Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುವ...

ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುವ ನಾಲ್ಕು ಪಾನೀಯಗಳು

ವಾರ್ತಾಭಾರತಿವಾರ್ತಾಭಾರತಿ18 Sept 2016 11:13 AM IST
share
ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುವ ನಾಲ್ಕು ಪಾನೀಯಗಳು

ವೇಗವಾಗಿ ಓಡುವ ಈ ಜಗತ್ತಿನಲ್ಲಿ ಬಹಳಷ್ಟು ಮಂದಿ ಅನಾರೋಗ್ಯಕರ ಜೀವನಶೈಲಿಯಿಂದಾಗಿ ವಿಭಿನ್ನ ರೀತಿಯ ವಿಷಗಳಿಗೆ ಒಡ್ಡಿಕೊಳ್ಳುತ್ತಾರೆ. ಫಾಸ್ಟ್ ಫುಡ್, ಕೆಫೇನ್ ಮತ್ತು ಆಲ್ಕೋಹಾಲ್ ಮೊದಲಾದುವು ವಿಶ್ವದ ನಿತ್ಯದ ವ್ಯವಹಾರಗಳ ಭಾಗವಾಗಿ ಜನರ ಹೊಟ್ಟೆಗೆ ಹೋಗುತ್ತಿದೆ. ಈ ವಿಷಯಗಳಿಂದ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರದು ಎಂದು ಕಂಡರೂ ಆರೋಗ್ಯಕ್ಕೆ ಹಾನಿಕರ. ಮುಖ್ಯವಾಗಿ, ಇವುಗಳಿಂದ ಅತೀ ಹೆಚ್ಚು ಪರಿಣಾಮ ಆಗುವುದು ಕಿಡ್ನಿಗಳ ಮೇಲೆ.

ನಮ್ಮ ಕಿಡ್ನಿ 24/7 ಕೆಲಸ ಮಾಡುತ್ತಾ ದೇಹದಲ್ಲಿ ಸೇರಿದ ವಿಷಗಳನ್ನು ಹೊರಗೆ ಹಾಕುತ್ತಿರುತ್ತದೆ. ಆದರೆ ಯಂತ್ರದಂತೆ, ದೇಹದಲ್ಲಿ ವಿಷಗಳ ಅಂಶ ಅಧಿಕವಾದಾಗ ಅದನ್ನು ನಿವಾರಿಸುವುದು ಕಿಡ್ನಿಗೆ ಕಷ್ಟವಾಗುತ್ತದೆ. ಹೀಗಾಗಿ ಸುಸ್ತಾಗಿ ಅದರ ಕಾರ್ಯ ವೈಖರಿ ಕುಸಿಯುತ್ತದೆ. ಇದು ನಡೆದಾಗ ದೇಹವು ವಿವಿಧ ರೀತಿಯ ಸೋಂಕುಗಳು, ಕಿಡ್ನಿಯ ಕಲ್ಲುಗಳು, ಗಡ್ಡೆಗಳು ಮತ್ತು ಸಿಸ್ಟ್‌ಗಳ ಸಮಸ್ಯೆ ಎದುರಿಸುತ್ತದೆ. ಇವುಗಳನ್ನು ಚಿಕಿತ್ಸೆ ಕೊಡದೆ ಸುಮ್ಮನೆ ಬಿಟ್ಟರೆ ಒಂದು ದಿನ ದೇಹದ ಅಂಗಗಳು ಕೆಲಸ ಮಾಡದೆ ನಿಲ್ಲುತ್ತವೆ.

ಹೀಗಾಗುವ ಮೊದಲು ದೇಹವನ್ನು ರಕ್ಷಿಸಿ. ಇದು ಮಾಡಬೇಕೆಂದರೆ ಅನಾರೋಗ್ಯಕರ ಆಹಾರ, ಜೀವನಶೈಲಿಗಳನ್ನು ಬಿಡಬೇಕು. ಸಾಕಷ್ಟು ನೀರು ಕುಡಿಯಬೇಕು. ಕನಿಷ್ಠ 10-12 ಗ್ಲಾಸ್ ನೀರನ್ನು ಕುಡಿದರೆ ಕಿಡ್ನಿ ಸರಿಯಾಗಿ ಫಿಲ್ಟರ್ ಮಾಡುವ ಸಾಮರ್ಥ್ಯ ಪಡೆಯುತ್ತದೆ.

