ಯ, ಕುಂಕುಮ ಭಾಗ್ಯ, ಸಿಂಧೂರ ಭಾಗ್ಯ, ಮುತ್ತೈದೆ, ಮುತ್ತೈದೆಯ ಭಾಗ್ಯ, ಬೆಳ್ಳಿ ಕಾಲುಂಗುರ, ಮಾಂಗಲ್ಯ, ತಾಳಿಯ ಆಣೆ....ಕುಂಕುಮದ ಸುತ್ತ ತಿರುಗುವ ಸಿನೆಮಾಗಳನ್ನು ಈಗ ಒಮ್ಮೆ ಕಲ್ಪಿಸಿಕೊಳ್ಳೋಣ. ಇಂದಿನ ಹಾಸ್ಯ ಸಿನೆಮಾಗಳಿಗೆ ಈ ಎಲ್ಲ ಕತೆಗಳೂ ವಸ್ತುವಾಗಬಹುದೇನೋ.

ಹಿಂದಿ ಸಿನೆಮಾಗಳಲ್ಲಿ ಹಲವಾರು ತರ್ಕ ರಹಿತ ಕಲ್ಪನೆ ಮತ್ತು ಯೋಚನೆಗಳ ಜೊತೆ ಕುಂಕುಮ ಕಾಣಿಸಿಕೊಂಡಿದೆ. ಸಿಂಧೂರ್ ಔರ್ ಬಂದೂಕ್, ಸಿಂಧೂರ್ ಕಿ ಸೌಗಂಧ್, ಸಿಂಧೂರ್ ಬನೆ ಜ್ವಾಲಾ, ಉದಾರ್ ಕಾ ಸಿಂಧೂರ್.... ಹೀಗೆ ಕೆಲವು ಹಿಂದಿ ಸಿನೆಮಾಗಳ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಪತಿ ಮರಣ ಹೊಂದಿದ ಬಳಿಕ ಪತ್ನಿ ಹಣೆಯ ಕುಂಕುಮದ ಬೊಟ್ಟು ಅಳಿಸಿ ಹಾಕುವ ಸನ್ನಿವೇಶವನ್ನು ಅತ್ಯಂತ ಭಾವನಾತ್ಮಕವಾಗಿ ತೋರಿಸುವ ಸನ್ನಿವೇಶಗಳು ಸಿನೆಮಾಗಳಲ್ಲಿ ಮಾಮೂಲಿಯಾಗಿವೆ. ‘ದೌರ್’ ಸಿನೆಮಾದಲ್ಲಿ ಮೀರಾಳ ಅತ್ತೆ ಗೌರಿ ಸೊಸೆಯ ಹಣೆ ಮೇಲಿನ ಕುಂಕುಮದ ಬೊಟ್ಟನ್ನು ಅಳಿಸಿ ಹಾಕುವ ದೃಶ್ಯವನ್ನು ಅಸಹಜವಾಗಿ ರೂಪಿಸಲಾಗಿದೆ. ವೀಕ್ಷಕರ ಮನ ಕಲಕುವಂತಹ ಸನ್ನಿವೇಶಗಳನ್ನು ಬಂಡವಾಳವಾಗಿಸಿಕೊಂಡಿರುವ ಹಿಂದಿ ಸಿನೆಮಾಗಳಲ್ಲಿ ಹಣೆ ಮೇಲೆ ತಿಲಕ ಇಡುವುದು ಅಥವಾ ಹಣೆ ಮೇಲಿನ ತಿಲಕವನ್ನು ಅಳಿಸಿ ಹಾಕುವುದು. ಇಂತಹ ಸನ್ನಿವೇಶಗಳನ್ನು ಅತ್ಯಂತ ನಾಜೂಕಾಗಿ ಬಿಂಬಿಸಲಾಗುತ್ತದೆ.

