Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜೀವನದಲ್ಲೊಮ್ಮೆ ನೋಡು ಈ 30 ವಿನ್ಯಾಸ...

ಜೀವನದಲ್ಲೊಮ್ಮೆ ನೋಡು ಈ 30 ವಿನ್ಯಾಸ ವಿಸ್ಮಯಗಳನ್ನು!

ವಾರ್ತಾಭಾರತಿವಾರ್ತಾಭಾರತಿ18 Sept 2016 3:56 PM IST
share
ಜೀವನದಲ್ಲೊಮ್ಮೆ ನೋಡು ಈ 30 ವಿನ್ಯಾಸ ವಿಸ್ಮಯಗಳನ್ನು!

ಕಟ್ಟಡಗಳು ವಿಶ್ವದ ಅತೀ ಅದ್ಭುತ ಕಲಾಪ್ರದರ್ಶನಗಳಾಗಿವೆ. ಕಟ್ಟಡಗಳಲ್ಲಿ ವ್ಯಾಪಕ ಹಣವನ್ನು ಹೂಡಿದ ಮೇಲೆ ಅಂತಿಮ ರಚನೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ವಿಶ್ವದ 30 ಕಟ್ಟಡಗಳ ವಿವರ ಇಲ್ಲಿದೆ.

► ಆಧುನಿಕ ವಾಸ್ತುಶಿಲ್ಪಿ ಅಂಟೋನಿ ಗೌಡಿ ತಮ್ಮ ಸಾಗ್ರಾಡ ಫ್ಯಾಮಿಲ ಪೂರ್ಣಗೊಳ್ಳುವುದನ್ನು ನೋಡಲು ಸಾಧ್ಯವಾಗಿಲ್ಲ. ಆದರೆ ಅದನ್ನು ಈಗಲೂ ಕಟ್ಟಲಾಗುತ್ತಿದೆ. ಹೊರನೋಟವು ನಾರಿಯಾ ಸಿನಿಮಾ ಸೆಟ್ ತರಹ ಇದ್ದರೂ ಇದರ ಒಳಭಾಗ ಇನ್ನೂ ವಿಚಿತ್ರವಾಗಿದೆ.

------------------------------------------------------------------------

► ಇಂದಿನ ಟರ್ಕಿಯಲ್ಲಿ ನಾವು ನೋಡುವ ಅತೀ ಹಳೇ ಕಟ್ಟಡವೆಂದರೆ ಗೋಬೆಕ್ಲಿ ಟೆಪೆ. ಇದನ್ನು ಕ್ರಿ.ಪೂ. 9500ನೇ ಇಸವಿಯಲ್ಲಿ ಕಟ್ಟಲಾಗಿದ್ದು, ಪುರಾತತ್ವ ಶಾಸ್ತ್ರಜ್ಞರು ಇದರ ಕೆಲಸದ ಬಗ್ಗೆ ಖಚಿತಪಡಿಸಿಲ್ಲ. ಆದರೆ ಇದು ಧಾರ್ಮಿಕ ಕಟ್ಟಡವಾಗಿರಬಹುದು ಎನ್ನುವ ಊಹೆಯಿದೆ.

------------------------------------------------------------------------

►ನ್ಯೂಯಾರ್ಕ್‌ನ ಫ್ಲಾಟಿರಾನ್ ಕಟ್ಟಡ ಮೊದಲ ಗಗನಚುಂಬಿಗಳಲ್ಲಿ ಒಂದು, 1913-1930ವರೆಗೆ ವಿಶ್ವದ ಅತೀ ಉದ್ದನೆಯ ಕಟ್ಟಡವಾಗಿದ್ದ ಮೂಡಿ ವೂಲ್‌ವರ್ತ್ ಕಟ್ಟಡದಂತೆ ಇದೂ ಒಂದಾಗಿದೆ.

------------------------------------------------------------------------

► ಜಪಾನಿನ ಓನೋಮಿಚಿಯಲ್ಲಿ ದಂಪತಿಗಳು ಆಗಾಗ್ಗೆ ಮದುವೆ ಸಂಭ್ರಮಾಚರಣೆಗೆ ರಿಬ್ಬನ್ ಚಾಪೆಲ್‌ಗೆ ಭೇಟಿ ನೀಡುತ್ತಾರೆ.