ಹೆಚ್ಚು ನೀರು ಕುಡಿದರೆ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುವುದನ್ನು ಗಮನಿಸಬಹುದು. ಅಂದರೆ ಮೂತ್ರ ಆರೋಗ್ಯಕರ ಫಿಲ್ಟರಿಂಗ್ ವ್ಯವಸ್ಥೆಯನ್ನು ಸೂಚಿಸುತ್ತದೆ. ನೀರಿಗೆ ಬದಲಾಗಿ ಕಾಫಿ, ಕೋಲಾಗಳು ಮತ್ತು ಇತರ ಕಾರ್ಬೋನೇಟ್ ಪಾನೀಯಗಳನ್ನು ಸೇವಿಸುವುದು ಆರೋಗ್ಯಕರವಲ್ಲ. ಆದರೆ ಹಣ್ಣಿನ ರಸಗಳು ಮತ್ತೊಂದು ರೀತಿಯಲ್ಲಿ ಕಿಡ್ನಿಯನ್ನು ಆರೋಗ್ಯಕರವಾಗಿಡುತ್ತವೆ. ಅಲ್ಲದೆ ದೇಹಕ್ಕೆ ಅಗತ್ಯ ವಿಟಮಿನ್‌ಗಳು ಮತ್ತು ಲವಣಗಳನ್ನೂ ಒದಗಿಸುತ್ತವೆ. ಇಲ್ಲಿ ಅಂತಹ ಕೆಲವು ಆರೋಗ್ಯಕರ ಹಣ್ಣಿನ ರಸಗಳ ವಿವರಗಳಿವೆ.

1. ಬೀಟ್‌ರೂಟ್ ಪಾನೀಯ

ಬೀಟ್‌ರೂಟಲ್ಲಿ ಬೀಟೈನ್ ಹೆಚ್ಚಾಗಿರುತ್ತದೆ. ಅಲ್ಲದೆ ಆ್ಯಂಟಿ ಆಕ್ಸಿಡಂಟ್‌ಗಳು ಮತ್ತು ಪೌಷ್ಠ್ಟಿಕಾಂಶಗಳೂ ನೀರಿನ ಅಸಿಡಿಟಿಯನ್ನು ಹೆಚ್ಚಿಸುತ್ತದೆ. ಇದಾದಾಗ ಅದು ಕಿಡ್ನಿ ಕಲ್ಲುಗಳಿಗೆ ಕಾರಣವಾಗಿರುವ ಕಿಡ್ನಿಗಳಲ್ಲಿ ಸೇರುವ ಸ್ಟ್ರುವೈಟ್ ಮತ್ತು ಕ್ಯಾಲ್ಸಿಯಂ ಫೋಸ್ಪೇಟನ್ನು ನಿವಾರಿಸುತ್ತದೆ.

2. ಲಿಂಬೆ ಪಾನೀಯ

ಸಹಜವಾದ ಅಸಿಡಿಕ್ ಪ್ರವೃತ್ತಿಯಿಂದಾಗಿ ಲಿಂಬೆ ಶ್ರೇಷ್ಠ ಪಾನೀಯ. ಮೂತ್ರದಲ್ಲಿ ಸಿಟ್ರೈನ್ ಮಟ್ಟವನ್ನು ಏರಿಸಬೇಕೆಂದರೆ ಇದನ್ನು ಸೇವಿಸಬಹುದು. ಸಿಟ್ರೈನ್ ಕಿಡ್ನಿಯ ಕಲ್ಲುಗಳ ಸಂಗ್ರಹವನ್ನು ತಪ್ಪಿಸುತ್ತದೆ. 4 ಲಿಂಬೆ ರಸವನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಕುಡಿಯಿರಿ. ಹೆಚ್ಚು ರಿಲ್ಯಾಕ್ಸಿಂಗ್ ಆಗಿರಲು ಬಿಸಿ ನೀರಿನ ಜೊತೆಗೂ ಇದನ್ನು ಕುಡಿಯಬಹುದು.

