ನೀವು ಸದಾ ಕೇಳಬೇಕೆಂದುಕೊಂಡಿದ್ದ ಪ್ರಶ್ನೆ: ವಿಶ್ವವಿಖ್ಯಾತ ಲೋಗೋಗಳು ಹಾಗೂ ಅವುಗಳ ಅರ್ಥ

ಆಟೋಮೊಬೈಲ್ ಉದ್ಯಮದ ವಿನ್ಯಾಸವು ಕೇವಲ ವಾಹನದ ಒಳನೋಟ ಮತ್ತು ಹೊರನೋಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಆಟೋಮೊಬೈಲ್ ಉದ್ಯಮದ ತಯಾರಕರು ತಮ್ಮ ಉತ್ಪನ್ನಗಳ ಲೋಗೊಗಳ ಕಡೆಗೂ ಸಾಕಷ್ಟು ಗಮನ ಕೊಡುತ್ತಾರೆ. ಕಾರುಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಶಾಶ್ವತವಾಗಿ ಉಳಿಯುವುದು ಅವುಗಳ ಲೋಗೋಗಳು. ಕೆಲವು ಕಂಪೆನಿಗಳ ಲೋಗೋಗಳು ಸಂಸ್ಥೆಯ ಪ್ರಗತಿಯ ಜೊತೆಗೆ ಬೆಳೆದಿವೆ. ಸಾಮಾನ್ಯವಾಗಿ ಅವುಗಳು ಕಂಪೆನಿ ಸ್ಥಾಪಿಸಿದ ಸಂದರ್ಭದ ಉದ್ದೇಶ ಮತ್ತು ನಿಲುವುಗಳನ್ನೇ ಪ್ರತಿನಿಧಿಸುತ್ತವೆ. ಇಲ್ಲಿ ಕೆಲವು ಪ್ರಸಿದ್ಧ ಲೋಗೋಗಳು ಮತ್ತು ಅವುಗಳ ನಿಲುವುಗಳ ಬಗ್ಗೆ ವಿವರಿಸಿದ್ದೇವೆ.
ವೋಲ್ವೋ

ವೋಲ್ವೋದ ಲೋಗೋದಲ್ಲಿ ವೃತ್ತ ಮತ್ತು ಬಾಣವಿದೆ. ಇದು ಒಂದು ರೀತಿಯಲ್ಲಿ ಪುರುಷ ಕ್ರೊಮೋಸೋಮಿನ ರೀತಿಯಲ್ಲೇ ಇದೆ. ಆದರೆ ವಾಸ್ತವದಲ್ಲಿ ಇದು ಕಬ್ಬಿಣದ ಆಲ್ಕೆಮಿಕಲ್ ಚಿಹ್ನೆಯನ್ನು ಸೂಚಿಸುತ್ತದೆ. ಕಬ್ಬಿಣದ ಚಿಹ್ನೆಯನ್ನು ವೋಲ್ವೋ ಆಟೊಮೊಬೈಲ್‌ಗಳಲ್ಲಿನ ಸ್ವೀಡಿಷ್ ಕಬ್ಬಿಣವನ್ನು ಸೂಚಿಸಲು ಬಳಸಲಾಗಿದೆ. ಹಾಗೆ ತನ್ನ ಸಾಮರ್ಥ್ಯ ಮತ್ತು ಸ್ಥಿರತೆಗೆ ಉದಾಹರಣೆಯಾಗಿದೆ.
ಟಯೋಟ

ಹ್ಯೂಂಡೈನಂತೆ ಟಯೋಟಾ ಲೋಗೋ ಕೂಡ ತಮ್ಮ ಗ್ರಾಹಕ ಸಂಬಂಧಕ್ಕೇ ಪ್ರಾಮುಖ್ಯತೆ ನೀಡಿದೆ. ಟಯೋಟಾ ಲೋಗೋದಲ್ಲಿ ಮೂರು ಮೊಟ್ಟೆಯಾಕಾರದ ವೃತ್ತಗಳಿವೆ. 1989ರಲ್ಲಿ ಟಯೋಟೋ ಸೆಲ್ಸಿಯರ್ ಮೂಲಕ ಇದು ಪ್ರಚಲಿತವಾಯಿತು. ದೊಡ್ಡ ಮೊಟ್ಟೆಯಾಕಾರದ ಒಳಗೆ ಇನ್ನೆರಡು ಮೊಟ್ಟೆಗಳು ತೂರಿಕೊಂಡು ಟಿ ಗುರುತನ್ನು ನೀಡಿದೆ. ಹೀಗೆ ಒಂದರ ಮೇಲೊಂದು ಕೂರುವುದು ಕಂಪೆನಿ ಮತ್ತು ಗ್ರಾಹಕರ ನಡುವಿನ ಪರಸ್ಪರ ಲಾಭದ ಸಂಬಂಧ ಮತ್ತು ನಂಬಿಕೆಯನ್ನು ತೋರಿಸುತ್ತದೆ. ಹೊರಗಿನ ದೊಡ್ಡ ಮೊಟ್ಟೆ ಟಯೋಟಾವನ್ನು ಜಗತ್ತು ಸ್ವೀಕರಿಸಿದೆ ಎನ್ನುವುದನ್ನು ಸೂಚಿಸುತ್ತದೆ.
ಸ್ಕೋಡಾ

