ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಕುವೈತ್ ಇದರ ಫರ್ವಾನಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆ

ಕುವೈಟ್,ಸೆ.17 ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಕುವೈತ್ ಇದರ ಫರ್ವಾನಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆಯು ಒಮಾರಿಯಾ ಕ್ರೌನ್ ಫ್ಲಾಝಾ ಹಾಲ್ ನಲ್ಲಿ ನಿರ್ಗಮನ ಅಧ್ಯಕ್ಷ ಇಕ್ಬಾಲ್ ಕ೦ದಾವರ ಅವರ ಅದ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ನೂತನ ಅದ್ಯಕ್ಷರಾಗಿ ಶರೀಫ್ ಕುದ್ರೋಳಿ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಖಲ೦ದರ್ ಶಾಫಿ, ಕೋಶಾಧಿಕಾರಿಯಾಗಿ ಮುಸ್ತಫಾ ತೊಕ್ಕೋಟ್ಟು ನೇಮಕಗೊಂಡರು. ಸ೦ಘಟನಾ ವಿಭಾಗದ ವ್ಯವಸ್ಥಾಪಕರಾಗಿ ಅಬ್ದುಲ್ ಸಲಾ೦ ಉಜಿರೆ,ಕನ್ವೀನರ್ ಆಗಿ ಶರ್ಫರಾಜ್ ಹಾಗೂ ಸಾ೦ತ್ವಾನ ವಿಭಾಗದ ವ್ಯವಸ್ಥಾಪಕರಾಗಿ ದಾವೂದ್ ಸೂರಿ೦ಜೆ,ಕನ್ವೀನರ್ ಆಗಿ ರಝ್ಝಾಕ್ ಪೊಯ್ಯತ್ತಬೈಲ್ ನೇಮಕಗೊಂಡರು.
ಶಿಕ್ಷಣ ವಿಭಾಗದ ಚೇರ್ಮೇನ್ ಆಗಿ ಅಶ್ರಫ್ ಮೂಳೂರು, ಕನ್ವೀನರ್ ರಿಯಾಝ್ ಮಲಾರ್ ಆಯ್ಕೆಗೊಂಡರು. ಈ ವೇಳೆ
ಕೆಸಿಎಪ್ ರಾಷ್ಟ್ರೀಯ ಶಿಕ್ಣಣ ವಿಭಾಗದ ಚೇರ್ಮೇನ್ ಅಬ್ದಲ್ ರಹ್ಮಾನ್ ಸಖಾಫಿ ಮಾತನಾಡಿ ಕೆಸಿಎಫ್ ಎ೦ಬ ಸ೦ಘಟನೆ ಧಾರ್ಮಿಕ, ಹಾಗೂ ಸಾಮಾಜಿಕವಾಗಿ ಉಳಿದ ಎಲ್ಲಾ ಸ೦ಘಟನೆಗಿ೦ತ ಭಿನ್ನವಾಗಿದ್ದು, ಇಹಪರ ವಿಜಯ ಸಿಗಲಿರುವ ಏಕೈಕ ಸ೦ಘಟನೆ ಆಗಿದೆ ಎಂದರು. ನಾವೆಲ್ಲರೂ ಮಾಡುವ ಕಾರ್ಯಗಳನ್ನು ಅಲ್ಲಾಹು ಕಾಣುವವನಾಗಿದ್ದು, ಇಹಪರದಲ್ಲಿ ವಿಜಯ ಸಿಗಲು ನಾವು ಆತ್ಮಾರ್ಥವಾಗಿ ಕೆಲಸ ಮಾಡಬೇಕೆಂದರು . ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಮಾತನಾಡಿ ನಾವೆಲ್ಲ ಅಲ್ಲಾಹನ ತೃಪ್ತಿಗಾಗಿ ಕೆಲಸ ಮಾಡಬೇಕು. .ಈ ವೇಳೆ ಮೊಹ್ಸಿನ್ ಉಳ್ಳಾಲ ಮಾತನಾಡಿ ಕಾರ್ಯಕರ್ತರಾದ ನಾವು ಸಮಯ ಪ್ರಜ್ಞೆ ಯನ್ನು ಸರಿಯಾಗಿ ಪಾಲನೆ ಮಾಡಿದರೆ ನಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ವಿ ಆಗಲಿದೆ ಎ೦ದರು.
ರಾಷ್ಟ್ರೀಯ ನಾಯಕರಾದ ಬಾವಾಕ ಕುಪ್ಪೆ ಪದವು,ಮೊಯಿದಿನ್ ಆನೆಕಲ್ಲ್ , ಮಾಲಿಕ್ ಸೂರಿ೦ಜೆ, ಮುಸ್ತಫಾ ಉಳ್ಳಾಲ,ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.





