Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ19 Sept 2016 12:15 AM IST
share

*ದಿನವೂ ಸುದ್ದಿಗೋಷ್ಠಿ ಮಾಡಿ ಬ್ರೇಕಿಂಗ್ ಸುದ್ದಿ ಕೊಡುತ್ತೇನೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
 ನಿರುದ್ಯೋಗ ತೀವ್ರವಾಗಿ ಕಾಡುತ್ತಿದ್ದರೆ, ಯಾವುದಾದರೂ ಟಿವಿ ಚಾನೆಲ್‌ಗೆ ಆ್ಯಂಕರ್ ಆಗಿ ಸೇರಬಹುದಲ್ಲವೇ?
---------------------
  ಹಿಂದೂ ಸಮಾಜದ ಆಚರಣೆಗಳು ಗೊಂದಲಕಾರಿಯಾಗಿವೆ
-ಡಾ.ಜಿ. ಪರಮೇಶ್ವರ್, ಗೃಹ ಸಚಿವ
  ಗೃಹ ಇಲಾಖೆಯ ವರ್ತನೆಗಳು ಕೂಡ.

---------------------
  ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು
-ಕೆ.ಎಸ್. ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ
  ಶೋಭಾ ಕರಂದ್ಲಾಜೆಯನ್ನು ಸೆಳೆಯುವ ಯತ್ನವೇ?
---------------------
  ಕಮ್ಯುನಿಷ್ಟರು ಕೇರಳದಲ್ಲಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ
-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ  
ಉಡುಪಿಯಲ್ಲಿ ಪ್ರವೀಣ್ ಪೂಜಾರಿಯ ಹತ್ಯೆಯ ಕುರಿತಂತೆ ಯಾರು, ಯಾರಿಗೆ ಮನವಿ ಕೊಡಬೇಕು ಎನ್ನುವುದನ್ನೂ ತಾವೇ ಹೇಳಿ ಬಿಡಿ.

---------------------
  ಜೈಲಿಗೆ ಹೋದರೂ ಸರಿ, ತಮಿಳುನಾಡಿಗೆ ನೀರು ಬಿಡಬೇಡಿ
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ತಾವು ಜೈಲಿಗೆ ಯಾವಾಗ ಹೋಗುತ್ತೀರಿ ಎನ್ನುವುದನ್ನು ಮೊದಲು ತಿಳಿಸಿ.

---------------------
   ಯಡಿಯೂರಪ್ಪರನ್ನು ಹದ್ದು ಬಸ್ತಿನಲ್ಲಿಡಲು ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿದ್ದಾರೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
 ಸಿದ್ದರಾಮಯ್ಯ ಅವರನ್ನು ಹದ್ದು ಬಸ್ತಿನಲ್ಲಿಡಲು ಪೂಜಾರಿಯವರು ಕೋಟಿ ಚೆನ್ನಯ ಬ್ರಿಗೇಡ್ ರಚಿಸಲು ಹೊರಟಿದ್ದಾರಂತೆ.

---------------------
  ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ ರೂಪದ ವಿಷಗಳಾಗಿವೆ
-ಕಂ.ವೀರಭದ್ರಪ್ಪ, ಸಾಹಿತಿ
 ಸಾಹಿತಿಗಳ ಪಕ್ಷಗಳ ಕುರಿತಂತೆಯೂ ಒಂದಿಷ್ಟು ಹೇಳಿ.

---------------------
  ಅಲ್ ಖಾಯಿದಾ, ಐಸಿಸ್‌ನಂತಹ ಸಂಘಟನೆಗಳಿಗೆ ಅಮೆರಿಕದಂತಹ ಮಹಾನ್ ದೇಶವನ್ನು ಸೋಲಿಸಲು ಎಂದಿಗೂ ಆಗದು
-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ
  ಅಮೆರಿಕವನ್ನು ಸೋಲಿಸಲು ಅಮೆರಿಕವೇ ಸಾಕು.

---------------------
   ಪ್ರಧಾನಿ ಮೋದಿ ತನ್ನ 15 ಲಕ್ಷದ ಸೂಟ್‌ಗೆ ಕೊಳೆಯಾಗುತ್ತದೆ ಎಂಬ ಕಾರಣಕ್ಕೆ ಬಡವರನ್ನು ಭೇಟಿಯಾಗುವುದಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ವಿದೇಶಗಳಲ್ಲಿ ಭಾರತದ ಬಡವರು ಇಲ್ಲದಿರುವುದು ಇನ್ನೊಂದು ಕಾರಣ.

---------------------
  ಶೀಘ್ರದಲ್ಲೇ ‘ಪತಂಜಲಿ ಜೀನ್ಸ್’ ಮಾರುಕಟ್ಟೆಗೆ
-ಬಾಬಾ ರಾಮ್‌ದೇವ್, ಯೋಗ ಗುರು
 ಇನ್ನು ಮುಂದೆ ತಾವು ಜೀನ್ಸ್ ಹಾಕಿಯೇ ಯೋಗ ಮಾಡಬಹುದು.

---------------------
  ಲೈಟ್ ಆಫ್ ಮಾಡಿ ಹಣ್ಣಿನ ರಸ ಹೀರಿದರೂ ಒಂದು ಪೆಗ್ ಹಾಕಿದ ಅನುಭವ ಸಿಗುತ್ತೆ
-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
 ಬಹುಶಃ ಲೈಟ್ ಆಫ್ ಮಾಡಿ ಹಣ್ಣಿನ ರಸ ಹೀರುತ್ತಾ ನೀಡಿರುವ ಹೇಳಿಕೆ ಇದು.

---------------------
  ಈ ಬಾರಿಯ ಬಕ್ರೀದ್ ಅನ್ನು ಕಾಶ್ಮೀರಿ ಜನತೆಗೆ ಅರ್ಪಿಸುತ್ತೇವೆ
-ನವಾಝ್ ಶರೀಫ್, ಪಾಕ್ ಪ್ರಧಾನಿ
  ಅಂದರೆ ಅವರನ್ನೇ ಈದ್‌ಗೆ ಬಲಿಕೊಡಬೇಕು ಎಂದಿದ್ದೀರಾ?
---------------------
  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ
-ದೇವೇಗೌಡ, ಮಾಜಿ ಪ್ರಧಾನಿ
  ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಕಾರಣಕ್ಕಾಗಿ ರಾಜೀನಾಮೆ ನೀಡಿರಲಿಲ್ಲವೇ?
---------------------
  ಕಾವೇರಿ ವಿವಾದದಿಂದ ತುಂಬಾ ನೋವಾಗಿದೆ
-ನರೇಂದ್ರ ಮೋದಿ, ಪ್ರಧಾನಿ
  ಗುಜರಾತ್ ಹತ್ಯಾಕಾಂಡದಿಂದಲೂ ನಿಮಗೆ ತುಂಬಾ ನೋವಾಗಿರಬೇಕಲ್ಲ?
---------------------
  ಪತ್ರಕರ್ತರು ಜಾತಿ, ಧರ್ಮ, ಪ್ರಾದೇಶಿಕತೆ ಹೆಸರಿನಲ್ಲಿ ಭಯೋತ್ಪಾದನೆ ಬಿತ್ತಬಾರದು
-ವೆಂಕಯ್ಯನಾಯ್ಡು, ಕೇಂದ್ರ ಸಚಿವ
  ಭಯೋತ್ಪಾದನೆ ಬಿತ್ತದೇ ಪತ್ರಿಕೋದ್ಯಮವನ್ನು ಬೆಳೆಸುವ ಬಗೆ ಹೇಗೆ?
---------------------
  ಅರುಣಾಚಲದ ಈಗಿನ ಸರಕಾರ ಬಿಜೆಪಿಯ ಅಕ್ರಮ ಸಂತಾನ
-ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
  ತಮ್ಮ ಸಕ್ರಮ ಸಂತಾನಗಳೆಲ್ಲ ಏನಾದವು?
---------------------
  ಕರಾವಳಿಯ ಯುವಕರು ಕೋಮುವಾದಿಗಳ ಕೈವಶವಾಗುತ್ತಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
  ರಾಜಕಾರಣಿಗಳು ಕೋಮುವಾದಿಗಳ ಕೈಗೆ ಒಪ್ಪಿಸುತ್ತಿದ್ದಾರೆ ಎಂದರೆ ಉತ್ತಮ.

---------------------
  ಸಮಾಜವಾದಿ ಪಕ್ಷ ಒಂದು ಕುಟುಂಬವಿದ್ದಂತೆ
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ
  ಅವಿಭಕ್ತ ಕುಟುಂಬ ಒಡೆಯುವುದು ಸಹಜ ಅಂತೀರಾ?
---------------------
  ನೈಜ ರಾಜಕಾರಣಿ ಪಾತ್ರದಲ್ಲಿ ನಾನು ವಿಫಲವಾದೆ
-ಅಮಿತಾಭ್ ಬಚ್ಚನ್, ನಟ
 ನಟಿಸುವಲ್ಲಿ ವಿಫಲವಾದೆ ಎಂದರೆ ಚೆನ್ನಾಗಿತ್ತು.

---------------------
  ಎಲ್ಲ ಪ್ರಾಕೃತಿಕ ಸಂಪತ್ತುಗಳು ನಮ್ಮ ಆವಶ್ಯಕತೆಗೆ ಅನುಗುಣವಾಗಿದೆ
-ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಎಲ್ಲವೂ ನಿಮ್ಮ ಆವಶ್ಯಕತೆಗೆ ಅನುಗುಣವಾಗಿದ್ದರೆ, ಬಡವರು ತಮ್ಮಿಂದ ಬಡ್ಡಿಗೆ ಪಡೆದು ಅದನ್ನು ಬಳಸಬೇಕೇ?
---------------------
  ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಜಾರಿಯಾಗಲಿದೆ
-ಯು.ಟಿ ಖಾದರ್, ಸಚಿವ
  ಕಾಂಗ್ರೆಸ್‌ನ ಅಳಿದುಳಿದ ನಿರ್ಗತಿಕರಿಗೆ?
---------------------
  ಗೋವನ್ನು ರಾಜಕೀಯದಿಂದ ಮುಕ್ತಗೊಳಿಸಬೇಕು
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಆಮೇಲೆ ನಿಮಗೇನು ಕೆಲಸ?

share
ಪಿ.ಎ. ರೈ
ಪಿ.ಎ. ರೈ
Next Story
X