ಚೀನಾ, ತೈವಾನ್ ಚಂಡಮಾರುತಕ್ಕೆ 15 ಮಂದಿ ಬಲಿ
ಬೀಜಿಂಗ್, ಸೆ. 17: ಚೀನಾ ಮತ್ತು ತೈವಾನ್‌ಗಳಲ್ಲಿ ಬೀಸಿದ ಪ್ರಬಲ ಚಂಡಮಾರುತದಲ್ಲಿ ಈ ಎರಡು ದೇಶಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
‘ಮೆರಾಂಟಿ’ ಚಂಡಮಾರುತ ಗುರುವಾರ ಮುಂಜಾನೆ ತೀರಕ್ಕೆ ಅಪ್ಪಳಿಸಿದಂದಿನಿಂದ ಪೂರ್ವದ ಪ್ರಾಂತಗಳಾದ ಫುಜಿಯನ್ ಮತ್ತು ಝೆಜಿಯಂಗ್‌ಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 14 ಮಂದಿ ನಾಪತ್ತೆಯಾಗಿದ್ದರೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ತೈವಾನ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಂಡಮಾರುತದ ಹಾವಳಿ ಮುಗಿಯುವ ಮುನ್ನವೇ ಇನ್ನೊಂದು ಚಂಡಮಾರುತದ ಭಯ ಆವರಿಸಿದೆ. ಚಂಡಮಾರುತ ‘ಮಲಾಕಾಸ್’ ಶನಿವಾರ ತೈವಾನ್‌ಗೆ ಅಪ್ಪಳಿಸಿ ಚೀನಾದತ್ತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Next Story





