ಬಸ್ ಪ್ರಯಾಣ ದರಕ್ಕೆ ಹೆಚ್ಚಳಕ್ಕೆ ಕೇರಳ ಕೆಎಸ್ಸಾರ್ಟಿಸಿ ಚಿಂತನೆ

ಕಾಸರಗೋಡು, ಸೆ.18: ಕೆಎಸ್ಸಾರ್ಟಿಸಿ ಕನಿಷ್ಠ ಪ್ರಯಾಣ ದರ ಏರಿಕೆ ಮಾಡಲು ಸಾರಿಗೆ ನಿಗಮವು ಸರಕಾರದ ಮುಂದೆ ಬೇಡಿಕೆಯಿಟ್ಟಿದೆ.
ಕನಿಷ್ಠ ಪ್ರಯಾಣ ದರವನ್ನು ಆರು ರೂ.ನಿಂದ ಏಳು ರೂ.ಗೆ ಏರಿಕೆ ಮಾಡುವಂತೆ ಶಿಫಾರಸು ಮಾಡಿದ್ದು, ದರ ಏರಿಕೆ ಮಾಡಲು ಸರಕಾರ ಸಮ್ಮತಿಸಿದೆ ಎಂದು ಹೇಳಲಾಗುತ್ತಿದೆ. ಡೀಸೆಲ್ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕನಿಷ್ಠ ಪ್ರಯಾಣ ದರವನ್ನು ಏಳರಿಂದ ಆರು ರೂ.ಗೆ ಇಳಿಸಲಾಗಿತ್ತು. ಇದೀಗ ಡೀಸೆಲ್ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಕನಿಷ್ಠ ದರವನ್ನು ಏಳು ರೂ.ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಮುಂದಾಗಿದೆ.
Next Story





