Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮನುಷ್ಯರು ಹಾಲನ್ನು ಕುಡಿಯುವುದು ಹಸುಗಳ...

ಮನುಷ್ಯರು ಹಾಲನ್ನು ಕುಡಿಯುವುದು ಹಸುಗಳ ಪಾಲಿಗೆ ಪರಮಾವಧಿ ಕ್ರೌರ್ಯ: ದಿಲ್ಲಿ ಎನ್ಜಿಒ

ವಾರ್ತಾಭಾರತಿವಾರ್ತಾಭಾರತಿ18 Sept 2016 11:45 PM IST
share
ಮನುಷ್ಯರು ಹಾಲನ್ನು  ಕುಡಿಯುವುದು ಹಸುಗಳ ಪಾಲಿಗೆ ಪರಮಾವಧಿ ಕ್ರೌರ್ಯ: ದಿಲ್ಲಿ ಎನ್ಜಿಒ

ಕೆಲವು ಹಿಂದುತ್ವ ಗುಂಪುಗಳು ಗೋರಕ್ಷಣೆಯನ್ನು ಹಾಸ್ಯಾಸ್ಪದ ಮಟ್ಟಕ್ಕೊಯ್ದಿವೆಯಾದರೂ ಹಾಲನ್ನು ಕುಡಿಯುವುದು ಹಸುಗಳು ಮತ್ತು ಎಮ್ಮೆಗಳಂತಹ ಹಾಲು ನೀಡುವ ಪ್ರಾಣಿಗಳ ಪಾಲಿಗೆ ಪರಮಾವಧಿ ಕ್ರೌರ್ಯವಾಗುತ್ತದೆ ಎನ್ನುವುದು ಅವರಲ್ಲಿ ಒಬ್ಬರಿಗೂ ಗೊತ್ತಿಲ್ಲ ಎಂದು ವಿಶ್ವಾಸದಿಂದ ಹೇಳಬಹುದಾಗಿದೆ.

ಭಾರತದಲ್ಲಿ ಹಾಲನ್ನು ಸರ್ವರೋಗಗಳಿಗೂ ಸಂಜೀವಿನಿ ಎಂದೇ ಭಾವಿಸಲಾಗುತ್ತಿದೆ. ಅಷ್ಟೇ ಅಲ್ಲ, ಶ್ವೇತ ಕ್ರಾಂತಿಗೆ ಮುನ್ನ ಹಾಲು ದುಬಾರಿಯ ಮತ್ತು ಐಷಾರಾಮಿ ವಸ್ತುವಾಗಿದ್ದ ಭಾರತದಲ್ಲಿಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯನ್ನು ಸಮೃದ್ಧಿಯ ಸಂಕೇತವನ್ನಾಗಿ ಪರಿಗಣಿಸಲಾಗುತ್ತಿದೆ.

 ದಿಲ್ಲಿಯ ಭಾರತೀಯ ಪ್ರಾಣಿ ರಕ್ಷಣೆ ಸಂಸ್ಥೆಗಳ ಒಕ್ಕೂಟ(ಎಫ್‌ಐಎಪಿಒ) ಮತ್ತು ಆ್ಯನಿಮಲ್ ರೈಟ್ಸ್ ಗುಂಪು ಹಾಲಿನ ಸೇವನೆ ಹಸುಗಳ ಪಾಲಿಗೆ ನಾವು ಎಸಗುತ್ತಿರುವ ಘೋರ ಕ್ರೌರ್ಯ ಮತ್ತು ಒಂದು ಪಾನೀಯವಾಗಿ ಅದು ವಯಸ್ಕರ ಆರೋಗ್ಯಕ್ಕೆ ಸಂಪೂರ್ಣ ಅನಗತ್ಯವಾಗಿದೆ ಎನ್ನುವುದನ್ನು ಪ್ರಮುಖವಾಗಿ ಬಿಂಬಿಸುವ ಮೂಲಕ ಈ ಎಲ್ಲ ಭಾವನೆಗಳನ್ನು ಬದಲಿಸಲು ಬಯಸಿದೆ. ಇದಕ್ಕಾಗಿ ಅದು ಮುಂದಿನ ವಾರದಿಂದ ‘ಡೋಂಟ್ ಗೆಟ್ ಮಿಲ್ಕ್ಡ್’ ಹೆಸರಿನಲ್ಲಿ ಆನ್‌ಲೈನ್ ಅಭಿಯಾನವೊಂದನ್ನು ಆರಂಭಿಸಲಿದೆ.

ಡೇರಿಗಳಲ್ಲಿ ಹಸುಗಳ ಶೋಷಣೆ

ವರ್ಷಗಳು ಉರುಳುತ್ತಿರುವಂತೆ ಹಾಲು ಮತ್ತು ಡೇರಿ ಉತ್ಪನ್ನಗಳಿಗೆ ಬೇಡಿಕೆ ಎಷ್ಟೊಂದು ಹೆಚ್ಚುತ್ತಿದೆಯೆಂದರೆ ತಮ್ಮ ಬಳಿಯಿರುವ ಜಾನುವಾರುಗಳನ್ನು ಕ್ರೌರ್ಯಕ್ಕೊಳಪಡಿಸದೇ ಈ ಬೇಡಿಕೆಯನ್ನು ಈಡೇರಿಸುವುದು ಡೇರಿ ಉದ್ಯಮಿಗಳಿಗೆ ಅಸಾಧ್ಯವಾಗಿದೆ.

