ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಶ್ವ ದಾಖಲೆಯ ಕೇಕ್

ಹೊಸದಿಲ್ಲಿ, ಸೆ.17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ 66ನೆ ವರ್ಷಕ್ಕ ಕಾಲಿರಿಸಲಿದ್ದಾರೆ. ಮೋದಿ ಅವರಿಗೆ ಶುಭಾಶಯ ಕೋರಿ ಗುಜರಾತ್‌ನ ಬೇಕರಿಯೊಂದು3,750 ಕೆ.ಜಿ.ತೂಕದ ಕೇಕ್ ತಯಾರಿಸಿದೆ.ಇದೊಂದು ವಿಶ್ವದಾಖಲೆಯಾಗಿದೆ.
ಸೂರತ್‌ನ ಅತಲ್ ಬೇಕರಿ , ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ಶಕ್ತಿ ಫೌಂಡೇಶನ್ ಈ ದೊಡ್ಡ ಕೇಕ್ ನ್ನು ತಯಾರಿಸಿದೆ. ಏಳು ಅಡಿ ಎತ್ತರದ ಈ ಕೇಕ್ 3,750 ತೂಕವನ್ನು ಹೊಂದಿದೆ. ಬುಡಕಟ್ಟು ಜನಾಂಗದ ಬಾಲಕಿಯೊಬ್ಬಳು ಈ ಕೇಕನ್ನು ಕತ್ತರಿಸಲಿದ್ದಾಳೆ.ಪ್ರಧಾನಿ ಮೋದಿ ಮತ್ತು ಅವರ ಜನಪರ ಯೋಜನೆ 'ಬೇಟಿ ಬಚಾವೋ ಮತ್ತು ಬೇಟಿ ಪಡಾವೋ' ಯೋಜನೆಯನ್ನೂ ಅಭನಂದಿಸಲು ಈ ಕೇಕ್ ತಯಾರಿಸಲಾಗಿದೆ.
ಮೂವತ್ತು ಬಾಣಸಿಗರ ತಂಡ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಈ ಕೇಕ್ ತಯಾರಿಸಿದೆ. ವಿಶ್ವದ ಅತಿ ದೊಡ್ಡ ಪಿರಮಿಡ್ ಕೇಕ್ ಆಗಿರುವ ಇದು ಈ ಹಿಂದಿನ ವಿಶ್ವದಾಖಲೆಯನ್ನು ಮುರಿಯಲಿದೆ. ಗಿನ್ನೀಸ್ ದಾಖಲೆ ನಿರ್ಮಿಸಲಿದೆ.
Next Story





