ಪುತ್ತೂರು: ಶಿಕ್ಷಕ-ಶಿಕ್ಷಣ ಸಪ್ತಾಹ

ಪುತ್ತೂರು, ಸೆ.18: ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಶಿಕ್ಷಕ ಶಿಕ್ಷಣ ಸಪ್ತಾಹ ಕಾರ್ಯಕ್ರಮವು ಕಬಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಯಮಾಲಾ ವಹಿಸಿದ್ದರು. ಸಂಚಲನಾ ಸಮನ್ವಯ ಸಮಿತಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ವತ್ಸಲಾ ನಾಯಕ್ ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು. ಪ್ಯಾಟ್ರಿಕ್ ಲೋಬೊ ಹಿರಿಯ ನಾಗರಿಕರ ಸವಲತ್ತಿನ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರಾದ ಸ್ವಪ್ನಾ ಶೆಣೈ ಮತ್ತು ಲೋಕೇಶ್ ಗೌಡ ಅಲುಂಬುಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾಲಾ ಮುಖ್ಯಗುರು ಸುಲೋಚನಾ ಸ್ವಾಗತಿಸಿದರು. ಪಡಿ ಸಂಸ್ಥೆಯ ತಾಲೂಕು ಸಂಯೋಜಕಿ ಮಮತಾ ರೈ ವಂದಿಸಿದರು.
Next Story