    ಈ ಕ್ರೌರ್ಯ ಕರುವಿನ ಜನನದಿಂದಲೇ ಆರಂಭಗೊಳ್ಳುತ್ತದೆ. ಕರು ಹುಟ್ಟಿದ ಕೂಡಲೇ ಅದನ್ನು ತಾಯಿ ಹಸುವಿನಿಂದ ಪ್ರತ್ಯೇಕಗೊಳಿಸಲಾಗುತ್ತದೆ. ಇದು ಅವೆರಡರ ಪಾಲಿಗೂ ವಿನಾಶಕಾರಿ ಪರಿಪಾಠವಾಗಿದೆ. ಹೆಣ್ಣು ಕರುಗಳಿಗೆ ಬದುಕುಳಿಯುವ ಅದೃಷ್ಟವಿದ್ದರೆ, ಬೆಳೆದ ಮೇಲೆ ಹಾಲನ್ನು ನೀಡದ ಗಂಡು ಕರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ ಅಥವಾ ಸುಮ್ಮನೆ ಬೀದಿಗಳಲ್ಲಿ ಬಿಟ್ಟು ಬಿಡಲಾಗುತ್ತದೆ ಎನ್ನುತ್ತಾರೆ ಎಫ್‌ಐಎಪಿಒದ ನಿರ್ದೇಶಕ ಅರ್ಪಣ್ ಶರ್ಮಾ.

ತಾನು ಹೆತ್ತ ಕರುವನ್ನು ಕಳೆದುಕೊಂಡ ತಾಯಿ ಹಸುವಿಗೆ ಹಾಲನ್ನು ಉತ್ಪಾದಿಸಲು ಮಾನಸಿಕ ಪ್ರಚೋದನೆ ದೊರೆಯುವುದಿಲ್ಲ. ಹೀಗಾಗಿ ಆಕ್ಸಿಟೋಸಿನ್ ಹಾರ್ಮೋನಿನ ಚುಚ್ಚುಮದ್ದು ನೀಡುವುದೊಂದೇ ಅದು ಹಾಲು ಉತ್ಪಾದಿಸುವಂತೆ ಮಾಡಲು ಇರುವ ಮಾರ್ಗವಾಗಿದೆ. ಹಾಗೆ ಮಾಡುವುದು ಕಾನೂನು ಬಾಹಿರವಾಗಿದೆ, ಆದರೆ ಎಲ್ಲ ಡೇರಿಗಳು ಅದನ್ನು ಮಾಡುತ್ತವೆ ಎಂದು ಅವರು ಹೇಳಿದರು.

   ಕಸಾಯಿಖಾನೆ ಸೇರುವುದರಿಂದ ಉಳಿದುಕೊಂಡ ಹೆಣ್ಣು ಕರುಗಳು ಬೆಳೆದು ದೊಡ್ಡವಾದಾಗ ಅವುಗಳಿಗೆ ಕೃತಕ ಗರ್ಭಧಾರಣೆಯನ್ನು ಮಾಡಿಸಲಾಗುತ್ತದೆ. ಯೋನಿಯ ಮೂಲಕ ಬಲಪ್ರಯೋಗವನ್ನೊಳಗೊಂಡ ಈ ಪ್ರಕ್ರಿಯೆ ಹಸುವಿಗೆ ತೀರ ಯಾತನಾದಾಯಕವಾಗಿರುತ್ತದೆ ಎಂದು ಬೆಟ್ಟುಮಾಡಿದ ಶರ್ಮಾ, ಗೋವು ನಿಜಕ್ಕೂ ನಮ್ಮ ಮಾತೆಯಾಗಿದ್ದರೆ ಮತ್ತು ನಾವೆಲ್ಲ ಅದನ್ನು ನಂಬುತ್ತೇವಾದರೆ ಅತ್ಯಾಚಾರದಂತಹ ಈ ಪ್ರಕ್ರಿಯೆ ಆಕೆಯ ಮೇಲೆ ನಡೆಯುತ್ತಿರುವುದನ್ನು ನಾವು ಹೇಗೆ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಹಂದಿಯೊಂದು ನಾಯಿಯ ಹಾಲನ್ನು ಕುಡಿಯುವುದನ್ನು ಯಾರಾದರೂ ನೋಡಿದ್ದಾರಾ? ಹಾಗಿರುವಾಗ ನಾವು ಹಸುಗಳ ಹಾಲನ್ನು ಸೇವಿಸುವುದು ಏಕೆ? ಮನುಷ್ಯನನ್ನು ಹೊರತುಪಡಿಸಿ ಬೇರೆ ಯಾವುದೇ ಸಸ್ತನಿಯು ಇನ್ನೊಂದು ಸಸ್ತನಿಯ ಹಾಲನ್ನು ಕುಡಿಯುವುದಿಲ್ಲ. ಮಾನವ ಜೀವಿ ಹಾಲನ್ನು ಕುಡಿಯುವುದು ಅಗತ್ಯವಾಗಿದೆ....ಆದರೆ ತಾಯಿಯ ಹಾಲನ್ನು, ಅದೂ ನಿರ್ದಿಷ್ಟ ವಯಸ್ಸಿನವರೆಗೆ. ಅದರ ನಂತರವೂ ಮಾನವರಿಗೆ ಹಾಲು ಅಗತ್ಯವೆಂದಿದ್ದರೆ ಪ್ರಕೃತಿಯು ಅದಕ್ಕೇನಾದರೂ ವ್ಯವಸ್ಥೆಯನ್ನು ಕಲ್ಪಿಸಿರುತ್ತಿತ್ತು ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X