7ವರ್ಷದ ಬಾಲಕಿಯ ಅತ್ಯಾಚಾರಗೈದ ಪ್ರಕರಣ: ಗಲ್ಲುಶಿಕ್ಷೆ ರದ್ದುಪಡಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಸೆಪ್ಟಂಬರ್ 17: ಮಧ್ಯಪ್ರದೇಶದ ಜಬಲ್‌ಪೂರ್‌ನಲ್ಲಿ ಏಳು ವರ್ಷ ವಯಸ್ಸಿನ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಂದು ಹಾಕಿದ್ದ ಪ್ರಕರಣದಲ್ಲಿ ಆರೋಪಿಗೆ ಕೆಳಕೋರ್ಟು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ ಎಂದು ವರದಿಯಾಗಿದೆ. ಈತನಿಗೆ 25ವರ್ಷ ಜೈಲುಶಿಕ್ಷೆಯನ್ನು ಕೋರ್ಟ್ ವಿಧಿಸಿದ್ದು, ಅಪರೂಪದಲ್ಲಿಅಪರೂಪ ಎಂಬ ಶ್ರೇಣಿಗೆ ಸೇರಿದ ಪ್ರಕರಣ ಇದಲ್ಲ ಎಂದು ಜಸ್ಟಿಸ್ ಜೆ. ಚೆಲಮೇಶ್ವರ್, ಶಿವಕೀರ್ತಿ ಸಿಂಗ್, ಎ.ಎಂ. ಸಪ್ರೆಯವರಿದ್ದ ಪೀಠ ಹೇಳಿದೆ. 2011ರಲ್ಲಿ ಪಂಚಂ ಲೋಧಿ ಯಾನೆ ಡಾಟ್ಟು ಲೋಧಿ ಎಂಬಾತ ಬಾಲಕಿಯನ್ನು ಅಪಹರಿಸಿ ಕೊಲೆಗೈದಿದ್ದ. ಸೌಮ್ಯಾ ಕೊಲೆ ಪ್ರಕರಣದಲ್ಲಿ ಗೋವಿಂದಚಾಮಿಗೆ ಗಲ್ಲುಶಿಕ್ಷೆ ರದ್ದು ಪಡಿಸಿದ ಬೆನ್ನಿಗೆ ಸುಪ್ರೀಂ ಕೋರ್ಟ್ ಇದಕ್ಕೆ ಸಮಾನವಾದ ಇನ್ನೊಂದು ತೀರ್ಪನ್ನು ನೀಡಿದೆ. ಹದಿನಾಲ್ಕುವರ್ಷ ಜೈಲುಶಿಕ್ಷೆ ಅನುಭವಿಸಿ ಅಪರಾಧಿ ಹೊರಗೆ ಬಂದರೆ ಮೊದಲಿನಂತಹ ಕೃತ್ಯ ಎಸಗುವ ಸಾಧ್ಯತೆ ಇರುವುದರಿಂದ 25ವರ್ಷ ಜೈಲು ಶಿಕ್ಷೆ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟು ತಿಳಿಸಿದೆ.ಶಿಕ್ಷಾವಧಿ ಪೂರ್ತಿಯಾಗುವ ಮೊದಲು ಆರೋಪಿಯನ್ನುಬಿಡುಗಡೆಗೊಳಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ ಎಂದು ವರದಿ ತಿಳಿಸಿದೆ.





