ಚಿಕುನ್ ಗುನ್ಯಾ: ಭಯ ಬೇಡ, ಜಾಗೃತಿ ಇರಲಿ
ಈ ಲಕ್ಷಣಗಳು ನಿಮಗಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ
ಆಡಿಯಸ್ ಈಜಿಪ್ಟಿ ಸೊಳ್ಳೆ ಹರಡುವ ವೈರಲ್ ಸೋಂಕೇ ಚಿಕುನ್ ಗುನ್ಯಾ. ಇದು 2006ರಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡು, 1,500,000 ಪ್ರಕಣಗಳು ದಾಖಲಾಗಿ ಹಲವು ಸಾವುಗಳೂ ಸಂಭವಿಸಿದ್ದವು. ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 12 ಮಂದಿ ರೋಗದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ದೆಹಲಿ ಸರ್ಕಾರವು ಈ ರೋಗಿಗಳು ಚಿಕುನ್ ಗುನ್ಯಾದಿಂದಲೇ ಸಾವನ್ನಪ್ಪಿದ್ದಾರೆಯೇ ಅಥವಾ ಸೊಳ್ಳೆಯಲ್ಲದ ಕಾರಣಗಳಿಂದ ಬಂದ ಸೋಂಕಿಗೆ ಸಾವು ಸಂಭವಿಸಿದೆಯೇ ಎಂದು ಪರೀಕ್ಷಿಸುತ್ತಿದ್ದಾರೆ. ಚಿಕುನ್ ಗುನ್ಯಾ ರೋಗ ವೃದ್ಧರು ಮತ್ತು ವಯಸ್ಕರಲ್ಲಿ ಹೆಚ್ಚು ಸಮಸ್ಯೆ ತರುತ್ತದೆ. ಮೂಳೆಗಳ ಸಂಧಿಗಳಿಗೇ ಸೋಂಕು ತರುವ ಈ ರೋಗದ ಪತ್ತೆ ಹೇಗೆ ಎನ್ನುವ ಕೆಲವು ವಿವರಗಳು ಇಲ್ಲಿವೆ.
► ಅಧಿಕ ರೋಗದ ಚಿಹ್ನೆ, ಸಂಧಿಯೂತ ಮತ್ತು ನೋವು (ಕೆಳಬೆನ್ನು, ಹಿಮ್ಮಡಿ, ಮೊಳಕಾಲು, ನಾಡಿಗಳು ಮತ್ತು ಬೆರಳುಗಳು), ಬರೆಗಳು, ತಲೆನೋವು, ವಾಂತಿ ಮತ್ತು ಸುಸ್ತು.
► ಅಧಿಕ ಜ್ವರ ಮತ್ತು ಸಂಧಿ ನೋವು ಸಾಮಾನ್ಯ ಚಿಹ್ನೆಗಳು
►ಮೊಣಕಾಲು, ಹಿಮ್ಮಡಿಗಳು ಮತ್ತು ಮೊಣಕೈಗಳ ಚಲನೆ ಬಹಳ ಕಷ್ಟವಾಗುತ್ತದೆ. ತಾಂಜಾನಿಯ ಮತ್ತು ಮೊಝಾಂಬಿಕ್‌ಗಳಲ್ಲಿ ಇದನ್ನು ಕಿಮಕೊಂಡೆ ಭಾಷೆಯಲ್ಲಿ ಚಿಕುನ್‌ಗುನ್ಯಾ ರೋಗ ಎಂದು ಕರೆದಿದ್ದಾರೆ. ಚಿಕುನ್ ಗುನ್ಯಾ ಎಂದರೆ ನಿಯಂತ್ರಣಕ್ಕೆ ಒಳಪಡುವುದು ಎಂದರ್ಥ. ಸೋಂಕು ತಗಲಿದವರು ಗಂಭೀರ ಸಂಧಿ ನೋವು ಬಂದು ನಡೆಯಲು ಕಷ್ಟಪಡುತ್ತಾರೆ.
►ಬಹಳಷ್ಟು ಮಂದಿ ವಾರದೊಳಗೆ ಗುಣವಾದರೂ ಸಂಧಿ ನೋವು ತಿಂಗಳಾನುಗಟ್ಟಲೆ ಇರುತ್ತದೆ.
►ಚಿಕುನ್ ಗುನ್ಯಾ ರೋಗ ತಗಲಿದ ಜನರು ಇರುವ ಕಡೆ ನೀವೂ ನೆಲೆಸಿದ್ದರೆ ಸೋಂಕು ತಗಲಬಹುದು. ಈ ಜ್ವರ ಮೂರು ದಿನ ಇರುತ್ತದೆ. ಆದರೆ ವೈರಸ್ ವಾರದವರೆಗೆ ದೇಹದಲ್ಲಿರುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬನಿಗೆ ರೋಗ ಹರಡಬಹುದು.
► ದೃಷ್ಟಿ ದೋಷ, ಸುಸ್ತು, ಭ್ರಾಂತಿ, ಸನ್ನಿ, ನಿರಂತರ ವಾಂತಿಯಾಗಿ ಉಸಿರಾಟ ಕಷ್ಟವಾದಲ್ಲಿ ತಕ್ಷಣವೇ ಆಸ್ಪತ್ರೆಗೆ ಸೇರಬೇಕು.
► ಆಗಷ್ಟೇ ಹುಟ್ಟಿದ ಮಗುವಿಗೆ ಮತ್ತು ವಯಸ್ಕರಿಗೆ ಬೇಗನೇ ರೋಗ ಬರುತ್ತದೆ. ಮಧುಮೇಹ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆ ಇದ್ದವರಿಗೆ ಇನ್ನೂ ಬೇಗನೇ ರೋಗ ತಗಲುತ್ತದೆ.
► ಚಿಕುನ್ ಗುನ್ಯಾ ಸೋಂಕಿನಿಂದ ಪಾರಾದಲ್ಲಿ ಮತ್ತೆ ಆ ರೋಗ ತಗಲುವುದಿಲ್ಲ ಎನ್ನಲಾಗುತ್ತದೆ.
ಕೃಪೆ: www.hindustantimes.com