‘ಸಿಂಧೂರ್’ ಸಿನೆಮಾದಲ್ಲಿ ವಿಜಯ್ ತನ್ನ ಪತ್ನಿ ಲಕ್ಷ್ಮೀಯನ್ನು ಬಂಜೆ ಎಂದು ನಿಂದಿಸುತ್ತಾ ಆಕೆಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಆದರೆ ಲಕ್ಷ್ಮೀ ಗರ್ಭಿಣಿ ಎಂಬ ವಾಸ್ತವಾಂಶ ಆತನಿಗೆ ತಿಳಿದಿರುವುದಿಲ್ಲ. ಪತಿಯಿಂದ ಪರಿತ್ಯಕ್ತಳಾದ ಲಕ್ಷ್ಮೀ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆಯುತ್ತಾಳೆ. ಈ ಸಂದರ್ಭದಲ್ಲಿ ಮಿಂಚು-ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಆಕೆಯ ಹಣೆ ಮೇಲಿನ ಕುಂಕುಮ ಕರಗಿ ನೀರಾಗುತ್ತದೆ. ವಿಧಿಯ ಮರ್ಮ ಅರಿತ ದೇವಸ್ಥಾನದ ಅರ್ಚಕ, ಕುಂಕುಮ ರಹಿತ ವಿಧವೆಯಾಗಿ ಮಗುವನ್ನು ಹೆತ್ತು ಸಲಹುವಂತೆ ಲಕ್ಷ್ಮೀಗೆ ಸಲಹೆ ನೀಡುತ್ತಾರೆ. ‘ಖೂನ್ ಕಾ ಸಿಂಧೂರ್’ ನಂತಹ ಹೆಸರುಗಳ ಮೂಲಕ ಹಿಂದಿ ಸಿನೆಮಾಗಳು ರಕ್ತ ಮತ್ತು ಕುಂಕುಮದ ಕಲ್ಪನೆಯನ್ನು ತೆರೆದಿಡುತ್ತವೆ. ‘ದಿಲ್’ ಸಿನೆಮಾದಲ್ಲಿ ರಾಜ ಮತ್ತು ಮಧು ತಮ್ಮ ವಿವಾಹ ಮಹೋತ್ಸವಕ್ಕೆ ಹಿಂದೂ ಸಂಪ್ರದಾಯದಂತೆ ಅಗತ್ಯವಿರುವ ವಸ್ತುಗಳನ್ನು ಸಿದ್ದಮಾಡಿಟ್ಟುಕೊಳ್ಳುತ್ತಾರೆ. ಇಲ್ಲಿ ರಾಜ ತನ್ನ ರಕ್ತವನ್ನೇ ಸಿಂಧೂರ(ಕುಂಕುಮ)ವಾಗಿ ಬಳಸುವುದು ವಿಶೇಷವಾಗಿದೆ.

ರಕ್ತದ ರೂಪದಲ್ಲಿ ಟೊಮೆಟೊ ರಸ ಮತ್ತು ಸಿಂಧೂರದ ರೂಪದಲ್ಲಿ ರಕ್ತ. ಸಿಂಧೂರಕ್ಕೆ ಒಂದು ಸಮರ್ಥ ಪ್ರತಿರೂಪವಾಗಿ ಟೊಮೆಟೊ ರಸದ ಬಳಕೆಯಾಗಿದೆ. ‘ಕಟ್ಟಿ ಭಟ್ಟಿ’ ಸಿನೆಮಾದಲ್ಲಿ ಮ್ಯಾಡಿಯೊಂದಿಗೆ ವಿವಾಹದ ಸನ್ನಿವೇಶದಲ್ಲಿ ಪಾಯಲ್ ನಿಜವಾಗಿಯೂ ಟೊಮೆಟೊ ರಸವನ್ನೇ ಕುಂಕುಮವನ್ನಾಗಿ ಬಳಸುತ್ತಾಳೆ. ಸಿಂಧೂರದ ವಿಷಯಕ್ಕೆ ಬಂದಾಗ ಸಿನೆಮಾದಲ್ಲಿ ಮಹಿಳೆಯರು ನಿಶ್ಚಿತ ಮನಸ್ಥಿತಿ ಹೊಂದಿರುತ್ತಾರೆ. ಆದಾಗ್ಯೂ, ‘ಜೋಧಾ ಅಕ್ಬರ್’ ಸಿನೆಮಾದಲ್ಲಿ ಅಕ್ಬರ್‌ನನ್ನು ವಿವಾಹವಾಗುವ ವಿಷಯದಲ್ಲಿ ತನಗಿರುವ ಗಾಬರಿಯನ್ನು ವ್ಯಕ್ತಪಡಿಸುವ ಪರಿ ಇದು : ನನ್ನ ಹಣೆ ಮೇಲೆ ಸಿಂಧೂರದ ತಿಲಕ ಇಡುವ ವ್ಯಕ್ತಿಗೆ ಇದರ ಮಹತ್ವ ಕೂಡ ತಿಳಿದಿಲ್ಲ. ಬಳಿಕ ಆಕೆ ಅಕ್ಬರ್‌ಗೆ ಸಿಂಧೂರ ತಿಲಕದ ಮಹತ್ವವನ್ನು ತಿಳಿಹೇಳುತ್ತಾಳೆ. ‘ಅಮರ್ ಅಕ್ಬರ್ ಅಂತೋನಿ’ ಸಿನೆಮಾದಲ್ಲಿ ಅಕ್ಬರ್ ತನ್ನ ತಾಯಿಗೆ ಕುಂಕುಮದ ಡಬ್ಬ ತಂದು ಕೊಡುವ ಸನ್ನಿವೇಶವಿದೆ. ಆದರೆ ತನ್ನ ಪತಿ ಯಾವತ್ತೋ ಇಹಲೋಕ ತ್ಯಜಿಸಿದ್ದಾರೆ ಎಂದುಕೊಂಡಿದ್ದ ಆ ತಾಯಿಗೆ ಇದರಿಂದ ನೋವಾಗುತ್ತದೆ. ನಿನ್ನ ಪತಿ ಇನ್ನೂ ಬದುಕಿದ್ದಾರೆ ಎಂದು ಆಕೆಗೆ ಮನದಟ್ಟು ಮಾಡಿಕೊಟ್ಟ ಬಳಿಕ ಆಕೆ ಕುಂಕುಮದ ಬೊಟ್ಟನ್ನು ತನ್ನ ಹಣೆಮೇಲೆ ಧರಿಸಿಕೊಂಡು ಸಂಭ್ರಮಿಸುತ್ತಾಳೆ.

ಸಿನೆಮಾಗಳಲ್ಲಿ ಸಂಭಾಷಣೆ ಮತ್ತು ಕೃತ್ಯಗಳು ಸಿಂಧೂರದ ಮಹತ್ವವನ್ನು ಸಾರಿ ಹೇಳಲು ಸಾಕಾಗದು ಎಂದಾದಾಗ ಮಹಿಳೆ ಹಾಡಿನ ಮೊರೆ ಹೋಗುತ್ತಾಳೆ. ಕೊಯಿಲಾ ಸಿನೆಮಾದ ಸಾಂಸೋಕಿ ಮಾಲಾ ಎಂಬ ಹಾಡಿನ ‘ರಕ್ ಲಾಜ್ ಮೇರೆ ಸಿಂಧೂರ್ ಕಿ’ ಎಂಬ ಸಾಲನ್ನೇ ಗಮನಿಸಿ. ಸಲಾಮ್- ಎ- ಇಷ್ಕ್ ಸಿನೆಮಾದ ಟೈಟಲ್ ಹಾಡು ‘ ಮೇರೆ ಮಾಂಗ್ ಮೇ ತೇರಾ ಸಿಂಧೂರ್ ಹೈ’ ಹಾಡು ತೆಹಝೇಬಳು ತನ್ನ ಪತಿ ಅಶುತೋಶ್ ನ ಧರ್ಮವನ್ನು ಒಪ್ಪಿಕೊಂಡ ರೀತಿಯನ್ನು ಸೂಚ್ಯವಾಗಿ ಹೇಳುತ್ತದೆ. ಸಿನೆಮಾದಲ್ಲಿ ಮದುವೆ ಪ್ರಸ್ತಾಪ ಮಾಡಲೂ ಸಿಂಧೂರವನ್ನು ಹಾಡಿನಲ್ಲಿ ಬಳಸಲಾಗುತ್ತದೆ. ‘ಮೊಹಬ್ಬತೆ’ ಸಿನೆಮಾದಲ್ಲಿನ ‘ ಹಮ್‌ಕೋ ಹಮೀ ಸೇ ಚುರಾನಾ’ ಹಾಡಿನಲ್ಲಿ ಮೇಘನಾ- ಚುಟ್‌ಕೀ ಭರ್ ಸಿಂಧೂರ್ ಸೆ ತುಮ್ ಅಬ್ ಯೆ ಮಾಂಗ್ ಝರಾ ಭರ್ ದೊ’ ಎಂದು ಹಾಡುತ್ತಾಳೆ.

ಢರ್ ಸಿನೆಮಾದ ‘ಅಂಗ್ ಸೆ ಅಂಗ್ ಲಗಾನಾ’ ಗೀತೆಯಲ್ಲಿ ಸುನೀಲ್ ತನ್ನನ್ನು ಅಪ್ಪಿಕೊಳ್ಳುವಂತೆ ಕಿರಣ್‌ಗೆ ಹೇಳುತ್ತಾನೆ. ಆಗ ಅವನ ಅತ್ತಿಗೆ, ಚುಟ್‌ಕೀ ಭರ್ ಸಿಂಧೂರ್ ಮಾಂಗಾ ಕರ್ ಇಸ್‌ಕಿ ಮಾಂಗ್ ಸಜಾನಾ’ ಎನ್ನುತ್ತಾಳೆ. ಇಷ್ಟು ವೇಗವಾಗಿ ಪರಿಸ್ಥಿತಿ ಬದಲಾಗುವ ಬಗ್ಗೆ ಸಮಕಾಲೀನ ನಾಯಕನಟರು ಅಚ್ಚರಿ ಪಡಬಹುದು! ಆದರೆ ಸುನೀಲ್ ಇದನ್ನೆಲ್ಲ ಯೋಚಿಸದೆ ಕಿರಣ್‌ಳನ್ನು ಅಪ್ಪಿಕೊಳ್ಳುತ್ತಾನೆ. ‘ಕಿತ್‌ನೆ ದೂರ್ ಕಿತ್‌ನೆ ಪಾಸ್’ ಸಿನೆಮಾದಲ್ಲಿ ಜತಿನ್ ಮತ್ತು ಕರಿಶ್ಮಾ ದಂಪತಿಯ ರೀತಿ ನಾಟಕವಾಡುತ್ತಾರೆ. ಆದರೆ ಇವರ ಸ್ನೇಹಿತರು ಕರಿಶ್ಮಾಳನ್ನು ಕುಂಕುಮ ಧರಿಸುವಂತೆ ಒತ್ತಾಯಿಸುವಾಗ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಸದಾ ನಿನ್ನ ಬಳಿ ಕುಂಕುಮದ ಡಬ್ಬ ಇಟ್ಟುಕೊಳ್ಳಬೇಕು ಎಂದು ಒಬ್ಬ ಸ್ನೇಹಿತ ಒತ್ತಿ ಹೇಳುತ್ತಾನೆ. ಈಗಿನ ಸಂದರ್ಭದಲ್ಲಿ ಹೆಣ್ಮಕ್ಕಳಿಗೆ ಸದಾ ನಿನ್ನ ಬಳಿ ಪೆಪ್ಪರ್ ಸ್ಪ್ರೇಯ ಡಬ್ಬ ಇಟ್ಟುಕೋ ಎಂದು ಹೇಳುವಂತೆ..!

ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ರಾಹುಲ್ ಮತ್ತು ಮೀನಾ ದಂಪತಿಯ ರೀತಿ ನಾಟಕ ಆಡುತ್ತಾರೆ. ಇಲ್ಲಿ ಅವರಿಬ್ಬರು ಒಂದು ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಆಚರಣೆ ಪ್ರಕಾರ ರಾಹುಲ್ ಮೀನಾಳನ್ನು ಬೆಟ್ಟದ ಮೇಲಕ್ಕೆ ಮೆಟ್ಟಿಲ ಮೂಲಕ ಎತ್ತಿಕೊಂಡು ಹೋಗಬೇಕು. ಹೀಗೆ ರಾಹುಲ್ ಮೀನಾಳನ್ನು ಬೆಟ್ಟದ ತುದಿಯಲ್ಲಿರುವ ದೇವಸ್ಥಾನಕ್ಕೆ ಎತ್ತಿಕೊಂಡು ಹೋಗುತ್ತಾನೆ. ಅಲ್ಲಿ ಆಕೆಯ ಹಣೆಗೆ ಕುಂಕುಮದ ಬೊಟ್ಟು ಇಟ್ಟರೆ ಆಚರಣೆ ಪೂರ್ಣವಾದಂತೆ. ಇಲ್ಲಿ ಕುಂಕುಮ ಧಾರಣೆಯ ಕುರಿತು ಮೀನಾ ಮತ್ತು ರಾಹುಲ್ ಇಬ್ಬರೂ ಭಾವನಾತ್ಮಕ ಧೋರಣೆ ಹೊಂದಿರುತ್ತಾರೆ.