------------------------------------------------------------------------

► ದಕ್ಷಿಣ ಕೊರಿಯಾದ ಸಿಯೋಲ್‌ನ ಲೈಟ್ ಆಫ್ ಲೈಫ್ ಚರ್ಚ್ ಹಸಿರಿನಿಂದ ಸುತ್ತುವರಿದ ಅದ್ಭುತ ಕಟ್ಟಡ. ಒಳಗಿನಿಂದ ಚರ್ಚ್ ಅದ್ಭುತವಾಗಿ ಕಾಣಿಸುತ್ತದೆ.

------------------------------------------------------------------------

► ಚಿಕಾಗೋದ ಮಾರಿನಾ ಸಿಟಿ ಅಪಾರ್ಟ್‌ಮೆಂಟ್‌ಗಳು ವಿಶೇಷವಾಗಿ ವಿನ್ಯಾಸಗೊಳಿಸಿದವು. 1964ರಲ್ಲಿ ಕಟ್ಟಿದ ಇವು ಮೊದಲ ಮಿಕ್ಸ್ಡ್ ಯೂಸ್ ಕಟ್ಟಡಗಳಾಗಿವೆ ಮತ್ತು ಅಮೆರಿಕದಲ್ಲಿ ಕ್ರೇನ್ ಬಳಸಿ ಕಟ್ಟಿದ ಮೊದಲ ಕಟ್ಟಡ.

------------------------------------------------------------------------

► ಆದರೆ ಎಲ್ಲಾ ಕಟ್ಟಡಗಳೂ ಆಗಸದ ಕಡೆಗೆ ಚಾಚಬೇಕಾಗಿಲ್ಲ. ಹೆಲ್ಸಿಂಕಿಯ ಟೆಂಪೆಲಿಯಕಿಯೊ ಚರ್ಚ್ ಭೂಗತವಾಗಿ ಕಲ್ಲಿನಿಂದ ಕಟ್ಟಿದ್ದು, ಈಗಲೂ ಸೂರ್ಯನ ಬೆಳಕನ್ನು ಪಡೆದುಕೊಳ್ಳುತ್ತದೆ.

------------------------------------------------------------------------

► ಇಥಿಯೋಪಿಯದ ಲಲಿಬೆಲಾದ ಸೈಂಟ್ ಜಾರ್ಜ್ ಚರ್ಚ್‌ನ್ನು 12ನೇ ಶತಮಾನದಲ್ಲಿ ಏಕಶಿಲೆಯಿಂದ ಕಟ್ಟಲಾಗಿದೆ.

------------------------------------------------------------------------

► ಕೆಲವು ಅತ್ಯುತ್ತಮ ಕಟ್ಟಡಗಳು ತಾವಿರುವ ಜಾಗದಿಂದಾಗಿ ವಿಶೇಷವಾಗಿವೆ. ರೇಕ್ಜಾವಿಕ್‌ನ ಟುರ್ನಿನ್ ಕಟ್ಟಡ ದ್ವೀಪದ ಸೌಂದರ್ಯವನ್ನು ಹೊತ್ತು ನಿಂತಿದೆ.

------------------------------------------------------------------------

► ಆಧುನಿಕ ಮಾಸ್ಟರ್ ಮೈಸ್ ವಾಣ್ ಡೇರ್ ರೋಹೆ ಕನಿಷ್ಠ ಲೈನ್ಸ್ ಬಳಸಿ ಮತ್ತು ಮುಕ್ತ ಸ್ಥಳವನ್ನೇ ಇಟ್ಟು ಕಟ್ಟಡಗಳನ್ನು ಕಟ್ಟಿ ಗಾಳಿಯಾಡುವ ಅವಕಾಶ ಕೊಟ್ಟಿದ್ದಾರೆ.1960ರಲ್ಲಿ ಬರ್ಲಿನ್‌ನಲ್ಲಿ ನ್ಯೂಯಿ ನಾಷನಲ್ಗಲೆರಿಯನ್ನು ಹೀಗೇ ಕಟ್ಟಲಾಗಿದೆ.

------------------------------------------------------------------------

► ಬರ್ಲಿನ್‌ನಲ್ಲಿ ಇಲೆಕ್ಟ್ರಾನಿಕ್ ಸಂಗೀತದ ಮಕ್ಕಾ ಬ್ರೂಟಲಿಸ್ಟ್ ಮಾಸ್ಟರ್‌ಸ್ಟ್ರೋಕ್ ಬರ್ಗೈನ್ ಇದೆ.

------------------------------------------------------------------------

► ಪರಿಸರದ ಜೊತೆಗೆ ಅಂತರ್ಗವಾಗುವುದು ವಾಸ್ತುಶೈಲಿಯ ಒಂದು ಅಭ್ಯಾಸ. ಜಪಾನಿನ ಹಿಂದಿನ ರಾಜಧಾನಿ ಕ್ಯೂಟೋದಲ್ಲಿ ಗೋಲ್ಡನ್ ಪೆವಿಲಿಯನ್

 ಮತ್ತು ಅದ್ಭುತ ಸಿಲ್ವರ್ ಪೆವಿಲಿಯನ್ ಇದಕ್ಕೆ ಉದಾಹರಣೆ.

------------------------------------------------------------------------

►ಮಾಲಿಯಲ್ಲಿರುಯವ ಜೇನೆ ಮಸೀದಿ ಮಣ್ಣಿನಿಂದ ಕಟ್ಟಿದ ವಿಶ್ವದ ಅತೀ ದೊಡ್ಡ ಕಟ್ಟಡ. ಅದರಲ್ಲಿ 3000 ಮಂದಿ ಪ್ರಾರ್ಥಿಸಬಹುದು.

------------------------------------------------------------------------

► ಪ್ಯಾರಿಸ್‌ನ ವಿಮಿಸಿಕಲ್ ಪೊಂಪಿಡೌ ಸೆಂಟರ್ ಆಧುನಿಕ ವಾಸ್ತು.

------------------------------------------------------------------------

► ಉತ್ತರ ಫ್ರಾನ್ಸ್‌ನ ಚಾರ್ಟರ್ಸ್‌ ಕ್ಯಾಥೆಡ್ರಾಲ್ ಅನ್ನು ಗೋಥಿಕ್ ಶೈಲಿಯಲ್ಲಿ 1200ರಲ್ಲಿ ಕಟ್ಟಲಾಗಿದೆ.

 ಅದರ ಒಳಭಾಗವೂ ಅಷ್ಟೇ ಅದ್ಭುತವಾಗಿದೆ.

------------------------------------------------------------------------

► ಇಸ್ತಾನ್‌ಬುಲ್‌ನ ನೀಲಿ ಮಸೀದಿಯನ್ನು 1600ರಲ್ಲಿ ಕಟ್ಟಲಾಗಿದೆ. ಒಟ್ಟೋಮನ್ ಸಾಮ್ರಾಜ್ಯದ ಕಾಲದಲ್ಲಿ ಈ ಪ್ರಾರ್ಥನಾ ಸ್ಥಳ ನಿರ್ಮಾಣವಾಗಿತ್ತು.

 ಇದರ ಒಳಾಂಗಣದಲ್ಲಿ 20,000 ಕೈಯಲ್ಲಿ ತಯಾರಿಸಿದ ಟೈಲ್ಸ್‌ಗಳನ್ನು ಬಳಸಲಾಗಿದೆ.

------------------------------------------------------------------------

► ಭಾರತದ ಅಮೃತಸರದ ಗೋಲ್ಡನ್ ಟೆಂಪಲ್ ಸಿಖ್ಖರ ಪ್ರಾರ್ಥನಾ ಮಂದಿರ. ರಾತ್ರಿಯಲ್ಲಿ ಇದು ಅದ್ಭುತ ಸೌಂದರ್ಯದ ಗಣಿ.

------------------------------------------------------------------------

► ಜರ್ಮನಿಯ ಬಾವರಿಯಾ ರಾಜ್ಯದ ನ್ಯೂಶೆವಾನ್‌ಸ್ಟೈನ್ ಅರಮನೆ ವಾಲ್ಟ್ ಡಿಸ್ನಿಗೆ ಸ್ಲೀಪಿಂಗ್ ಬ್ಯೂಟೀಯ ಅರಮನೆ ನಿರ್ಮಿಸಲು ಪ್ರೇರಣೆ ನೀಡಿದೆ. ಅದರ ಸೌಂದರ್ಯವೇ ಅಂತಹದು.

------------------------------------------------------------------------

► ಡಬ್ಲಿನ್‌ನ ಟ್ರಿನಿಟಿ ಕಾಲೇಜಿ ವಿಶ್ವವಿದ್ಯಾಲಯದ ರತ್ನ.

