ಹರ್ಯಾಣದ ಗೋ ಇಲಾಖೆಗೆ 500 ಎಕರೆ ಭೂಮಿ, ವಿಶ್ವವಿದ್ಯಾಲಯ ಬೇಕಂತೆ. ಯಾವುದಕ್ಕೆ ಗೊತ್ತೇ ?

ಹರ್ಯಾಣ,ಸೆ.19 : ಗೋ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿ, ಗೋಮೂತ್ರ, ಹಾಲು ಹಾಗೂ ಸೆಗಣಿಯ ಮೇಲೆ ಹಲವು ಸಂಶೋಧನೆಗಳನ್ನು ನಡೆಸುವ ಪ್ರಸ್ತಾಪವೊಂದನ್ನು ಹರ್ಯಾಣದ ಗೋ ಸೇವಾ ಆಯೋಗ ಮುಂದಿಟ್ಟಿದೆ.
ಈ ಪ್ರಸ್ತಾಪದ ವಿಚಾರವಾಗಿ ತಾವು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಹರ್ಯಾಣ ಗೋ ಸೇವಾ ಆಯೋಗದ ಮುಖ್ಯಸ್ಥರಾದ ಭನಿ ರಾಮ್ ಮಂಗ್ಲಾ ಹೇಳಿದ್ದಾರೆ.
ಈ ಪ್ರಸ್ತಾವಿತ ವಿಶ್ವವಿದ್ಯಾಲಯಕ್ಕೆ 500 ಎಕರೆ ಭೂಮಿಬೇಕೆಂದು ಬೇಡಿಕೆ ಸಲ್ಲಿಸಿರುವ ಆಯೋಗ ಇಷ್ಟೊಂದು ಭೂಮಿಯನ್ನು ನೀಡಲು ಮುಂದಾಗುವಗ್ರಾಮ ಪಂಚಾಯತನ್ನು ಗುರುತಿಸುವುದಾಗಿ ಹೇಳಿದ್ದಾರೆ.
ದನದ ಹಾಲು ಇಳುವರಿ ಹೆಚ್ಚಿಸಲು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಗೋ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಒದಗಿಸುವ ಇರಾದೆಯೂ ಆಯೋಗಕ್ಕಿದೆ. ವಿಶ್ವವಿದ್ಯಾಲಯವು ಡಿಪ್ಲೋಮಾ ಕೋರ್ಸುಗಳನ್ನು ನಡೆಸಲಿದೆಯೆಂದು ಹೇಳಲಾಗಿದೆ.
Next Story