ಕಹಾನಿ ಸಿನೆಮಾದಲ್ಲಿ ಒಬ್ಬ ಭೀತಿವಾದಿಯನ್ನು ಕೊಲ್ಲುವ ವಿಧವೆ ವಿದ್ಯಾ ಸಿಂಧೂರ್ ಖೇಳಾ ಎಂಬ ಆಚರಣೆಯಲ್ಲಿ ತೊಡಗಿರುವ ಮಹಿಳೆಯರ ಗುಂಪಿನೊಳಗೆ ಸೇರಿಕೊಳ್ಳುತ್ತಾಳೆ. ಬೆಂಗಾಲಿ ಹಿಂದೂಗಳಲ್ಲಿ ಮದುವೆಯಾದ ಹುಡುಗಿಯರಿಗಾಗಿ ಮಾಡುವ ದುರ್ಗಾ ಪೂಜೆಯ ಸಂಪ್ರದಾಯವಿದು. ಈ ಸಂದರ್ಭ ಆ ಮಹಿಳೆಯರು ವಿದ್ಯಾಳ ಹಣೆಯ ಮೇಲೆ ಸಿಂಧೂರದ ತಿಲಕ ಇಡುತ್ತಾರೆ. ಇದರಿಂದ ತನ್ನನ್ನು ಬೆನ್ನಟ್ಟಿಕೊಂಡು ಬಂದವರ ಕಣ್ತಪ್ಪಿಸಿ ಪರಾರಿಯಾಗಲು ಆಕೆಗೆ ಸಾಧ್ಯವಾಗುತ್ತದೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಕುಂಕುಮವನ್ನು ಪರಿಣಾಮಕಾರಿಯಾಗಿ ಬಳಸಿರುವುದು ಕಹಾನಿ ಚಿತ್ರದಲ್ಲೇ ಇರಬೇಕು.

ಅದೇನೇ ಇರಲಿ. ಅಶ್ಲೀಲ ಚಿತ್ರಗಳಿಗೆ ‘ಎ’ ಎಂದು ಬಿಂಬಿಸಲಾಗುತ್ತದೆ. ಆದರೆ ಕುಂಕುಮ ಮತ್ತು ತಾಳಿಯನ್ನು ಮುಂದಿಟ್ಟುಕೊಂಡು ಹೆಣ್ಣನ್ನು ಅತ್ಯಂತ ಹೀನಾಯವಾಗಿ ಬ್ಲಾಕ್‌ಮೇಲ್ ಮಾಡುವ ಸಿನೆಮಾಗಳಿಗೆ ಈವರೆಗೆ ಯಾವ ಗ್ರೇಡ್‌ಗಳನ್ನು ದಾಖಲಿಸಲಾಗಿಲ್ಲ. ಪುಣ್ಯಕ್ಕೆ ‘ಮುತ್ತೈದೆಯರಿಗೆ ಮಾತ್ರ’ ‘ವಿಧವೆಯರಿಗೆ ಪ್ರವೇಶವಿಲ್ಲ’ ಎಂಬಂತಹ ತಲೆಬರಹಗಳನ್ನು ಹೊತ್ತ ಚಿತ್ರಗಳು ಈವರೆಗೆ ಬಂದಿಲ್ಲ ಎನ್ನುವುದೇ ಸಮಾಧಾನಕರ ವಿಷಯವಾಗಿದೆ. ಸದ್ಯದ ದಿನಗಳಲ್ಲಿ ಇಂತಹ ಚಿತ್ರಗಳನ್ನು ಊಹಿಸಲೂ ಸಾಧ್ಯವಿಲ್ಲವಾದರೂ, ಈ ಚಿತ್ರಗಳು ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷಿಯೊಳಗಿಂದ’ ಎಂಬಂತೆ ಟಿವಿ ಸೀರಿಯಲ್‌ಗಳಾಗಿ ಮನೆ ಮನೆಯಲ್ಲಿ ಊಳಿಡುತ್ತಿವೆ. ಸದ್ಯಕ್ಕೆ ಸಂಸ್ಕೃತಿಯ ಗುತ್ತಿಗೆದಾರರು ದೇಶವನ್ನು ಆಳುತ್ತಿರುವುದರಿಂದ, ಮತ್ತೆ ಬೆಳ್ಳಿ ತೆರೆಯಲ್ಲಿ ಕುಂಕುಮಕ್ಕೆ ಆದ್ಯತೆ ಸಿಕ್ಕಿದರೆ ಅಚ್ಚರಿಯೇನೂ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X