ಶುಚಿಗೊಳಿಸಲು ಚರಂಡಿಗಿಳಿದ ಇಬ್ಬರು ದಲಿತರ ಸಾವು

ಲುಧಿಯಾನಾ, ಸೆ.17: ಚರಂಡಿಯನ್ನು ಸ್ವಚ್ಛಗೊಳಿಸುವ ಸಂದರ್ಭ ವಿಷ ವಾಯು ಸೇವನೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಿಲ್ಲರ್‌ಗಂಜ್ ಪ್ರದೇಶದ ನಿರಂಕಾರಿ ಮೊಹಲ್ಲಾದಲ್ಲಿ ನಡೆದಿದೆ.
ಮೃತಪಟ್ಟವರು ಲುಧಿಯಾನಾ ಪುರಸಭೆಯ ಪೌರಕಾರ್ಮಿಕರಾಗಿದ್ದರು.
ಮೆಹರ್ ಸಿಂಗ್( 40 ವರ್ಷ) ಮತ್ತು ಸೋನು (25 ವರ್ಷ) ಮೃತಪಟ್ಟವರು. ತ್ಯಾಜ್ಯಕಟ್ಟಿಕೊಂಡಿದ್ದ ಚರಂಡಿಯ ದುರಸ್ತಿಗೆಂದು ಇಳಿದಾಗ ಉಸಿರು ಕಟ್ಟಿ ಇವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಪರಿಹಾರ ಧನಕ್ಕೆ ಆಗ್ರಹಿಸಲಾಗುವುದು ಎಂದು ಲುಧಿಯಾನಾ ಕಾರ್ಪೊರೇಶನ್ ಕರ್ಮಾಚಾರಿ ದಳದ ಅಧ್ಯಕ್ಷ ಲಕ್ಷ್ಮಣ್ ದ್ರಾವಿಡ್ ತಿಳಿಸಿದ್ದಾರೆ.
Next Story





