ಜೈಲಿನಲ್ಲಿ ದುರಂತ ಅಂತ್ಯ ಕಂಡ ಚೆನ್ನೈ ಟೆಕ್ಕಿ ಸ್ವಾತಿ ಹಂತಕ

ಚೆನ್ನೈ, ಸೆ.18: ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸ್ವಾತಿ ಎಂಬವರ ಕೊಲೆ ಪ್ರಕರಣದ ಆರೋಪಿ ಪಿ.ರಾಮ್‌ಕುಮಾರ್ ಎಂಬಾತ ರವಿವಾರ ಪುಝುಲ್ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತನನ್ನು ರಾಯಪೇಟಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.
ರಾಮ್‌ಕುಮಾರ್ ಬಿಗಿ ಭದ್ರತೆಯ ಕಾರಾಗೃಹ ಕೊಠಡಿಯ ಮೇಲೇರಿ ಸಜೀವ ವಿದ್ಯುತ್ ತಂತಿಯನ್ನು ಮುಟ್ಟಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಂಡಾಗ ಅಲ್ಲಿ ಯಾರೂ ಇರಲಿಲ್ಲ. ಕಾವಲುಗಾರ ಬಳಿಕ ಧಾವಿಸಿ ವಿದ್ಯುತ್ ಕಡಿತಗೊಳಿಸಿ ರಾಮ್‌ಕುಮಾರ್‌ನನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ರಾಯಪೇಟಾ ಸರಕಾರಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
Next Story





