ಸಂಬಂಧಿಕರ ಮನೆಗೆ ಹೋಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಮಂಜೇಶ್ವರ, ಸೆ.17: ಸಂಬಂಧಿಕರ ಮನೆಗೆ ತೆರಳಿದ್ದ ಯುವಕನೋರ್ವನ ಮೃತದೇಹ ಬಾವಿಯೊಳಗೆ ಪತ್ತೆಯಾದ ಘಟನೆ ಉಪ್ಪಳದಿಂದ ವರದಿಯಾಗಿದೆ. ಮೃತನನ್ನು ವಿಟ್ಲ ನಿವಾಸಿ ಕೂಲಿ ಕಾರ್ಮಿಕ ಗಣೇಶ್(28) ಎಂದು ಗುರುತಿಸಲಾಗಿದೆ. ಗಣೇಳ್ ನಿನ್ನೆ ಮೀಯಪದವಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ. ಅಲ್ಲಿ ರಾತ್ರಿ ಊಟ ಮುಗಿಸಿದ ಬಳಿಕ ಗಣೇಶ್ ನಾಪತ್ತೆಯಾಗಿದ್ದರು. ಮನೆಯವರು ಗಣೇಶ್‌ಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಯಲ್ಲಿ ಗಣೇಶ್‌ರ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆಯೇ, ಆಕಸ್ಮಿಕವೋ ಅಥವಾ ಕೊಲೆಯೋ ಎಂಬುದು ತಿಳಿದುಬಂದಿಲ್ಲ.
Next Story





