ಕೆಪಿಎಲ್: ಮಾಯಾಂಕ್ ಶ್ರೇಷ್ಠ ಆಟ ; ಬೆಳಗಾವಿಗೆ ಜಯ

ಹುಬ್ಬಳ್ಳಿ, ಸೆ.17: ಆರಂಭಿಕ ದಾಂಡಿಗ ಮಾಯಾಂಕ್ ಅಗರವಾಲ್ ದಾಖಲಿಸಿದ ಅರ್ಧಶತಕದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ಇಲ್ಲಿ ನಡೆದ ಕೆಪಿಎಲ್ ಟ್ವೆಂಟಿ-20 ಟೂರ್ನಿಯ ಮೂರನೆ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.
ಬೆಳಗಾವಿ ಪ್ಯಾಂಥರ್ಸ್ ತಂಡವು ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್‌ಗೆ ಸೋಲುಣಿಸಿತು. ಮಾಯಾಂಕ್ ಅಗರವಾಲ್ 74 ರನ್(57ಎ, 7ಬೌ,1ಸಿ) ಗಳಿಸಿ ಬೆಳಗಾವಿ ತಂಡದ ಗೆಲುವಿಗೆ ನೆರವಾದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿಗೆ 138 ರನ್ ಗಳಿಸಬೇಕಿದ್ದ ಬೆಳಗಾವಿ ತಂಡ 3 ಎಸೆತಗಳನ್ನು ಬಾಕಿ ಉಳಿಸಿ 5 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ದಾಖಲಿಸಿತು. ಕೆ.ಅಬ್ಬಾಸ್(17) ಎಸ್‌ಕೆ ಜೈನ್ (24) ಮತ್ತು ಪಿ.ದುಬೆ(10) ಎರಡಂಕೆಯ ನೆರವು ನೀಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ ಬುಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.
ಆರ್.ಸಮರ್ಥ್ 64 ರನ್(47ಎ,7ಬೌ) ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 137/7(ಸಮರ್ಥ್ 64, ಅವಿನಾಶ್ 24; ಶರತ್ 15ಕ್ಕೆ 2, ಸಾಕುಜಾ 29ಕ್ಕೆ 2).
ಬೆಳಗಾವಿ ಪ್ಯಾಂಥರ್ಸ್ 19.3 ಓವರ್‌ಗಳಲ್ಲಿ 138/5( ಅಗರವಾಲ್ ಔಟಾಗದೆ 74, ಎಸ್‌ಕೆ ಜೈನ್ 24; ಖಾದಿರ್ 18ಕ್ಕೆ 3).
ಪಂದ್ಯಶ್ರೇಷ್ಠ: ಮಾಯಾಂಕ್ ಅಗರವಾಲ್





