ಸಮಾನತೆಯೇ ಅಂಬೇಡ್ಕರ್ ಕನಸಾಗಿತ್ತು: ನಿವೃತ್ತ ಪ್ರೊ. ವೆಲೇರಿಯನ್ ರೊಡ್ರಿಗಸ್
ವಿಚಾರ ಕಮ್ಮಟ
ಶಿವಮೊಗ್ಗ, ಸೆ. 17: ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಒಂದು ಹೊಸ ದೃಷ್ಟಿಯನ್ನು ಪ್ರತಿಬಿಂಬಿ ಸುವುದರ ಜೊತೆಗೆ ಪ್ರಭುತ್ವ, ನಾಗರಿಕತೆ ಮತ್ತು ಅಸ್ಮಿತೆಯ ಬಗ್ಗೆ ಹೊಸ ಕಲ್ಪನೆಗಳನ್ನು ಹುಟ್ಟು ಹಾಕಿವೆ ಎಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲನಿ ಯದ ನಿವೃತ್ತ ಪ್ರಾಧ್ಯಾಪಕ ವೆಲೇರಿಯನ್ ರೊಡ್ರಿಗಸ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆ ಗಳು, ಭಾಷೆ ಮತ್ತು ಸಮಾಜ ಎಂಬ ವಿಚಾರ ಕಮ್ಮಟದಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಅಂಬೇಡ್ಕರ್ ಪ್ರಜಾಪ್ರಭು ತ್ವವನ್ನು ಒಪ್ಪಿಕೊಂಡಿದ್ದರೂ ಗತಕಾಲವನ್ನು ಅಲ್ಲಗಳೆದಿಲ್ಲ. ಜೊತೆಗೆ ಗತಕಾಲವನ್ನು ಇಂದಿನ ಪರಿಸ್ಥಿತಿಗೆ ಹೋಲಿಸ ಬಾರದು ಎನ್ನು ವುದು ಅವರ ನಿಲುವಾಗಿತ್ತು. ಭಾರತ ಎಂದೆಂದಿಗೂ ಬಲಿಷ್ಠವಾಗಿರಬೇಕು. ಹೀಗಾಗಬೇಕಾದರೆ ಜಾತೀಯತೆ ನಾಶವಾಗಬೇಕೆನ್ನುವುದು ಅವರ ಅಭಿಪ್ರಾಯವಾಗಿತ್ತು ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್. ಗುರುಮೂರ್ತಿ, ದಾರ್ಶನಿಕರ ಬದುಕು ಮತ್ತು ಚಿಂತನೆ ನಮ್ಮ ಭವಿಷ್ಯಕ್ಕೆ ಮಾರ್ಗದರ್ಶಿಯಾಗಬೇಕು. ಅವರ ವಿಚಾರಗಳು ನಮ್ಮಲ್ಲಿ ಹೊಸ ಚಿಂತನೆಗೆ ಕಾರಣವಾಗಬೇಕು. ನಮ್ಮೆಳಗೆ ಅವರು ಮತ್ತೆ ಹುಟ್ಟಿಬರಬೇಕು ಎಂದರು.
ಅಂಬೇಡ್ಕರನ್ನು ಈ ಹಿಂದೆ ತೆಗಳುತ್ತಿದ್ದವರೂ ಸಹ ಈಗ ಹೊಗಳಲಾರಂಭಿಸಿದ್ದಾರೆ. ರಾಜಕೀಯದಲ್ಲಿ ಭಕ್ತಿ ಮತ್ತು ವ್ಯಕ್ತಿಪೂಜೆ ಇರಬಾರದೆಂದು ಅಂಬೇಡ್ಕರ್ ಬಹು ಹಿಂದೆಯೇ ಹೇಳಿದ್ದರು. ಆದರೆ ಇಂದು ಈ ವ್ಯಕ್ತಿ ಪೂಜೆ ತಾಂಡವವಾಡುತ್ತಿದೆ. ವ್ಯಕ್ತಿ ಪೂಜೆ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಕಾಶಕೊಡಬಾರದು ಎಂದರು.
ಮೀಸಲಾತಿಯನ್ನು ಕೇವಲ 10 ವರ್ಷಕ್ಕೆ ನಿಗದಿ ಪಡಿಸಿದ್ದ ಅಂಬೇಡ್ಕರ್ ಇದರಿಂದ ಅಸಮಾನತೆ ನೀಗಿ ಸಮಾನತೆ ಮೂಡಬೇಕು ಎಂದು ಹೇಳಿದ್ದರು. ಆದರೆ ಇದು ಸಾಧ್ಯವಾಗದ ಕಾರಣ ಮೀಸಲಾತಿ ಇಂದು ಮುಂದುವರಿ ಯುವಂತಾಗಿದೆ ಎಂದ ಅವರು, ಜಾತಿ ವ್ಯವಸ್ಥೆಯನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಮಾರ್ಪಡಿಸುವುದು ಕಷ್ಟ ಎನ್ನುವುದನ್ನು ಅವರು ಮನಗಂಡಿದ್ದರು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಸಿ. ಶಿವಣ್ಣ ವಹಿಸಿದ್ದರು. ಯುಜಿಸಿ ಸಂಚಾಲಕ ಪ್ರೊ. ಮೇಟಿ ಮಲ್ಲಿಕಾರ್ಜುನ ಪ್ರಾಸಾ
್ತವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಎನ್. ಕೆ. ವೀಣಾ ಸ್ವಾಗತಿಸಿದರು.







