ಸೊಳ್ಳೆಗಳಿಗೆ ಬಿಜೆಪಿ, ಕಾಂಗ್ರೆಸ್ ಎಂಬ ವ್ಯತ್ಯಾಸವೇನೂ ಇಲ್ಲ: ಕೇಜ್ರಿವಾಲ್

ಹೊಸದಿಲ್ಲಿ, ಸೆಪ್ಟಂಬರ್ 19: ದಿಲ್ಲಿಯ ಜನರು ಸೊಳ್ಳೆಗಳ ವಿರುದ್ಧ ಯುದ್ಧ ಘೋಷಿಸುವರೆಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ. ಚಿಕುನ್‌ಗುನ್ಯಾ, ಡೆಂಗ್‌ಜ್ವರ ಎದುರಿಸಲು ದಿಲ್ಲಿ ಸರಕಾರ ಮತ್ತು ಕೇಂದ್ರ ಬಿಜೆಪಿ ನಿಯಂತ್ರಣದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್‌ಗಳು ಜಂಟಿಯಾಗಿ ಕೆಲಸ ಮಾಡಬೇಕಾದ ಸಮಯವಿದು. ಸೊಳ್ಳೆಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಯವರಿವರೆಂಬ ತಾರತಮ್ಯಗಳಿಲ್ಲ ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಭಾರತ-ಪಾಕ್ ಕ್ರಿಕೆಟ್ ಸ್ಪರ್ಧೆ ನಡೆಯುವಾಗ ಇಡೀ ದೇಶ ಒಂದುಗೂಡುವಂತೆ ಎಲ್ಲರೂ ಸೊಳ್ಳೆಯನ್ನು ನಿವಾರಿಸಲು ಒಟ್ಟುಗೂಡಿ ಪ್ರಯತ್ನಿಸಬೇಕಿದೆ. ಸ್ಥಳೀಯ ಸಂಸ್ಥೆಗಳನ್ನು ಇನ್ನು ದೂರಿ ಪ್ರಯೋಜನವಿಲ್ಲ. ಹೆಚ್ಚು ಫಾಗಿಂಗ್ ಯಂತ್ರಗಳನ್ನು ಖರೀದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಗಂಟಲು ಶಸ್ತ್ರಕ್ರಿಯೆಯ ಬಳಿಕ ಕೇಜ್ರಿವಾಲ್ ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆಂದು ವರದಿ ತಿಳಿಸಿದೆ.
Next Story





