ಸೆ.19ರಂದು ಎಂ.ವಿ.ಭಟ್ ಮಧುರಂಗಾನ ಸಂಸ್ಮರಣೆ
‘ಮಧುರಾಯಣ’ದ 3ನೆ ಸಂಪುಟ ಬಿಡುಗಡೆ

ಕಾಸರಗೋಡು, ಸೆ.18: ಹಿರಿಯ ಸಾಹಿತಿ, ಅಂಕಣಗಾರ, ನಿವೃತ್ತ ಅಧ್ಯಾಪಕ, ಸಂಘಟಕ ಎಂ.ವಿ.ಭಟ್ ಮಧುರಂಗಾನ ಅವರ ಮೂರನೆ ವರ್ಷದ ಸಂಸ್ಮರಣೆ ಮತ್ತು ‘ಮಧುರಾಯಣ’ 3ನೆ ಸಂಪುಟ ಬಿಡುಗಡೆ ಕಾರ್ಯಕ್ರಮ ಸೆ.19ರಂದು ಬೀರಂತಬೈಲ್‌ನ ಕನ್ನಡ ಅಧ್ಯಾಪಕ ಭವನದಲ್ಲಿ ಅಪರಾಹ್ನ 2:30ಕ್ಕೆ ನಡೆಯಲಿದೆ.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿ ‘ಮಧುರಾಯಣ’ ಮೂರನೆ ಸಂಪುಟವನ್ನು ಬಿಡುಗಡೆಗೊಳಿಸುವರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾಹಿತಿ ಎಸ್.ಬಿ.ಖಂಡಿಗೆ ಅವರು ಎಂ.ವಿ.ಭಟ್ ಅವರ ಸಂಸ್ಮರಣೆ ಮಾಡಲಿದ್ದಾರೆ.
ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು ಕವಿಯತ್ರಿ ವಿಜಯಲಕ್ಷ್ಮೀ ಶ್ಯಾನುಭೋಗ್ ಕೂಡ್ಲು ಅವರು ಎಂ.ವಿ.ಭಟ್ ಅವರೊಂದಿಗಿನ ಒಡನಾಟದ ಸವಿ ನೆನಪುಗಳನ್ನು ಪ್ರಸ್ತುತ ಪಡಿಸುವರು.
ಮಧುರಕಾನನ ಗೋಪಾಲಕೃಷ್ಣ ಭಟ್, ರಾಮಚಂದ್ರ ಭಟ್ ಮಧುರಕಾನನ ಮತ್ತು ಬಾಲ ಮಧುರಕಾನನ, ಮಧುರಕಾನನ ಗಣಪತಿ ಭಟ್, ಕೆ.ವಿ.ರಮೇಶ್, ಕೆ.ಜಗದೀಶ್ ಕೂಡ್ಲು, ಮನೋರಮಾ ಕೆ.ಎಡನೀರು ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.







