ಕೇರಳ: ಒಂದು ಕಾಲದಲ್ಲಿ ಈ ಮಹಿಳೆಗೆ ಬೀದಿನಾಯಿಗಳೇ ಹೆದರುತ್ತಿದ್ದವು !

ತಿರುವನಂತಪುರಂ,ಸೆ. 18: ಬೀದಿನಾಯಿಗಳ ಹೆದರಿಕೆಯಲ್ಲಿ ಕೇರಳದ ಜನರು ಇಂದು ದಿಕ್ಕೆಟ್ಟು ನಿಂತಿರುವಾಗ ಪಾಲಕ್ಕಾಡ್‌ನ ಶಕುಂತಳಾರ ನೆನಪು ಬರುವುದು ಅವರು ಹಿಂದೊಮ್ಮೆ ಬೀದಿನಾಯಿಗಳನ್ನು ಅತಿಸಾಹಸವಾಗಿ ಹಿಡಿಯುತ್ತಿದ್ದರು ಎಂಬ ಕಾರಣ ಪಟ್ಟಾಂಬಿಯ ಬಳಿ ಓಂಙಲ್ಲೂರಿನ ನಂಬಾಡತ್ ಲಕ್ಷಂವೀಟ್‌ನಲ್ಲಿ ವಾಸಿಸುತ್ತಿರುವ ಶಕುಂತಳಾ ಒಮ್ಮೆ ಬೀದಿನಾಯಿ ಹಿಡಿಯುವುದನ್ನೇ ತಮ್ಮ ಕಸುಬು ಮಾಡಿಕೊಂಡಿದ್ದವರು. ಈಗ 45ವರ್ಷ ವಯಸ್ಸಾಗಿರುವ ಈ ಮಹಿಳೆ ಸದ್ಯ ಉದ್ಯೋಗಖಾತರಿ ಯೋಜನೆಯಡಿ ಕೆಲಸ ಮಾಡಿ ಬದುಕಿನ ರಥದೂಡುತ್ತಿದ್ದಾರೆ ಎಂದುವರದಿ ತಿಳಿಸಿದೆ.
ಕೇರಳದಲ್ಲಿ ಅಂಗೀಕೃತ ನಾಯಿಹಿಡಿಯುವ ಕೆಲಸಮಾಡುತ್ತಿದ್ದ ಆರ್ಮುಗಂಮತ್ತು ತಂಗಂರ ಏಕೈಕ ಪುತ್ರಿ ಇವರು. ತಂದೆ, ತಾಯಿ, ಮಗಳು ರಾಜ್ಯದುದ್ದಗಲಕ್ಕೂ ನಗರ ಸಭೆ ಮತ್ತು ಗ್ರಾಮ ಪಂಚಾಯತ್‌ಗಳಿಗಾಗಿ ಬೀದಿ ನಾಯಿಗಳನ್ನು ಹಿಡಿದು ಕೊಟ್ಟಿದ್ದಾರೆ.
1998-99ರಲ್ಲಿ ತೃತ್ತಲ ಬ್ಲಾಕ್ ಪಂಚಾಯತ್ ಹುಚ್ಚುನಾಯಿಕಡಿತ ನಿರ್ಮೂಲನಾ ಯಜ್ಞ ನಡೆಸಿದಾಗ ಅರ್ಮುಗಂ ಮತ್ತು ಪತ್ನಿ ತಂಗಂ, ಮಗಳು ಶಕುಂತಳಾ ಇದ್ದ ಎಂಟು ಮಂದಿಯ ತಂಡ 5000 ನಾಯಿಗಳನ್ನು ಹಿಡಿದಿದ್ದರು. ಅಂದು ವೆಟರ್ನರಿ ಸರ್ಜನ್ ಆಗಿದ್ದ ಡಾ.ರಾಜನ್ ಚುಂಗತ್ತಿಯೋಜನೆಯ ನೇತೃತ್ವವನ್ನು ವಹಿಸಿದ್ದರು. ಮಾಲಕರಿದ್ದ ನಾಯಿಗಳನ್ನೂ ಬಂಜೆಗೊಳಿಸಿ ಕೊಟ್ಟಿದ್ದರು.