ಘೋಷವಾಕ್ಯಗಳಂತೆಯೇ ಸ್ಕೋಡಾ ಲೋಗೋವನ್ನು ಜಾಣತನದಿಂದ ರಚಿಸಲಾಗಿದೆ. ರೆಕ್ಕೆಗಳ ಬಾಣವಿರುವ ಸ್ಕೋಡೋ ಲೋಗೋದಲ್ಲಿ ಮೂರು ರೆಕ್ಕೆಗಳಿವೆ. ಬಾಣ ವೇಗವನ್ನು ಸೂಚಿಸಿದರೆ, ರೆಕ್ಕೆಗಳು ಪ್ರಗತಿಯ ಸೂಚಕ. ವೃತ್ತ ಸ್ಕೋಡಾದ 100 ವರ್ಷಗಳಿಗೂ ಹಳೇ ಪರಂಪರೆಯನ್ನು ಸೂಚಿಸುತ್ತದೆ.
ಪೋರ್ಶೆ

ಈ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯ ಲೋಗೋದಲ್ಲಿ ಕಂಪೆನಿಯ ಮೂಲ ನೆಲೆಯಾಗಿರುವ ಸ್ಟಟ್ಗರ್ಟ್ ನಗರದ ಹೆಸರಿದೆ. ಈ ನಗರವು ಕುದುರೆ ಸಾಕಾಣಿಕೆಗೆ ಪ್ರಸಿದ್ಧವಾಗಿದ್ದು, ಹಳೇ ಜರ್ಮನ್ ಹೆಸರಾದ ಸ್ಟುಟೆಂಗಾರ್ಟನ್ ಎಂದರೆ ಕುದುರೆ ಸಾಕಾಣಿಕೆ ಎಸ್ಟೇಟ್ ಎಂದರ್ಥ. ಹಿನ್ನೆಲೆಯಲ್ಲಿ ಇದು ಜರ್ಮನ್ ಧ್ವಜದ ಬಣ್ಣಗಳನ್ನು ಹೊಂದಿದೆ ಮತ್ತು ಜರ್ಮನಿಯ ಹಿಂದಿನ ರಾಜ್ಯ ವುಟಂಬರ್ಗ್‌ನ (ಅದು ಸ್ಟಗರ್ಟ್ ರಾಜಧಾನಿಯಾಗಿತ್ತು) ಕೋಟ್ ಆಫ್ ಆರ್ಮ್ಸ್ ಇದೆ.
ಮರ್ಸಿಡಿಸ್ ಬೆಂಜ್

ಡೇಮ್ಲರ್ ಮೋಟೋರನ್ ಸೆಸ್ಲಷಾಫ್ಟ್‌ನ ಮೂರು ರೇಖೆಗಳಿರುವ ತಾರೆಯನ್ನು 1909ರಲ್ಲಿ ನೋಂದಾಯಿಸಲಾಗಿದೆ. ಇದರ ಮೂರು ರೇಖೆಗಳು ಮೂರು ರೀತಿಯ ಚಲನೆಯಾಗಿರುವ ಭೂ, ನೀರು ಮತ್ತು ವಾಯು ಮಾರ್ಗವನ್ನು ಸೂಚಿಸುತ್ತದೆ. 1926ರಲ್ಲಿ ಡೇಮ್ಲರ್ ಮತ್ತು ಬೆಂಜ್ ಏಕೀಕರಣವಾಗಿ ಈ ತಾರೆಯನ್ನು ವೃತ್ತದಲ್ಲಿಡಲಾಯಿತು.
ಹ್ಯೂಂಡೈ

ಹ್ಯೂಂಡೈ ಲೋಗೋ ದಕ್ಷಿಣ ಕೊರಿಯಾದ ಆಟೋಮೊಬೈಲ್ ತಯಾರಕರ ಹೆಸರಿನ ಮೊದಲ ಅಕ್ಷರವನ್ನು ಹೊಂದಿದೆ. ಎಚ್ ಎನ್ನುವ ಅಕ್ಷರವು ಗ್ರಾಹಕ ಮತ್ತು ಕಂಪೆನಿಯ ಸಂಬಂಧವನ್ನು ಸೂಚಿಸುತ್ತದೆ. ಸಮೀಪದಿಂದ ನೋಡಿದರೆ ಅದು ಇಬ್ಬರು ವ್ಯಕ್ತಿಗಳು ಕೈಕುಲುಕುವುದಾಗಿದೆ.
ಬಿಎಂಡಬ್ಲ್ಯು

ಬೇರಿಶ್ ಮೋಟರ್ನ್ ವರ್ಕ್ (ಬಿಎಂಡಬ್ಲ್ಯು) ಬ್ಯಾವರಿಯನ್ ಮೋಟಾರ್ ವರ್ಕ್ಸ್‌ನ ಜರ್ಮನ್ ರೂಪ. ಬಿಳಿ ಮತ್ತು ನೀಲಿ ಪಟ್ಟಿ ಇರುವ ವೃತ್ತಾಕಾರದ ಲೋಗೋ ಅಥವಾ ರೌಂಡೆಲ್ ಬಳಸುತ್ತದೆ. ಬಣ್ಣಗಳನ್ನು ಜರ್ಮನಿಯ ಆಗ್ನೇಯ ರಾಜ್ಯ ಬ್ಯಾವರಿಯದ ಧ್ವಜದಿಂದ ಬಳಸಲಾಗಿದೆ. ಬ್ಯಾವರಿಯದಲ್ಲೇ ಬಿಎಂಡಬ್ಲ್ಯು ಕೇಂದ್ರ ಕಚೇರಿಯಿದೆ. ಈ ಲೋಗೋ ವಾಯು ಯಾನದ ಪ್ರೊಫೆಲ್ಲರ್ ಬ್ಲೇಡನ್ನು ಸೂಚಿಸುತ್ತದೆ ಎನ್ನುವ ಚರ್ಚೆ ಹಿಂದಿನಿಂದಲೂ ಇದೆ. ಏಕೆಂದರೆ ಸಂಸ್ಥೆ ಹಿಂದೆ ವಿಮಾನದ ಇಂಜಿನ್‌ಗಳನ್ನು ತಯಾರಿಸುತ್ತಿತ್ತು. ಆದರೆ ನಂತರ ಅದು ರೌಂಡೆಲ್ ಎಂದು ದೃಢವಾಗಿತ್ತು. ಆದರೆ 1929ರಲ್ಲಿ ಅದನ್ನು ವಿಮಾನದ ಜಾಹೀರಾತಲ್ಲಿ ಬಳಸಲಾಗಿತ್ತು.
ಆಡಿ

ಆಡಿಯ ನಾಲ್ಕು ರಿಂಗ್‌ಗಳ ಲೋಗೋ ಜಾಗತಿಕವಾಗಿ ಜನಪ್ರಿಯವಾಗಿದ್ದರೂ ಅದರ ಅರ್ಥ ಕೆಲವೇ ಮಂದಿಗೆ ತಿಳಿದಿದೆ. ನಾಲ್ಕು ರಿಂಗ್‌ಗಳು ನಾಲ್ಕು ಕಂಪೆನಿಗಳು ಏಕೀಕರಣಗೊಂಡಿರುವುದನ್ನು ತೋರಿಸುತ್ತದೆ. 1932ರಲ್ಲಿ ಹೋಷ್, ಡಿಕೆಡಬ್ಲ್ಯು ಮತ್ತು ವಾಂಡರರ್ ಜೊತೆಗೆ ಆಡಿ ಏಕೀಕರಣಗೊಂಡು ಈಗಿನ ಆಡಿ ಎನ್ನುವ ಆಟೋ ಸಂಘಟನೆ ಹುಟ್ಟಿಕೊಂಡಿದೆ.
ಕೃಪೆ: http://economictimes.indiatimes.com/