3. ಕ್ರಾನ್‌ಬೆರಿ ಪಾನೀಯ

ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಕ್ರಾನ್‌ಬೆರಿ ಪಾನೀಯ ಅತ್ಯುತ್ತಮ ಆಯ್ಕೆ. ಇದು ಕಿಡ್ನಿ ಶುದ್ಧ ಮಾಡುವ ಅತೀ ಉತ್ತಮ ದಾರಿ. ಈ ಹಣ್ಣು ಬ್ಯಾಕ್ಟೀರಿಯವು ಮೂತ್ರ ವಿಸರ್ಜನಾ ನಾಳ ಮತ್ತು ಮೂತ್ರಕೋಶದಲ್ಲಿ ನಿಲ್ಲುವುದರಿಂದ ರಕ್ಷಿಸುತ್ತದೆ. ಮೂತ್ರ ಹೀಗೆ ಕಟ್ಟುವುದರಿಂದ ಮೂತ್ರ ಸಂಬಂಧಿತ ಸೋಂಕು ಬರಬಹುದು. ಈ ಹಣ್ಣು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದಾದ ಕ್ಯಾಲ್ಸಿಯಂ ಆಕ್ಸಲೇಟನ್ನೂ ನಿವಾರಿಸುತ್ತದೆ. ಹೊರಗೆ ಕ್ರಾನ್‌ಬೆರಿ ಪಾನೀಯ ಕುಡಿಯುವ ಬದಲಾಗಿ ಸ್ವತಃ ತಯಾರಿಸಿ ಕುಡಿಯುವುದು ಉತ್ತಮ. ಇದರಿಂದ ಪಾನೀಯಕ್ಕೆ ಯಾವ ಅಂಶಗಳನ್ನು ಬೆರೆಸಲಾಗಿದೆ ಎನ್ನುವುದು ತಿಳಿದಿರುತ್ತದೆ. ಹೊರಗಿನ ಪಾನೀಯಗಳಲ್ಲಿ ಕೆಲವೊಮ್ಮೆ ಕೃತಕ ರುಚಿ ಕೊಡಲಾಗುತ್ತದೆ. ಅದು ಕಿಡ್ನಿಗೆ ಇನ್ನಷ್ಟು ಸಮಸ್ಯೆ ತರಬಹುದು.

4. ಪಾರ್ಸಲೇ ಪಾನೀಯ

ಪಾರ್ಸಲೇ ಆರೋಗ್ಯಕರ ಅಂಶಗಳಿರುವ ಒಂದು ತರಕಾರಿ. ಇದರ ಪಾನೀಯ ತಯಾರಿಸುವಾಗ ಇತರ ತರಕಾರಿಗಳನ್ನು ಅಥವಾ ಹಣ್ಣುಗಳನ್ನು ಬೆರೆಸುವ ಅಗತ್ಯವಿಲ್ಲ. ಇದೊಂದೇ ಬಹಳ ಉಪಯುಕ್ತ. ಈ ಗಿಡಮೂಲಿಕೆ ಕ್ಯಾರೊಟಿನಾಯ್ಡಾಗಳನ್ನು ಹೊಂದಿದ್ದು, ಅವು ಕ್ಯಾನ್ಸರಿನಿಂದ ರಕ್ಷಣೆ ಕೊಡುತ್ತವೆ. ಅಲ್ಲದೆ ಅಧಿಕ ಕಬ್ಬಿಣ, ಕ್ಲೋರೋಫಿಲ್ ಮತ್ತು ಇತರ ಲವಣಗಳೂ ದೇಹಕ್ಕೆ ಸಿಗುತ್ತದೆ. ಕ್ಲೋರೋಫಿಲ್ ರಕ್ತ ಶುದ್ಧೀಕರಿಸಿದರೆ, ಕಬ್ಬಿಣ ದೇಹವು ಪೌಷ್ಠ್ಟಿಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಹಿಮೋಗ್ಲೋಬಿನ್ ಕೌಂಟ್ ಹೆಚ್ಚಾಗುತ್ತದೆ. ನೀವು ಅನೀಮಿಯ, ಆರ್ಥರೈಟಿಸ್, ಯುಟಿಐಗಳಂತಹ ಬಾಧೆಗಳಿಂದ ಬಳಲುತ್ತಿದ್ದರೆ ಪಾರ್ಸಲೇ ಪಾನೀಯ ಅತ್ಯುತ್ತಮ ಶಮನಕಾರಿ.

ಕಪೆ: http://www.ideadigezt.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X