ಟಿಂಬರ್ ಲಾರಿ ಮಗುಚಿ ಇಬ್ಬರ ಸಾವು

ಮಡಿಕೇರಿ ಸೆ.19: ