5 ಮನೆಮದ್ದುಗಳು ಮತ್ತು ಅವುಗಳ ಹಿಂದಿರುವ ವಿಜ್ಞಾನ
ನಮಗೆಲ್ಲ ಜನಪ್ರಿಯ ಮನೆಮದ್ದುಗಳು ಗೊತ್ತಿವೆ. ಆದರೆ ಅವುಗಳಲ್ಲಿ ಯಾವುದು ಪರಿಣಾಮಕಾರಿ ಎಂದು ಗುರುತಿಸುವುದು ಹೇಗೆ? ಹಿಂದೂಜಾ ಆಸ್ಪತ್ರೆಯ ವೈದ್ಯ ಡಾ ಅನಿಲ್ ಬಳ್ಳಾನಿ ಅಂತಹ ಕೆಲವು ಮನೆಮದ್ದುಗಳ ಬಗ್ಗೆ ವಿವರ ನೀಡಿದ್ದಾರೆ. ಜೇನು, ಹಣ್ಣು ಮತ್ತು ಗಿಡಮೂಲಿಕೆಗಳಂತಹ ಸರಳ ವಸ್ತುಗಳಿಂದ ಮನೆಮದ್ದುಗಳನ್ನು ತಯಾರಿಸಬಹುದು ಎನ್ನುತ್ತಾರೆ ಬಳ್ಳಾನಿ.
ಹೊಟ್ಟೆನೋವಿಗೆ ಪಾನೀಯಕ್ಕೆ ಉಪ್ಪು ಬೆರೆಸಿ ಸೇವಿಸಬೇಕು
ಕಲ್ಲುಪ್ಪು ಹುಡಿಯುಪ್ಪಿಗಿಂತ ಹೆಚ್ಚು ಉತ್ತಮ. ಅದರಲ್ಲಿ ಸಹಜವಾದ ಲವಣಗಳು ಜೀರ್ಣಕ್ರಿಯೆಗೆ ನೆರವಾಗುತ್ತವೆ. ಕಲ್ಲುಪ್ಪನ್ನು ಲಿಂಬೆರಸದ ಜೊತೆಗೆ ಸೇವಿಸಿದಲ್ಲಿ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಎಂದು ಮಹಿಂ ಫೋರ್ಟಿಸ್ ಆಸ್ಪತ್ರೆ ವೈದ್ಯ ರಾಜೇಶ್ ಗೋಖನಿ ಹೇಳುತ್ತಾರೆ.
ಜ್ವರ ಮತ್ತು ಶೀತಕ್ಕೆ ಚಿಕನ್ ಸೂಪ್
ಚಿಕನ್ ಸೂಪ್ ಗಂಟಲು ಕೆರೆತ ನಿಲ್ಲಿಸಿ ಮೂಗಿಗೆ ಸ್ವಾತಂತ್ರ್ಯ ಕೊಡುತ್ತದೆ. ಉರಿಯೂತದ ಗಂಟಲನ್ನು ಸರಿಪಡಿಸುತ್ತದೆ. ಬಿಸಿ ಸೂಪ್ ದೇಹದಲ್ಲಿ ಮರಳಿ ಹೈಡ್ರೇಟ್ ಆಗಲು ಬಿಡುವ ಕಾರಣ ಬೇಗನೇ ಗುಣವಾಗಬಹುದು. ಚಿಕನ್ ಸೂಪ್ ಶ್ವಾಸಕೋಶದ ನಾಳದಲ್ಲಿ ನ್ಯೂಟ್ರೋಫಿಲ್‌ಗಳ ಚಲನೆಗೆ ಉತ್ತೇಜಿಸುವ ಕಾರಣ ಕಟ್ಟಿಕೊಂಡಿರುವುದನ್ನು ಸಡಿಲಗೊಳಿಸುತ್ತದೆ. ನಾಸಲ್ ಸಿಲಿಯ ಉತ್ತಮ ಕೆಲಸ ಮಾಡುವಂತೆ ಮಾಡುತ್ತದೆ. ಮೂಗಿನೊಳಗೆ ಕಟ್ಟಿರುವ ಸಿಂಬಳವನ್ನು ನಿವಾರಿಸುತ್ತದೆ.
