ಬದುಕಿನಲ್ಲಿ ಸಮಸ್ಯೆಗಳು ಶಾಶ್ವತವಲ್ಲ : ನ್ಯಾ. ಚಂದ್ರಶೇಖರ್
ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ

ಶಿಕಾರಿಪುರ, ಸೆ.18: ಮನುಷ್ಯನ ಬದುಕಿನಲ್ಲಿ ಸಮಸ್ಯೆಗಳು ಶಾಶ್ವತವಲ್ಲ, ಪ್ರತಿಯೊಂದು ಸಮಸ್ಯೆಗೂ ಪ್ರಪಂಚದಲ್ಲಿ ಪರಿಹಾರವಿದೆ. ಆದರೆ, ಕೆಲವರು ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ದುರಂತ. ಆತ್ಮಹತ್ಯೆಯಿಂದ ಇನ್ನೂ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತವೆ ವಿನಃ ಪರಿಹಾರ ಸಿಗುವುದಿಲ್ಲ ಎಂದು ಇಲ್ಲಿನ ಜೆಎಂಎ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಬಿ.ಸಿ ಚಂದ್ರಶೇಖರ್ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ,ಆರೋಗ್ಯ ಇಲಾಖೆ, ವಕೀಲರ ಸಂಘದ ವತಿಯಿಂದ ಶನಿವಾರ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಸದಾಕಾಲ ಅದು ಶಾಶ್ವತವಲ್ಲ ಎಂದ ಅವರು, ಆತ್ಮಹತ್ಯೆಯಿಂದ ಪರಿಹಾರ ಸಾಧ್ಯ ಎಂಬ ಆಲೋಚನೆಯನ್ನು ಕೈಬಿಡಬೇಕು. ಆತ್ಮಹತ್ಯೆಯಿಂದ ಸಮಸ್ಯೆಗಳ ಮತ್ತಷ್ಟು ಬಿಗಡಾಯಿಸಲಿವೆ ಎಂಬ ಸತ್ಯವನ್ನು ಅರಿಯಬೇಕು. ಪ್ರತಿಯೊಬ್ಬರೂ ಧೈರ್ಯ ದಿಂದ ಬದುಕನ್ನು ಎದುರಿಸುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಾರೂಕ್ ಝಾರೆ ಮಾತನಾಡಿ, ಆತ್ಮಹತ್ಯೆ ಸಮಾಜದ ಬಹು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ದಿನದಲ್ಲಿ ಒತ್ತಡದ ಸಂದರ್ಭದಲ್ಲಿ ಆವೇಶಭರಿತರಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪರಿಸ್ಥಿತಿಯ ಒತ್ತಡಕ್ಕೆ ಅಮೂಲ್ಯಸುಂದರ ಬದುಕನ್ನು ಅಂತ್ಯಗೊಳಿಸದೆ ತಜ್ಞ ವೈದ್ಯರ ಜೊತೆ ಚರ್ಚಿಸಿ ಚಿಕಿತ್ಸೆ ಸಮಾಲೋಚನೆಯ ಮೂಲಕ ಪರಿಹಾರ ಕಂಡುಕೊಳ್ಳಲು ತಿಳಿಸಿದರು.
ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಒಳಗಾಗಿ ನಂಬಿದ ಕುಟುಂಬಕ್ಕೆ ದ್ರೋಹ ಬಗೆಯದಂತೆ ಜಾಗೃತಿ ರೂಪಿಸಲು ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಪ್ರಸನ್ನಕುಮಾರ್,ಸರಕಾರಿ ನ್ಯಾಯಾವಾದಿ ದಾದಾಪೀರ್‌ಬಾನುವಳ್ಳಿ, ತಾ.ವೈದ್ಯಾಧಿಕಾರಿ ಡಾ.ಮಂಜುನಾಥ,ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಮಾನಸಿಕ ರೋಗ ತಜ್ಞ ಡಾ.ಸಂಜಯ್, ಗೀತಾ,ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರ್,ಪಾಂಡು,ಎನ್.ವಿ ಸುರೇಶ್,ಅಶೋಕ್, ಜ್ಯೋತಿ ಕಿರಣ್, ನ್ಯಾಯಾಲಯದ ಸಿಬ್ಬಂದಿ ಶಫಿ ಅರ್ಮಾನ್ ಮತ್ತಿತರರು ಉಪಸ್ಥಿತರಿದ್ದರು.







