ಹೆಲ್ಪಿಂಗ್ ಹ್ಯಾಂಡ್ಸ್ ಕರೈ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

ಬಂಟ್ವಾಳ, ಸೆ.18: ಹೆಲ್ಪಿಂಗ್ ಹ್ಯಾಂಡ್ಸ್ ಕರೈ, ಕೊಳ್ನಾಡು ಮತ್ತು ಯೆನೆಪೊಯ ಮೆಡಿಕಲ್ ಆಸ್ಪತ್ರೆ ಹಾಗೂ ರಕ್ತ ನಿಧಿ ಇವುಗಳ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಸಾಲೆತ್ತೂರು ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಿವೃತ ಜಿಲ್ಲಾ ಕ್ಷಯರೋಗ ಅಧಿಕಾರಿ ರಾಮಚಂದ್ರ ಶಾಸ್ತ್ರಿ ಉದ್ಘಾಟಿಸಿ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಯುವಕರ ಸಾಮಾಜಿಕ ಕೆಲಸಗಳನ್ನು ಶ್ಲಾಘಿಸಿದರು.
ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಜೀವವನ್ನು ಉಳಿಸುವ ಅಥವಾ ಪುನರ್ ಜೀವ ಕೊಡುವ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದರಿಂದ ಮನಸ್ಸಿಗೆ ತುಂಬಾ ತೃಪ್ತಿ ಸಿಗುತ್ತದೆ. ಇಂತಹ ಟ್ರಸ್ಟ್ ನಮ್ಮ ಗ್ರಾಮದಲ್ಲಿರುವುದು ನಮ್ಮ ಗ್ರಾಮದ ಹೆಮ್ಮೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ ರಕ್ತದಾನ ಮಹಾದಾನ. ಜಾತಿ ಮತ ಭೇದವಿಲ್ಲದೆ ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜಾತ್ಯಾತೀತ ಜನತಾ ದಳದ ವಿಟ್ಲ ಬ್ಲಾಕ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅಡ್ಯಂತಾಯ, ಎಸ್‌ಡಿಪಿಐ ಕೊಳ್ನಾಡು ವಲಯಾಧ್ಯಕ್ಷ ಖಾದರ್ ಸಾಲೆತ್ತೂರು, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಸಿ.ಎಚ್.ಅಬೂಬಕರ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಹೆಲ್ಪಿಂಗ್ ಹ್ಯಾಂಡ್ಸ್ ಕರೈ ಚೇರ್ ಮ್ಯಾನ್ ಎಚ್.ಎಂ.ಖಾಲಿದ್ ಕರೈ, ಹೆಲ್ಪಿಂಗ್ ಹ್ಯಾಂಡ್ಸ್ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ನೌಫಲ್ ಕೆ.ಬಿ.ಎಸ್. ಸ್ವಾಗತಿಸಿ ವಂದಿಸಿದರು.







