Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವೃಂದಾವನದಲ್ಲಿ ಬರಲಿದೆ ವಿಶ್ವದ ಅತೀ...

ವೃಂದಾವನದಲ್ಲಿ ಬರಲಿದೆ ವಿಶ್ವದ ಅತೀ ಎತ್ತರದ ದೇವಾಲಯ

ಬುರ್ಜ್ ಖಲೀಫಾಕ್ಕಿಂತ ಹೆಚ್ಚು ಆಳ ಇದರ ಅಡಿಪಾಯ

ವಾರ್ತಾಭಾರತಿವಾರ್ತಾಭಾರತಿ19 Sept 2016 2:59 PM IST
share
ವೃಂದಾವನದಲ್ಲಿ ಬರಲಿದೆ ವಿಶ್ವದ ಅತೀ ಎತ್ತರದ ದೇವಾಲಯ

ವೃಂದಾವನದಲ್ಲಿ ಈ ನಿರ್ಮಾಣವಾಗುತ್ತಿರುವ ಚಂದ್ರೋದಯ ಮಂದಿರವನ್ನು ವಿಶ್ವದ ಅತೀ ಉದ್ದನೆಯ ದೇವಾಲಯವಾಗಿ ನಿರ್ಮಿಸಲು ಅಡಿಪಾಯ ಹಾಕಲಾಗುತ್ತಿದೆ. ಇದರ ನೆಲಗಟ್ಟು ದುಬೈನ ಪ್ರಸಿದ್ಧ ಬುರ್ಜ್ ಖಲೀಫಾಗಿಂತ ಐದು ಅಡಿ ಆಳದಲ್ಲಿ ಇರಲಿದೆ.

“ಬುರ್ಜ್ ಖಲೀಫಾದ ಫೌಂಡೇಶನ್ 50 ಮೀಟರ್‌ಗಳಷ್ಟು ಇದೆ. 55 ಮೀಟರ್ ಆಳದ ವೃಂದಾವನದ ದೇವಾಲಯದ ಫೌಂಡೇಶನ್‌ನಲ್ಲಿ 511 ಕಾಲಂಗಳಿರಲಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು. 140 ಕಾಲಂಗಳ ಕೆಲಸವು ಈಗಾಗಲೇ ಪೂರ್ಣಗೊಂಡಿದ್ದು, ಉಳಿದವು ನಿರ್ಮಾಣ ಹಂತದಲ್ಲಿವೆ” ಎಂದು ದೇವಾಲಯದ ಪ್ರೊಜೆಕ್ಟ್ ನಿರ್ದೇಶಕ ಮತ್ತು ಹಿರಿಯ ಉಪಾಧ್ಯಕ್ಷ ನರಸಿಂಹ ದಾಸ್ ಹೇಳಿದ್ದಾರೆ. ಎತ್ತರ, ಅರಣ್ಯಗಳು ಮತ್ತು ಥೀಮ್ ಪಾರ್ಕ್ ಮೊದಲಾಗಿ ಹಲವಾರು ಕಾರಣಗಳಿಂದ ಈ ದೇವಾಲಯ ವಿಶಿಷ್ಟವೆನಿಸಲಿದೆ. “ಥೀಮ್ ಪಾರ್ಕ್‌ನಲ್ಲಿ ಡಾರ್ಕ್ ರೈಡ್‌ಗಳು, ಅನಿಮ್ಯಾಟ್ರಾನಿಕ್ಸ್, ಬೆಳಕು, ಧ್ವನಿ ಮತ್ತು ವಿಶೇಷ ಇಫೆಕ್ಟ್‌ಗಳು ಮೊದಲಾದ ಆಕರ್ಷಣೆಗಳ ಜೊತೆಗೆ ವೃಂದಾವನದ ವಿಭಿನ್ನ ಅರಣ್ಯಗಳಲ್ಲಿ ಕೃಷ್ಣನ ವಿವಿಧ ಲೀಲೆಗಳನ್ನು ಸಂಭ್ರಮಾಚರಿಸುವ ವ್ರಜ ಮಂಡಲ ಪರಿಕ್ರಮ ಶೋಗಳು ಮತ್ತು ಲೇಸರ್ ಶೋಗಳನ್ನು ಆಯೋಜಿಸಲಾಗುವುದು. ಅಲ್ಲದೆ ಪಾರ್ಕಿನಲ್ಲಿ ಯಮುನಾ ಗ್ರೀಕ್, ಸಂಗೀತ ಕಾರಂಜಿ, ಹಗಲು-ರಾತ್ರಿ ವಿಹಾರ, ಉದ್ಯಾನವನಗಳು, ಲಾನ್‌ಗಳು, ನೀರಿನ ಫೀಚರ್‌ಗಳು ಮತ್ತು ಇತರ ವಿಶೇಷತೆಗಳು ಇರಲಿವೆ” ಎನ್ನುತ್ತಾರೆ ದಾಸ್.