ಅರಿಶಿಣ ಹಾಲು ನೋವು ನಿವಾರಕ
ಬಳ್ಳಾನಿ ಪ್ರಕಾರ ಬಿಸಿ ಮಾಡಿದ ಹಾಲಿಗೆ ಅರಿಶಿಣ ಬೆರೆಸಿ ಸೇವಿಸುವುದು ಅತ್ಯುತ್ತಮ. ಹಾಲಿನಲ್ಲಿ ಪ್ರೊಟೀನ್‌ನ ಉತ್ತಮ ಅಂಶವಿದ್ದು ಗಾಯಗಳನ್ನು ಗುಣಪಡಿಸುತ್ತದೆ. ಅರಿಶಿಣದಲ್ಲಿ ಉರಿಯೂತ ತತ್ವಗಳು ನಿವಾರಿಸುವ ಗುಣವಿದೆ. ಇದು ಉರಿಯೂತದ ಸ್ನಾಯುಗಳನ್ನು ಸರಿಪಡಿಸುತ್ತದೆ. ಅರಿಶಿಣದಲ್ಲಿ ಬಲವಾದ ಆಂಟಿ ಆಕ್ಸಿಡಂಟ್ ಕ್ಯುರಕ್ಯುಮಿನ್ ಇದೆ.
ಎಣ್ಣೆ ಮಸಾಜ್‌ನಿಂದ ಶಕ್ತಿ
ಡಾ ಗೋಖಾನಿ ಪ್ರಕಾರ ಸಾಸಿವೆ ಎಣ್ಣೆ ಬಿಸಿಯಾಗಿರುತ್ತದೆ. ಇದು ಬೆವರಿನ ಗ್ರಂಥಿಗಳನ್ನು ತೆರೆದು ಚರ್ಮ ಮೃದುವಾಗಲು ನೆರವಾಗುತ್ತದೆ. ಮಸಾಜ್ ರಕ್ತದ ಪರಿಚಲನೆ ಉತ್ತಮವಾಗಲು ನೆರವಾಗುತ್ತದೆ. ಮಕ್ಕಳು ರಿಲ್ಯಾಕ್ಸ್ ಆಗಲೂ ನೆರವಾಗುತ್ತದೆ. ಸಾಸಿವೆಯ ಕೆಟ್ಟ ಪರಿಮಳದಿಂದಾಗಿ ಕೀಟಗಳು ಬಳಿ ಸುಳಿಯುವುದಿಲ್ಲ. ಆದರೆ ಹಸುಗೂಸುಗಳಿಗೆ ಸಾಸಿವೆ ಎಣ್ಣೆ ಮಸಾಜ್ ಮಾಡಬಾರದು. ಕನಿಷ್ಠ ಒಂದು ವರ್ಷವಾದ ಮೇಲೆ ಮಕ್ಕಳಿಗೆ ಸಾಸಿವೆ ಎಣ್ಣೆ ಬಳಸಬಹುದು.
ಜೇನು ಮತ್ತು ಶುಂಠಿಯಿಂದ ಕಫ ದೂರ
ಶುಂಠಿಯನ್ನು ಬಿಸಿ ನೀರು ಮತ್ತು ಜೇನು ಮಿಶ್ರ ಮಾಡಿ ಸೇವಿಸಿದರೆ ಕಫ ಮತ್ತು ಗಂಟಲು ಕೆರೆತ ದೂರವಾಗಲಿದೆ. ಶುಂಠಿ ಕಫ ದೂರ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡಂಟ್ ಗುಣವಿರುವ ಕಾರಣ ನೋವು ನಿವಾರಕವೂ ಹೌದು. ಜೇನು ಉರಿಯೂತ ತಡೆಯುತ್ತದೆ. ತನ್ನ ಅಧಿಕ ವಿಸ್ಕಾಸಿಟಿಯಿಂದ ಗಂಟಲನ್ನು ಶಮನಗೊಳಿಸುತ್ತದೆ. ಶುಂಠಿ-ಜೇನು ಚಿಕಿತ್ಸೆಯೂ ಉತ್ತಮ.
ಕೃಪೆ: timesofindia.indiatimes.com