ಕಾಶ್ಮೀರದಲ್ಲಿ ಪೊಲೀಸರ ಪೆಲೆಟ್ ಗನ್ ಹೊಡೆತಕ್ಕೆ ಬಾಲಕ ಬಲಿ

ಶ್ರೀನಗರ, ಸೆ.17: ಭದ್ರಾತಾ ಪಡೆಗಳ ಪೆಲೆಟ್ ಗನ್‌ನಿಂದ ಹಾರಿದ ಪೆಲೆಟ್‌ಗಳಿಂದಾಗಿ ಗಂಭೀರ ಗಾಯಗೊಂಡಿದ್ದ ಹದಿನಾರರ ಹರೆಯದ ಬಾಲಕನೊಬ್ಬ ಇಂದು ಮೃತಪಟ್ಟಿದ್ದಾನೆ.
ಮೊಯಿಮ್ ಅಲ್ತಾಫ್ ಎಂಬಾತನು ಹರ್ವಾನ್‌ನಲ್ಲಿ ಭದ್ರತಾ ಪಡೆಗಳ ಪೆಲೆಟ್ ಗನ್‌ನಿಂದ ಸಿಡಿದ ಪೆಲೆಟ್‌ನಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಅಲ್ತಾಫ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಲ್ತಾಫ್ ದೇಹದ ಮೇಲೆ ಹಲವು ಪೆಲೆಟ್ ಗಾಯವಾಗಿದೆ. ಆದರೆ ಭದ್ರತಾ ಪಡೆ ತಾನು ದೂರದಿಂದ ಪೆಲೆಟ್ ಹಾರಿಸಿರುವುದಾಗಿ ಇದರಿಂದ ಬಾಲಕ ಅಲ್ತಾಫ್ ಸಾವು ಸಂಭವಿಸಿರುವ ಸಾಧ್ಯತೆ ಇಲ್ಲ. ಆತನ ಸಾವಿಗೆ ಬೇರೆ ಏನಾದರು ಕಾರಣವಿರಬೇಕು ಎಂದು ಹೇಳಿದ್ದಾರೆ.
Next Story





