ಪಾಕ್: 8 ಐಸಿಸ್ ಭಯೋತ್ಪಾದಕರ ಸೆರೆ
ಲಾಹೋರ್, ಸೆ. 17: ಪಾಕಿಸ್ತಾನಿ ಪೊಲೀಸರು ಎಂಟು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ.
‘‘ಐಸಿಸ್‌ಗೆ ಸೇರಿದ ಭಯೋತ್ಪಾದಕರು ಲಾಹೋರ್‌ನಲ್ಲಿರುವ ಸರಕಾರಿ ಕಟ್ಟಡಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಹಾಗೂ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದಾರೆ’’ ಎಂಬ ಮಾಹಿತಿಯನ್ನು ಅನುಸರಿಸಿ ನಿನ್ನೆ ಲಾಹೋರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಭಯೋತ್ಪಾದನೆ ನಿಗ್ರಹ ದಳ ಬಂಧಿಸಿತು ಎಂದು ದಳದ ವಕ್ತಾರರೊಬ್ಬರು ಶನಿವಾರ ತಿಳಿಸಿದರು.
ಅವರಿಂದ 1,600 ಕೆಜಿ ಸ್ಫೋಟಕಗಳು, ಸೇಫ್ಟಿ ಫ್ಯೂಸ್ ಮತ್ತು ನಾನ್-ಇಲೆಕ್ಟ್ರಾನಿಕ್ ಡೆಟನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಾಹೋರ್ ಸಮೀಪದ ಗುಜ್ರನ್‌ವಾಲ ಜಿಲ್ಲೆಯ ಚಾನ್ ಕಿಲ ಎಂಬ ಜಿಲ್ಲೆಯಲ್ಲಿ ನಡೆಸಲಾದ ಇನ್ನೊಂದು ದಾಳಿಯಲ್ಲಿ, ಇನ್ನೂ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಲಾಯಿತು ಎಂದರು.
Next Story





