ಸೆ.19-20; ರಿಯಾಯಿತಿ ದರದಲ್ಲಿ ಥೈರಾಯಿಡ್ ತಪಾಸಣೆ
ಮಂಗಳೂರು,ಸೆ.18:ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವತಿಯಿಂದ ಸೆ.19ಮತ್ತು 20ರಂದು ರಿಯಾಯಿತಿ ದರದಲ್ಲಿ ಥೈರಾಯಿಡ್ ತಪಾಸಣಾ ಚಿಕಿತ್ಸೆ ನೀಡಲಾಗುವುದು.ಹೊರರೋಗಿಗಳ ವಿಭಾಗದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗುವುದು.ಹೆಚ್ಚಿನ ಮಾಹಿತಿಗಾಗಿ ಫಾ.ಮುಲ್ಲಾರ್ ಸ್ವಾಗತಕಾರರ ಕೇಂದ್ರಹಾಗೂ ಓಪಿಡಿ ಶಸ್ತ್ರ ಚಿಕಿತ್ಸಾ ವಿಭಾಗ ರೂ.ನಂಬ್ರ 43 ರನ್ನು ಹಾಗೂ ದೂರವಾಣಿ ಸಂಖ್ಯೆ 0824-2238190 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಮಂಗಳೂರು ಸೆ.17: ಜೈಲ್‌ನಲ್ಲಿದ್ದುಕೊಂಡು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಂಜಿಮೊಗರಿನ ಅನಿಲ್ ಮೊಂತೆರೊ (26) ಮತ್ತು ಅಶುತೋಷ್ ಯಾನೆ ರಹೀಂ ಎಂದು ಗುರುತಿಸಲಾಗಿದೆ.
ಆರೋಪಿಗಳು ಜೈಲ್‌ನಲ್ಲಿದ್ದ ಸಂದರ್ಭದಲ್ಲಿ ನಕಲಿ ಸಿಮ್‌ಗಳನ್ನು ಬಳಸಿ ಮೊಬೈಲ್‌ನ್ನು ಬಳಕೆ ಮಾಡಿದ್ದರೆಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
Next Story