ಇದರಲ್ಲಿ ನಾಲ್ಕು ದೇವಾಲಯಗಳು ಮತ್ತು 12 ಅರಣ್ಯಗಳು ಇರಲಿವೆ. ಈ ಅರಣ್ಯಗಳನ್ನು ದೇವಾಲಯದ ಪಕ್ಕದಲ್ಲೇ ವಿನ್ಯಾಸಗೊಳಿಸಲಾಗುತ್ತಿದ್ದು, ವ್ರಜದ 12 ಅರಣ್ಯಗಳ ಮರುನಿರ್ಮಾಣವಾಗಿರುತ್ತದೆ. ಮಧುವನ, ತಲವನ, ಕುಮುದವನ, ಬಹುಳವನ, ಕಾಮ್ಯವನ, ಖಾದಿರವನ, ವೃಂದಾವನ, ಭದ್ರಾವನ, ಬಿಲವನ, ಲೋಹಾವನ, ಭಾಂದಿರವನ ಮತ್ತು ಮಹಾವನ ಎನ್ನುವ 12 ಅರಣ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಈ ರಚನೆಯು ಪ್ರತೀ ತುದಿಯಲ್ಲಿ ನಾಲ್ಕು ದೇಗುಲಗಳಿರುವ ಪ್ಲಸ್ ಚಿಹ್ನೆಯಲ್ಲಿ ನಿರ್ಮಾಣವಾಗುತ್ತಿದೆ. ಈ ದೇವಾಲಯಗಳಲ್ಲಿ ಕೃಷ್ಣ-ರಾಧೆ, ಕೃಷ್ಣ-ಬಲರಾಮ, ಚೈತನ್ಯ ಮಹಾಪ್ರಭು ಮತ್ತು ಸ್ವಾಮಿ ಪ್ರಭುಪಾದರ ಪ್ರತಿಮೆಗಳು ಇರಲಿವೆ.

ಈ ದೇವಾಲಯ ಬೆಂಗಳೂರಿನ ಇಸ್ಕಾನ್ (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಮಾಜ) ಭಕ್ತಾದಿಗಳ ಕಲ್ಪನೆಯಾಗಿದ್ದು, ರು. 700 ಕೋಟಿ ವೆಚ್ಚದಲ್ಲಿ 2022 ಒಳಗೆ ನಿರ್ಮಾಣವಾಗಲಿದೆ. ಇದು 700 ಅಡಿಗಳ ವಿಶ್ವದ ಅತೀ ಉದ್ದನೆಯ ದೇವಾಲಯವಾಗಲಿದೆ. “ವೃಂದಾವನ ಚಂದ್ರೋದಯ ಮಂದಿರವು 700 ಅಡಿ ಅಥವಾ 210 ಮೀಟರ್‌ಗಳಷ್ಟು ಉದ್ದವಿರಲಿದೆ. 72.5 ಮೀಟರ್ ಇರುವ ದೆಹಲಿಯ ಕುತುಬ್ ಮಿನಾರ್‌ನ ಮೂರು ಪಟ್ಟು ಉದ್ದವಿರಲಿದೆ” ಎನ್ನುತ್ತಾರೆ ದಾಸ್.

ಕೃಪೆ: indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X