ದುಬೈ : ಕೆಸಿಎಫ್ ಅಯಲ್ ನಾಸರ್ ಯುನಿಟ್ ಅಸ್ತಿತ್ವಕ್ಕೆ

ದುಬೈ, ಸೆ.18: ಅನಿವಾಸಿ ಮುಸ್ಲಿಮ್ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಗಲ್ಫ್ ಮತ್ತು ಹೊರ ರಾಷ್ಟ್ರಗಳು ಸೇರಿ ದಂತೆ ಇನ್ನಿತರ ಕಡೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸೆಕ್ಟರ್, ಝೋನ್, ನ್ಯಾಷನಲ್, ಇಂಟರ್ ನ್ಯಾಷನಲ್ ಎಂಬ ನಾಲ್ಕು ಘಟಕಗಳಲ್ಲಿ ತನ್ನ ತನ್ನ ಕಾರ್ಯ ಕ್ಷೇತ್ರಗಳನ್ನು ವಿಸ್ತರಿಸಿದೆ. ವಿಸ್ತರಣೆಯ ಅಂಗವಾಗಿ ದುಬೈ ಝೋನ್ ವ್ಯಾಪ್ತಿಯ ನೈಫ್ ಸೆಕ್ಟರ್ ಅಧೀನದ ಅಯಲ್ ನಾಸರ್ ಯುನಿಟ್ (ಶಾಖೆ)ಯನ್ನು ರಚಿಸಲಾಯಿತು.
ಅಧ್ಯಕ್ಷ ಹಮೀದ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯನ್ನು ಝೋನ್ ಸಮಿತಿ ನಾಲೆಜ್ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಲತೀಫಿ ಉಸ್ತಾದ್ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
‘ಸಂಘಟನೆ ಮತ್ತು ಶಿಸ್ತು’ ಎಂಬ ವಿಷಯದಲ್ಲಿ ಅಬ್ದುರ್ರಝಾಕ್ ಖಾಸಿಮಿ ತರಗತಿ ನಡೆಸಿಕೊಟ್ಟರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಹಿಮಮಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಘನಿ ಉಳ್ಳಾಲ ಮತ್ತು ಕೋಶಾಧಿಕಾರಿಯಾಗಿ ರವೂಫ್ ಉಜಿರೆಯವರನ್ನು ಆಯ್ಕೆ ಮಾಡಲಾಯಿತು.
ಝೋನ್ ನಾಯಕರಾದ ಅಬ್ದುಲ್ ಅಝೀಝ್ ಅಹ್ಸನಿ, ರಫೀಕ್ ಸಂಪ್ಯ ಮತ್ತು ಶರೀಫ್ ಹೊಸ್ಮಾರ್ ನೂತನ ಸಮಿತಿಗೆ ಶುಭ ಹಾರೈಸಿದರು. ನೈಫ್ ಸೆಕ್ಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಕುದ್ಲೂರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಬ್ದುಲ್ ಘನಿ ಉಳ್ಳಾಲ ವಂದಿಸಿದರು.