ಈಕಾಲದಲ್ಲಾದರೂ ಶಂಕುತಳಾರಿಗೆ ಸರಕಾರ ನಾಯಿ ಹಿಡಿಯುವ ಅಂಗೀಕೃತ ಸರಕಾರಿ ಲಾಸ್ಟ್ ಗ್ರೇಡ್ ಉದ್ಯೋಗ ನೀಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಆಗಲಿಲ್ಲ. ತೃತ್ತಲ ಪಂಚಾಯತ್‌ನ ಹುಚ್ಚು ನಾಯಿ ನಿರ್ಮೂಲನ ಯಜ್ಞದ ಕುರಿತು ಡಾ. ರಾಜನ್ ಚುಂಗತ್ ಒಂದು ಲೇಖನವನ್ನೂ ಬರೆದಿದ್ದರು.
ಅದು ಪ್ರಕಟವಾದಾಗ ಅದರ ಕುರಿತು ಅರಿತ ಸಚಿವೆ ಮೇನಕಾ ಗಾಂಧಿ ಅರ್ಮುಗಂಗೆ ಪತ್ರಬರೆದು ನಾಯಿಗಳನ್ನು ಕೊಲ್ಲಬಾರದು ಎಂದು ತಿಳಿಸಿದ್ದರು. ನೀವು ನಾಯಿಹಿಡಿಯುವ ಕೆಲಸದಿಂದ ಹಿಂದೆ ಸರಿಯಬೇಕು. ಅಲೆದಾಡುವ ನಾಯಿಗಳಿಗೆ ಪ್ರಾಯೋಜಕರಣಳನ್ನು ಹುಡುಕಿಕೊಟ್ಟು ಅದನ್ನು ಸಾಕಬೇಕೆಂದು ಮೇನಕಾ ಪತ್ರದಲ್ಲಿ ವಿವರಿಸಿದ್ದರು. ಇದರೊಂದಿಗೆ ಅರ್ಮುಗಂ ನಾಯಿಹಿಡಿಯುವ ಕೆಲಸ ಮಾಡಲು ಹೆದರಿದರು. ಒಂಬತ್ತು ವರ್ಷಗಳ ಹಿಂದೆ ಅರ್ಮುಗಂ ನಿಧನರಾದರು.
ಶಕುಂತಳಾ ಜೊತೆ ಅಮ್ಮ ಅರ್ಮುಗಂ ಇದ್ದಾರೆ. ವಿಧವಾ ವೇತನ ಜೀವನಕ್ಕೆ ಒಂದೇ ಆಧಾರವಾಗಿದೆ. ಎಂತಹ ಘಾಟಿ ನಾಯಿಯನ್ನು ಹಿಡಿಯುವ ಸಾಮರ್ಥ್ಯಇರುವ ಶಕುಂತಳಾ ಈಗಲು ಸರಕಾರಿ ಕೆಲಸದ ಕನಸು ಕಾಣುತ್ತಿದ್ದಾರೆ.ಕೆಲಸ ಸಿಕ್ಕಿದರೆ ನಾಯಿ ಹಿಡಿಯಲು ಸಿದ್ಧ ಎಂದು ಶಕುಂತಳಾ ಹೇಳುತ್ತಾರೆ. ಪತಿ ಮತ್ತು ಮೂವರು ಮಕ್ಕಳಜೊತೆ ಓಂಙಲ್ಲೂರಿನ ಲಕ್ಷಂವೀಟ್‌ನಲ್ಲಿ ಅವರು ವಾಸಿಸುತ್ತಿದ್ದಾರೆ.







