ಮಸ್ಕತ್: ಸಮುದ್ರದಲ್ಲಿ ಕಾಣೆಯಾಗಿದ್ದ ಬಾಲಕನ ಮೃತದೇಹ ಪತ್ತೆ

ಮಸ್ಕತ್, ಸೆಪ್ಟಂಬರ್ 18: ಜಹ್ಲಾನ್ ಬಿನಿ ಬುಆಲಿಯದ ಸುವೈಹ್ ಸಮುದ್ರ ಬೀಚ್‌ನಲ್ಲಿ ಸ್ನಾನಕ್ಕೆ ಹೋಗಿ ಕಾಣೆಯಾಗಿದ್ದ ಬಾಲಕನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳಿಗೆ ಹತ್ತು ವರ್ಷ ವಯಸ್ಸಿನ ಹುಡುಗನ ಮೃತದೇಹ ಕಾಣಸಿಕ್ಕಿದೆ ಎಂದು ಸಿವಿಲ್ ಡಿಫೆನ್ಸ್ ಟ್ವೀಟ್ ಮಾಡಿ ತಿಳಿಸಿದೆ. ಕಳೆದ ಬುಧವಾರ ಬಾಲಕ ಸಹಿತ ಮೂವರು ಸಮುದ್ರದಲ್ಲಿಅಪಾಯಕ್ಕೊಳಗಾಗಿದ್ದರು. ಇಬ್ಬರನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಆದರೆ ಮೂರನೆಯ ಬಾಲನಕನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ.
ಸ್ಥಳೀಯ ನಿವಾಸಿಗಳು ಮತ್ತು ಸಿವಿಲ್ ಡಿಫೆನ್ಸ್ ಸೇರಿ ಕಳೆದ ಮೂರುದಿನಗಳಲ್ಲಿ ಹುಡುಕಾಟ ನಡೆಸಿದರೂ ಬಾಲಕನ ಮೃತ ಪತ್ತೆಯಾಗಿರಲಿಲ್ಲ. ಎಚ್ಚರಿಕೆ ನೀಡಿದ್ದರೂ ಅದನ್ನು ಉಲ್ಲಂಘಿಸಿ ಸಮುದ್ರಕ್ಕೆ ಇಳಿದವರು ಅವಘಡಕ್ಕೆ ತುತ್ತಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಈವಾರ ಸಮುದ್ರದಲ್ಲಿ ಮುಳಗಿ ಸಾವನ್ನಪ್ಪಿದ ಮೂರನೇ ಪ್ರಕರಣವಾಗಿದೆ. ಕಳೆದ ಮಂಗಳವಾರ ಇಬ್ಬರು ಭಾರತೀಯರು ಸಮುದ್ರಪಾಲಾಗಿ ಮೃತರಾಗಿದ್ದರು ಎಂದು ವರದಿ ತಿಳಿಸಿದೆ.
Next Story





