ಸರಕಾರ ನೀಡುವ ಅನುದಾನಕ್ಕೆ ಸರಿದೂಗಿಸಿ ದಸರಾ ಮಾಡಿ: ಸಚಿವ ಸೀತಾರಾಮ್ ಸಲಹೆ
ದಸರಾ ಪೂರ್ವಭಾವಿ ಸಭೆೆ

ಮಡಿಕೇರಿ ಸೆ. 17: ಸರಕಾರ ಬಿಡುಗಡೆ ಮಾಡುವ ಅನುದಾನಕ್ಕೆ ಅನುಗುಣವಾಗಿ ದಸರಾ ಖರ್ಚು ವೆಚ್ಚವನ್ನು ಸರಿದೂಗಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್ ಅವರು, ಮಡಿಕೇರಿ ದಸರಾ ಜನೋತ್ಸವ ಸಮಿತಿಗೆ ಸಲಹೆ ನೀಡಿದ್ದಾರೆ.
ಐತಿಹಾಸಿಕ ದಸರಾ ಜನೋತ್ಸವಕ್ಕೆ ಹೆಚ್ಚಿನ ಅನುದಾನ ಕೋರಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೆ. 22ರಂದು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಇಂದು ಜಿಲ್ಲಾಡಳಿತದ ಭವನದ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಸಭೆೆಯಲ್ಲಿ ನಿರ್ಧರಿಸಲಾಯಿತು.
ನಗರ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಮಾತನಾಡಿ, ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವರು ಈಗಾಗಲೇ ತಾನು 1 ಕೋಟಿ ರೂ.ವನ್ನು ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಿಕೊಂಡಿದ್ದೇನೆ. ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಸರಿದೂಗಿಸಿಕೊಂಡು ಎರಡೂ ದಸರಾ ಸಮಿತಿಗಳು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.
ಸಮಿತಿಯ ಹಿರಿಯ ಗೌರವಾಧ್ಯಕ್ಷ ಎಂ. ಬಿ. ದೇವಯ್ಯ ಅವರು ಮಾತನಾಡಿ 1 ಮಡಿಕೇರಿ ದಸರಾಕ್ಕೆ 1.50 ಕೋಟಿ ರೂ.ಮತ್ತು ಗೋಣಿಕೊಪ್ಪ ದಸರಾಕ್ಕೆ ಪ್ರತ್ಯೇಕ ಅನುದಾನವನ್ನು ಕೊಡಿಸುವಂತೆ ಒತ್ತಾಯಿಸಿದರು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಉಸ್ತುವಾರಿ ಸಚಿವರೊಂದಿಗೆ ಕೊಡಗಿನ ಶಾಸಕರು ಹಾಗೂ ದಸರಾ ಸಮಿತಿಗಳ ಪದಾಧಿಕಾರಿಗಳ ನಿಯೋಗ ತೆರಳಿ ಮುಖ್ಯಮಂತ್ರಿ ಅವರಲ್ಲಿ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು. ಇದಕ್ಕೆ ಸಮ್ಮತಿಸಿದ ಉಸ್ತುವಾರಿ ಸಚಿವರು ಸೆ.22 ರಂದು ಜಿಲ್ಲೆಯ ಎಲ್ಲ ಶಾಸಕರು ಮತ್ತು ಮಡಿಕೇರಿ ಗೋಣಿಕೊಪ್ಪ ದಸರಾ ಸಮಿತಿಯ ಪ್ರಮುಖ ಪದಾಧಿಕಾರಿಗಳು ಮುಖ್ಯಮಂತ್ರಿ ಬಳಿ ಬರುವಂತೆ ಹೇಳಿದರು.
ನಗರಸಭಾ ಆಯುಕ್ತೆ ಬಿ.ಬಿ.ಪುಷ್ಪಾವತಿ ಅವರು, ದಸರಾ ಉತ್ಸವದ ಕಾರ್ಯಕ್ರಮಗಳನ್ನು ಸಭೆಯ ಮುಂದಿಟ್ಟಾಗ ದಸರಾ ಉತ್ಸವಗಳಿಗೆ ಅಗತ್ಯವಿರುವ ಟೆಂಡರ್ ಪ್ರಕ್ರಿಯೆ ರೂಪಿಸುವಂತೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿದರು.
ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಕಾವೇರಮ್ಮ ಸೋಮಣ್ಣ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದರು.
ವೆಬ್‌ಸೆ
ಟ್‌ಗೆ ಚಾಲನೆ: ಮಡಿಕೇರಿ ದಸರಾ ಜನೋತ್ಸವದ ವೆಬ್‌ಸೈಟ್‌ಗೆ ನಗರದ ದಸರಾ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ವಿವಿಧ ಪೂಜೆ ಪುರಸ್ಕಾರಗಳೊಂದಿಗೆ ಕಚೇರಿಯನ್ನು ಆರಂಭಿಸಲಾಯಿತು.







