ಸೌಮ್ಯಾಳ ಅಮ್ಮನಿಗೆ ಅಪರಿಚಿತನಿಂದ ಕೊಲೆ ಬೆದರಿಕೆ

ಶೋರ್ನೂರು, ಸೆಪ್ಟಂಬರ್ 19: ಸೌಮ್ಯಾ ಕೊಲೆಪ್ರಕರಣದ ಆರೋಪಿ ಗೋವಿಂದಚಾಮಿಯ ಕೇಸನ್ನು ಮುಂದುವರಿಸಿದರೆ ನಿಮಗೆ ಕಷ್ಟವಾಗಬಹುದು ಎಂದು ಸೌಮ್ಯಾಳ ತಾಯಿ ಸುಮಿತ್ರಾರಿಗೆ ಫೋನ್‌ಮೂಲಕ ಕೊಲೆ ಬೆದರಿಕೆ ಒಡ್ಡಲಾಗಿದೆ. ಮೊನ್ನೆ ರಾತ್ರಿಅಪರಿಚಿತನು ಫೋನ್ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ.ಶೋರ್ನೂರು ಪೊಲೀಸರು ಸುಮಿತ್ರಾ ಅವರ ಮನೆಗೆ ತೆರಳಿ ಅವರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಕರೆಮಾಡಲಾದ ಫೋನ್ ನಂಬರ್ ಲಭಿಸಿಲ್ಲ. ಕೋರ್ಟಿಗೆ ಪೊಲೀಸರು ಈಕುರಿತು ವಿವರವನ್ನು ಸಲ್ಲಿಸಲಿದ್ದಾರೆಂದು ವರದಿ ತಿಳಿಸಿದೆ.
Next Story





