ಮ್ಯೂಸಿಯಂನಲ್ಲಿದ್ದರೂ ಈ ಚಿನ್ನದ ಟಾಯ್ಲೆಟ್ ಕೇವಲ ಪ್ರದರ್ಶನಕ್ಕಲ್ಲ, ನೀವೂ ಬಳಸಬಹುದು!

ನ್ಯೂಯಾರ್ಕ್‌ನ ಗುಗನ್ಹೆಮ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಚಿನ್ನದ ಶೌಚಾಲಯವು ಹಿತ ನೀಡುವ ಜೊತೆಗೆ ಕಣ್ಣಿಗೂ ಹಬ್ಬ ತರುತ್ತಿದೆ.
ಚೆನ್ನಾಗೇ ಕೆಲಸ ಮಾಡುವ ಈ ಶೌಚಾಲಯವನ್ನು ಪ್ರಕಾಶಮಾನವಾಗಿ ಹೊಳೆಯುವ ಚಿನ್ನದಿಂದ ತಯಾರಿಸಲಾಗಿದೆ. ಈಗ ಸಾರ್ವಜನಿಕರ ಖಾಸಗಿ ಬಳಕೆಗೆ ಇದನ್ನು ನಾಲ್ಕನೇ ಮಹಡಿಯ ಬಾತ್‌ರೂಂನಲ್ಲಿ ಅಳವಡಿಸಲಾಗಿದೆ. ಇಟಲಿಯ ಕಲಾವಿದ ಮೌರಿಜಿಯೋ ಕ್ಯಾಟೆಲನ್ 2011ರಲ್ಲಿ ಗುಗೆನ್ಹೆಮ್‌ನಲ್ಲಿ ಪ್ರದರ್ಶನ ನೀಡಿದ ವಾಸ್ತುಕಲೆ ಇದು. ಆದರೆ ಶುಕ್ರವಾರದಿಂದ ಇದನ್ನು ಸಾಮಾನ್ಯ ಶೌಚದಂತೆಯೇ ಪ್ರವಾಸಿಗರಿಗೆ ಬಳಸಲು ಕೊಡಲಾಗಿದೆ ಎಂದು ಮ್ಯೂಸಿಯಂ ನಿರ್ವಾಹಕರಾದ ಕ್ಯಾಥರೀನ್ ಬ್ರಿನ್ಸನ್ ಹೇಳಿದ್ದಾರೆ. "ಪ್ರವಾಸಿಗರಿಗೆ ಈ ಕಲೆಯನ್ನು ಬಹಳ ಆಪ್ತವಾಗಿ ಮತ್ತು ವಿಶಿಷ್ಟವಾಗಿ ನೋಡುವ ಅವಕಾಶ ಒದಗಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಬಾತ್‌ರೂಂ ಕೋಣೆಯ ಹೊರಗೆ ಇರುವ ಕಾವಲುಗಾರನ ಪ್ರಕಾರ ಶೌಚದ ಬೆಲೆಯನ್ನು ನಮೂದಿಸಲಾಗಿಲ್ಲ.
ಇದು ದುಬಾರಿ ಆಡಂಬರದ ವಸ್ತುವಾಗಿದ್ದರೂ ಸಾರ್ವಜನಿಕರಿಗೂ ಅದನ್ನು ಬಳಸುವ ಅವಕಾಶ ಸಿಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಶೌಚಕಲೆಯನ್ನು ವಿಮರ್ಶಾತ್ಮಕವಾಗಿಯೂ ಮತ್ತು ಆದರ್ಶವಾಗಿಯೂ ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಕೊಡಲಾಗಿದೆ.
ಕೃಪೆ: gulfnews.com





