ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಡ್ವೊಕೇಟ್ ಜನರಲ್ ಕಚೇರಿ ಡಿಜಿಟಲೀಕರಣ
ಎಲ್ಲ ಸರಕಾರಿ ವಕೀಲರಿಗೆ 'ಲ್ಯಾಪ್‌ಟಾಪ್ ಭಾಗ್ಯ'
ಬೆಂಗಳೂರು, ಸೆ.18: ಹೈಕೋರ್ಟ್‌ಗಳಲ್ಲಿ ಸರಕಾರಿ ವಕೀಲರು ಪ್ರಕರಣಗಳಿಗೆ ಸಂಬಂಧಿಸಿದಂತೆ ದೊಡ್ಡ-ದೊಡ್ಡ ಕಡತಗಳನ್ನು ಹೊತ್ತು ಸಾಗುವುದು ಸಾಮಾನ್ಯವಾಗಿತ್ತು. ಆದರೆ, ಇನ್ನು ಮುಂದೆ ಫೈಲುಗಳ ರಾಶಿಯನ್ನು ಹಿಡಿದುಕೊಂಡು ಓಡಾಡುವ ಸಂಕಷ್ಟದಿಂದ ಮುಕ್ತಿಸಿಗಲಿದೆ. ಏಕೆಂದರೆ, ಸರಕಾರವು ಹೈಕೋರ್ಟ್‌ನ ಸರಕಾರಿ ವಕೀಲರಿಗೆ ಲ್ಯಾಪ್‌ಟಾಪ್ ಭಾಗ್ಯ ಕರುಣಿಸಿದೆ. ಸರಕಾರ ಪ್ರಕರಣಗಳ ಶೀಘ್ರ ವಿಲೇವಾರಿ ದೃಷ್ಟಿಯಿಂದ ಅಡ್ವೊಕೇಟ್ ಜನರಲ್ ಕಚೇರಿಯನ್ನು ಸಂಪೂರ್ಣ ಡಿಜಿಟಲೀ ಕರಣ ಮಾಡಲು ಮುಂದಾಗಿದ್ದು, ಎಲ್ಲ ಸರಕಾರಿ ವಕೀಲರಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿ ಹೈಟೆಕ್ ಟಚ್ ನೀಡುತ್ತಿದೆ. ಈಗಾಗಲೇ ಹೈಕೋರ್ಟ್ ಡಿಜಿಟಲೀಕರಣ ಆಗಿದೆ. ಆದರೆ, ಹೈಕೋರ್ಟ್‌ನಲ್ಲಿ ಅಡ್ವೊಕೇಟ್ ಜನರಲ್ ಕಚೇರಿ ಮಾತ್ರ ಪ್ರಕರಣಗಳ ಸಂಬಂಧ ದಾಖಲಾತಿಗಳನ್ನು ಹೊತ್ತೊಯ್ದು ದಿನನಿತ್ಯ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳ ಜೊತೆ ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆ ಸಂಗ್ರಹಿಸಲು ಮತ್ತು ಇಲಾಖೆಗಳ ಜೊತೆ ಸಂಪರ್ಕಿಸಲು ವಿಳಂಬವಾಗುತ್ತಿರುವುದನ್ನು ಮನಗಂಡ ಸರಕಾರಿ ವಕೀಲರಿಗೆ ಲ್ಯಾಪ್‌ಟಾಪ್ ನೀಡಲು ಸರಕಾರ ನಿರ್ಧರಿಸಿದೆ. ್ವೊಕೇಟ್ ಜನರಲ್ ಕಚೇರಿಯನ್ನು ಡಿಜಿಟಲೀಕರಣ ಮಾಡಲು ಎಜಿ ಮಧೂಸೂದನ್‌ನಾಯ್ಕಾ ನೇತೃತ್ವದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಿವಣ್ಣ ಮತ್ತು ಪೊನ್ನಣ್ಣ ಒಳಗೊಂಡ ಸಮಿತಿಯನ್ನು ರಚಿಸಿ ಕಳೆದ ವರ್ಷದಿಂದ ಈ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಲೀಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶೀಘ್ರದಲ್ಲೇ ಬೇಕಾಗಿರುವ ಸಾಫ್ಟ್‌ವೇರ್, ಕಂಪ್ಯೂಟರ್, ನೆಟ್‌ವರ್ಕ್, ವೈಫೈ, ಝೇರಾಕ್ಸ್ ಯಂತ್ರ ಸೇರಿ ಇತರ ಉಪಕರಣಗಳ ಖರೀದಿಗೆ ಸರಕಾರದಿಂದ ಅನುಮತಿ ಪಡೆದು ಟೆಂಡರ್ ಕರೆಯಲು ಚಿಂತನೆ ನಡೆಸಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯು ಸುಮಾರು 6 ಕೋಟಿ ರೂ.ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಜೆಟ್‌ನಲ್ಲೂ ಇದಕ್ಕೆ ಅನುಮೋದನೆ ಪಡೆದು ಕೊಳ್ಳಲಾಗಿದೆ. ಲ್ಯಾಪ್‌ಟಾಪ್ ಉದ್ದೇಶವೇನು?: ಹೈಕೋರ್ಟ್ ಕಾಗದರಹಿತ ಕಲಾಪಗಳನ್ನು ನಡೆಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬಹುತೇಕ ಪ್ರಕರಣಗಳು ಸರಕಾರಕ್ಕೆ ಸಂಬಂಧಿಸಿದ್ದಾಗಿದ್ದು, ಹೈಕೋರ್ಟ್‌ನಲ್ಲಿ ಸೂಕ್ತವಾದ ಮಾಹಿತಿ ನೀಡಲು ಸಂಬಂಧಪಟ್ಟ ಇಲಾಖೆ ಗಳಿಂದ ಸ್ಪಷ್ಟ ಮತ್ತು ನಿಖರ ದಾಖಲೆಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ. ಇದರಿಂದ, ಕೋರ್ಟ್ ಮತ್ತು ವಕೀಲರ ಸಮಯ ಹಾಳಾಗದೆ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಲು ಸಹಾಯವಾಗುತ್ತದೆ. ಜೊತೆಗೆ, ಸರಕಾರದ ವಿರುದ್ಧ ಯಾವುದೇ ಕೇಸ್ ದಾಖಲಾದರೆ ಅದಕ್ಕೆ ಸಂಬಂಧಿಸಿದ ವಕೀಲರಿಗೆ ಅರ್ಜಿಗಳ ಪ್ರತಿಗಳು ಶೀಘ್ರ ತಲುಪಿ, ಅದರ ಅಧ್ಯಯನಕ್ಕೆ ಸಹಕಾರಿಯಾಗಲಿದೆ.





