ಈ ‘ತಾರೆ’ ಯಾರು ಹೇಳಿ ನೋಡೋಣ !
ಈಗ ಈತ ಏನು ಮಾಡುತ್ತಿದ್ದಾನೆ ಗೊತ್ತೇ ?

ಮುಂಬೈ, ಸೆ.19: ಇಲ್ಲಿ ಕಾಣಿಸಿರುವ ಚಿತ್ರದಲ್ಲಿರುವ ತಾರೆ ಯಾರೆಂದು ಹೇಳಬಲ್ಲಿರಾ ? ಪಕ್ಕನೆ ಯಾರಿಗೂ ಗುರುತು ಸಿಗಲಿಕ್ಕಿಲ್ಲ ಅಲ್ಲವೇ ? ಈತನೇ ಅಮೀರ್ ಖಾನ್ ಅಭಿನಯದ ತಾರೇ ಝಮೀನ್ ಪರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮುದ್ದು ಮುಖದ ಮುಗ್ಧ ಬಾಲಕ ಇಶಾನ್ ಅವಸ್ಥಿ.
ಈತನ ನಿಜ ಜೀವನದ ನಾಮಧೇಯ ದರ್ಶೀಲ್ ಸಫಾರಿ. ಈಗ 19 ರ ಯುವಕನಾಗಿರುವ ದರ್ಶೀಲ್ ರವಿವಾರ ಮುಂಬೈಯಲ್ಲಿ ಪ್ರದರ್ಶನಗೊಂಡ ಅಭಿಷೇಕ್ ಪಟ್ನಾಯಕ್ ಅವರ ನಿರ್ದೇಶನದ ನಾಟಕ ‘ಕ್ಯಾನ್ ಐ ಹೆಲ್ಪ್ ಯೂ ?’’ ನಲ್ಲಿ ಕಾಣಿಸಿಕೊಂಡಿದ್ದಾನೆ. ಇದು ದರ್ಶೀಲ್ ಅಭಿನಯದ ಮೊದಲ ನಾಟಕವಾಗಿದ್ದು ಇಲ್ಲಿ ಆತ ಆಕ್ರಮಣಕಾರಿ ವೇಗದ ಬೌಲರ್ ಒಬ್ಬನ ಪಾತ್ರ ಮಾಡುತ್ತಿದಾನೆ.
ತಾರೆ ಝಮೀನ್ ಪರ್ ಚಿತ್ರದ ನಂತರ ಬೇರೆ ಯಾವುದೇ ಚಿತ್ರದಲ್ಲೂ ಆತ ಕಾಣಿಸಿಕೊಳ್ಳದೇ ಇದ್ದರೂ ನಾಟಕ ರಂಗದತ್ತ ಹೆಚ್ಚು ಆಕರ್ಷಿತನಾಗಿದ್ದ. 2013 ರಿಂದ ರಂಗಭೂಮಿಯಲ್ಲಿ ಸಕ್ರಿಯುನಾಗಿರುವ ದರ್ಶೀಲ್ ಪ್ರೇಕ್ಷಕರ ಮುಂದೆ ಅಭಿನಯಿಸುವುದು ಹೆಚ್ಚು ಸವಾಲಿನ ಕೆಲಸವೆಂದು ಹೇಳುತ್ತಾನೆ.
Next Story





