ಮಿಸ್ಬಾ ಮಹಿಳಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ, ನೂತನ ಆಡಳಿತ ಕಚೇರಿ ಉದ್ಘಾಟನೆ

ಸುರತ್ಕಲ್ ಸೆ.17: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅದ್ಯತೆಯನ್ನು ನೀಡಬೇಕೆಂದು ಎಂದು ರಾಜೀವಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ ಯು.ಟಿ ಇಫ್ತಿಕಾರ್ ನುಡಿದರು.
ಅವರು ಕೃಷ್ಣಾಪುರದ ಮಿಸ್ಬಾ ನಾಲೇಜ್ ಫೌಂಡೇಶನ್ ಸಂಸ್ಥೆಯ ಅಧೀನದಲ್ಲಿರುವ ಮಿಸ್ಬಾ ಮಹಿಳಾ ಕಾಲೇಜ್‌ನಲ್ಲಿ ನೂತನ ಗ್ರಂಥಾಲಯ, ನೂತನ ಆಡಳಿತ ಕಚೇರಿ, ಕ್ಯಾಂಟಿನ್ ಸೌಲಭ್ಯ, ಜನರೇಟರ್ ಸೌಲಭ್ಯಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ನಿಟ್ಟಿನಲ್ಲಿ ವಿಜ್ಞಾನ ಕೋರ್ಸ್‌ಗಳ ಸ್ಥಾಪನೆಗೆ ತನ್ನ ಸಂಪೂರ್ಣ ಸಹಕಾರವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಎಂ ಮಮ್ತಾಝ್ ಅಲಿ ಮಾತನಾಡಿ ಕಾಲೇಜಿನ ವಿಸ್ತರಿತ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನಲ್ಲಿ ಸರ್ವಸಮುದಾಯದ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದ್ದು ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು. ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿ ಇಲ್ಲಿ ಉನ್ನತ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸುವ ಇರಾದೆ ವ್ಯಕ್ತಪಡಿಸಿದರು.
ಸೌದಿ ಅರೇಬಿಯಾದ ಎಕ್ಸ್ ಪರ್ಟ್ಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಶೈಖ್ ಕರ್ನಿರೆ ಶಾಲಾ ಜನರೇಟರ್ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಅನಿವಾಸಿ ಭಾರತೀಯ ಇಸ್ಮಾಯಿಲ್ ಉಳ್ಳಾಲ್, ವೈಟ್ ಸ್ಟೋನ್ ಸಂಸ್ಥೆಯ ಆಡಳಿತ ನಿರ್ದೇಶಕ ಶರೀಫ್ ಜೋಕಟ್ಟೆ, ಬ್ಯಾರಿ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಮುಹಮ್ಮದ್ ಆಲಿ ಉಚ್ಚಿಲ, ಶೈಖ್ ಬಾವ, ಇಕ್ಬಾಲ್ ಬೊಲ್ಮಾರ್, ಹಮೀದ್ ಪಡುಬಿದ್ರೆ, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್ , ಮುಹಮ್ಮದ್ ಕಮ್ಮರಡಿ, ಫಕ್ರುದ್ದೀನ್ ಬಾವ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಹಮ್ಮದ್ ಹಾರಿಸ್, ಟಿ.ಹೆಚ್.ಮೆಹಬೂಬ್, ಎ.ಎಮ್. ಶುಹೈಬ್, ಇಮ್ತಿಯಾಝ್, ಸಂಸ್ಥೆಯ ಪ್ರಾಚಾರ್ಯ ಮುಹಮ್ಮದ್ ಆರೀಫ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಸನಾಹ್ ಹುಸೈನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಅಶಯ ಮಾತುಗಳನ್ನಾಡಿದರು, ಕಾರ್ಯಕ್ರಮವನ್ನು ಸಂಚಾಲಕ ಬಿ.ಎ.ನಝೀರ್, ರಫೀಕ್ ಮಾಸ್ಟರ್ ನಿರೂಪಿಸಿದರು.







