ಮಂಗಳೂರಿಗೆ ಹಾಜಿಗಳ ತಂಡ ತಲುಪುವ ವೇಳಾಪಟ್ಟಿ

ಮಂಗಳೂರು, ಸೆ.17: ಕೇಂದ್ರ ಹಜ್ ಸಮಿತಿ ವತಿಯಿಂದ ಈ ಸಾಲಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡವರ ಪೈಕಿ ಪ್ರಥಮ ತಂಡ ರವಿವಾರ ಅಪರಾಹ್ನ 2.45ಕ್ಕೆ ಆಗಮಿಸಲಿದೆ.ರವಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಥಮ ತಂಡದಲ್ಲಿ 152 ಮಂದಿ ಹಾಜಿಗಳಿದ್ದಾರೆ. ಸೆಪ್ಟಂಬರ್ 19ರಂದು ಬೆಳಗ್ಗೆ 11.05ಕ್ಕೆ 154 ಮಂದಿ ಹಾಜಿಗಳನ್ನೊಳಗೊಂಡ ಎರಡನೆ ತಂಡ, 20ರಂದು ಮಧ್ಯಾಹ್ನ 12.15ಕ್ಕೆ 152 ಮಂದಿ ಹಾಜಿಗಳನ್ನೊಳಗೊಂಡ ಮೂರನೆ ತಂಡ ಹಾಗೂ 21ರಂದು 9:55ಕ್ಕೆ 152 ಮಂದಿ ಹಾಜಿಗಳ ನಾಲ್ಕನೆ ತಂಡ ಮಂಗಳೂರಿಗೆ ಆಗಸಮಿಸಲಿದೆ ಎಂದು ಪ್ರಕಟನೆ ತಿಳಿಸಿದೆ.ಮಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 4ರಿಂದ ಆಗಸ್ಟ್ 7ರವರೆಗೆ ಹಜ್ ಯಾತ್ರಿಕರ ನಾಲ್ಕು ತಂಡಗಳು ಪ್ರಯಾಣ ಬೆಳೆಸಿದ್ದವು.
Next Story