 ಇದರಲ್ಲಿ ಉದ್ದನೆಯ ಕೋಣೆಯಾಗಿರುವ ಅದ್ಭುತ ಗ್ರಂಥಾಲಯ ಕಟ್ಟಡವೂ ಇದೆ.

------------------------------------------------------------------------

► ಇಂಪೀರಿಯಲ್ ಅರಮನೆ ಅಥವಾ ಫರ್ಬಿಡನ್ ಸಿಟಿ ಚೀನಾದ ವಾಸ್ತು ವೈಭವದ ಅಂತಿಮ ಸ್ವರೂಪ.

 1420ರಿಂದ 1912ರವರೆಗೆ ಅದು ಸರ್ಕಾರದ ಪೀಠವಾಗಿತ್ತು.

 ಅದರ ಒಳಾಂಗಣ ಅದ್ಭುತವಾಗಿದೆ.

 ಅದರ ಇತರ ರಚನೆಗಳೂ ಅಷ್ಟೇ ಸುಂದರ.

------------------------------------------------------------------------

► ಬಹುತೇಕ ಆಧುನಿಕ ಅದ್ಭುತ ಕಟ್ಟಡಗಳು ಬೀಜಿಂಗಲ್ಲಿವೆ. ಸಿಸಿಟಿವಿ ಟವರ್ ಇದರಲ್ಲಿ ಮಹತ್ವದ್ದಾಗಿದೆ.

------------------------------------------------------------------------

► ಹಾಂಗ್ ಕಾಂಗ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ ಒಂದು ವಿಶಿಷ್ಟ ಆಧುನಿಕ ವಾಸ್ತುವನ್ನು ಹೊಂದಿದ ಕಟ್ಟಡ.

------------------------------------------------------------------------

► ಪೆರುವಿನಲ್ಲಿರುವ ಮಚು ಪಿಚು ವಿಶಿಷ್ಟ ವಾಸ್ತುವೈಭವಕ್ಕೆ ಅತ್ಯುತ್ತಮ ಉದಾಹರಣೆ.

 ಇದನ್ನು 1450ರಲ್ಲಿ ಕಟ್ಟಲಾಗಿದೆ ಎನ್ನುತ್ತಾರೆ ವಾಸ್ತು ತಜ್ಞರು.

 ಅದರ ವಸತಿ ವಿಭಾಗದ ಸಮೀಪದ ನೋಟ ಇಲ್ಲಿದೆ.

------------------------------------------------------------------------

► 2007ರಲ್ಲಿ ಉದ್ಘಾಟನೆಯಾದ ಕೊಲಂಬಿಯದ ಮೆಡಿಲಿನ್‌ನ ಪಾರ್ಕ್ ಬಿಬಿಲಿಯೊಟೆಕಾ ಎಸ್ಪಾನಾ ಕಟ್ಟಡವನ್ನು ಕೊಲಂಬಿಯದ ವಾಸ್ತುಶಿಲ್ಪಿ ಗಿಯಾನ್‌ಕಾರ್ಲೋ ಮಜಂಟಿ ನಿರ್ಮಿಸಿದ್ದಾರೆ. ಹೊರಗಿನಿಂದ ನೋಡಲು ಮೂರು ಕಟ್ಟಡಗಳು ಕಲ್ಲಿನಂತೆ ಕಾಣುತ್ತವೆ.

------------------------------------------------------------------------

► ಮೆಡಿಲಿನ್‌ನ ಸಾಂಟೋ ಡೊಮಿಂಗೋ ಸಾವಿಯೋದ ಗ್ರಂಥಾಲಯದ ಒಳಭಾಗ ಹೀಗಿದೆ.

------------------------------------------------------------------------

► ಸಿಡ್ನಿಯ ಒಪೆರಾ ಹೌಸ್ ಆಸ್ಟ್ರೇಲಿಯದ ವಾಸ್ತು ವೈಭವದ ಅತ್ಯುತ್ತಮ ಘಟ್ಟ.

 ಡ್ಯಾನಿಷ್ ವಾಸ್ತುಶಿಲ್ಪಿ ಜಾರ್ನ್ ಉಟ್ಜಾನ್ 1973ರಲ್ಲಿ ಇದನ್ನು ಕಟ್ಟಿದ್ದಾರೆ.

------------------------------------------------------------------------

ಕೃಪೆ: www.businessinsider.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X