ಇನ್ಶೂರೆನ್ಸ್ ಹಣಕ್ಕೆ ತನ್ನ ಅಂಗಡಿಗೆ ಬೆಂಕಿ ಹಚ್ಚಿದ ಮಾಲೀಕ ...!

ಬೆಂಗಳೂರು, ಸೆ.17: ಇಲ್ಲಿನ ಚಿಕ್ಕಪೇಟೆಯ ಮಾಯಾ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಮಾಲೀಕನು ಇನ್ಶೂರೆನ್ಸ್ ಹಣ ಪಡೆಯುವ ಉದ್ದೇಶಕ್ಕಾಗಿ ಸ್ನೇಹಿತರ ನೆರವಿನಿಂದ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಮಾಯಾ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಆದರೆ ಅಂಗಡಿ ಮಾಲೀಕ ನರೇಂದ್ರ ಲಾಲ್ ಚೌಧರಿ ಇನ್ಶೂರೆನ್ಸ್ ಹಣ ಪಡೆಯುವ ಉದ್ದೇಶಕ್ಕಾಗಿ ಯುಪಿಎಸ್‌ನ್ನು ಸ್ಫೋಟಿಸಿ ಅಂಗಡಿಗೆ ಬೆಂಕಿ ಬೀಳಲು ತಂತ್ರ ರೂಪಿಸಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ನರೇಂದ್ರ ಈ ಕೃತ್ಯ ನಡೆಸಿರುವುದು ಪೊಲೀಸರು ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ. ನರೇಂದ್ರ ಲಾಲ್ ತನ್ನ ಸ್ನೇಹಿತರಾದ ಗಜೇಂದ್ರ ಮತ್ತು ಅರುಣ್ ಕುಮಾರ್ ನೆರವಿನಲ್ಲಿ ಅಂಗಡಿಗೆ ಬೆಂಕಿ ಹಚ್ಚಿಸಿದ್ದರು.. ಈ ಘಟನೆಯಲ್ಲಿ ನರೇಂದ್ರ ಸ್ನೇಹಿತ ಮಂಡ್ಯ ಜಿಲ್ಲೆಯ ಗಜೇಂದ್ರ ಸಜೀವ ದಹನವಾಗಿದ್ದಾರೆ. ಅರುಣ್ ಕುಮಾರ್‌ಗೆ ಗಾಯವಾಗಿತ್ತು.
ನೆಲ ಮಹಡಿಯಲ್ಲಿ ಯುಪಿಎಸ್ ಸ್ಫೋಟಗೊಂಡು ಬೆಂಕಿ ಅಂಗಡಿಗೆ ಹತ್ತಿಕೊಂಡಿತ್ತು. ಬಳಿಕ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು. ನೆಲ ಮಹಡಿಯಲ್ಲಿದ್ದ ಎರಡು ಬೈಕ್ ಮತ್ತು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿತ್ತು. ಎನ್ನಲಾಗಿದೆ.ಬೆಂಕಿಗೆ ನಾಲ್ಕು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ..ಈ ದುರಂತದಲ್ಲಿ ಓರ್ವ ಮೃತಪಟ್ಟಿದ್ದ , ಇನ್ನೊಬ್ಬನಿಗೆ ಗಾಯವಾಗಿತ್ತು. 2 ಬೈಕ್‌ಗಳು ಸುಟ್ಟು ಕರಕಲಾಗಿತ್ತು..
ಅಗ್ನಿ ಶಾಮಕದಳದ 9 ವಾಹನಗಳು ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು.





