ಜಗದ್ವಿಖ್ಯಾತ ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಗಮನ ಸೆಳೆದ ಹಿಜಾಬ್

ನ್ಯೂಯಾರ್ಕ್,ಸೆಪ್ಟಂಬರ್ 17: ಮುಸ್ಲಿಮ್ ಮಹಿಳೆಯರ ವಸ್ತ್ರಧಾರಣೆ ರೀತಿಗಳ ಬಗ್ಗೆ ಎಷ್ಟೇ ವಿವಾದಗಳು ಇಂದು ಹರಿದಾಡುತ್ತಿದ್ದರೂ ಶುಕ್ರವಾರ ನ್ಯೂಯಾರ್ಕ್‌ನಲ್ಲಿ ನಡೆದ ಹಿಜಾಬ್ ಫ್ಯಾಶನ್ ಪೆರೇಡ್ ಮಾಧ್ಯಮಗಳ ಗಮನ ಸೆಳೆದಿದೆ ಎಂದು ವರದಿಯಾಗಿದೆ. ಇಂಡೊನೇಷ್ಯದ ಡಿಸೈನರ್ ಅನೀಸ್ ಹಸೀಬುವಾನ್ ಹೊಸರೀತಿಯಲ್ಲಿ ರೂಪಿಸಿದ ಹಿಜಾಬ್‌ಗಳನ್ನು ರೂಪದರ್ಶಿಯರ ತಂಡ ತೊಟ್ಟು ನ್ಯೂಯಾರ್ಕ್ ಫ್ಯಾಶನ್ ವಾರಾಚರಣೆಯಲ್ಲಿ ಶುಕ್ರವಾರ ರ್ಯಾಂಪ್‌ನಲ್ಲಿ ನಡೆದಿದ್ದಾರೆ. ನ್ಯೂಯಾರ್ಕ್‌ನ ಫ್ಯಾಶನ್ ವಾರಾಚರಣೆಯಲ್ಲಿ ಹಿಜಾಬ್ ಮಾಡೆಲ್‌ಗಳಿಗೆ ಪ್ರವೇಶ ಲಭಿಸಿರುವುದು ಇದೇ ಮೊದಲಸಲ ಎನ್ನುವ ಕಾರಣಕ್ಕಾಗಿ ಈ ಫ್ಯಾಶನ್ ಪೆರೇಡ್‌ನ್ನುಐತಿಹಾಸಿಕ ಫ್ಯಾಶನ್ ಪೆರೇಡ್ ಎಂದು ಹಲವರು ಬಣ್ಣಿಸಿದ್ದಾರೆಂದು ವರದಿ ತಿಳಿಸಿದೆ.
ಫ್ಯಾಶನ್ ಡಿಸೈನ್‌ಗಾರ್ತಿ ಅನೀಸಾ ರೂಪಿಸಿದ ಹಿಜಾಬ್ ಮತ್ತು ಅದರ ಜೊತೆಗೆ ಧರಿಸಬಹುದಾದ ಸ್ಕರ್ಟ್‌ಗಳು ಪೈಜಾಮಗಳೆಲ್ಲವೂ ಗಮನಸೆಳೆದಿವೆ. ಹಿಜಾಬ್ ಕುರಿತು ತಪ್ಪುಕಲ್ಪನೆಗಳನ್ನು ದೂರೀಕರಿಸಲು, ಇತರ ವಸ್ತ್ರಗಳಂತೆ ಹಿಜಾಬ್‌ಗೂ ಜನಪ್ರಿಯತೆ ತಂದು ಕೊಡಲು, ಸಾಂಸ್ಕೃತಿಕ ಗೊಂದಲವನ್ನು ದೂರೀಕರಿಸಲು ಇಂತಹ ವೇದಿಕೆಗಳನ್ನು ಉಪಯುಕ್ತಗೊಳಿಸಲು ಆಯೋಜಕರು ಶ್ರಮಿಸಿದ್ದಾರೆಂದು ಅಮೆರಿಕ ಮೂಲದಕ ಮಿಲಾನಿ ಅಲ್‌ತುರ್ಕಿ ಅಭಿಪ್ರಾಯ ಪ್ರಕಟಿಸಿದ್ದಾರೆ.
ಅಮೆರಿಕದ ಡಿಸೈನರ್‌ಗಳು ಮಿತಬೆಲೆಯ ಮತ್ತು ಮಹಿಳೆಯರ ಮನಸ್ಥಿತಿಗೆ ಹೆಚ್ಚು ಒಪ್ಪುವ ಹೊಸ ಡಿಸೈನ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಹಿಜಾಬ್ ಫ್ಯಾಶನ್ ಸೃಜನಾತ್ಮಕವಾದ ಹೊಸ ಆಶಾಕಿರಣವಾಗಿದೆ ಎಂದು ಮಿಲಾನಿ ಹೇಳಿದ್ದಾರೆಂದು ವರದಿ ತಿಳಿಸಿದೆ.







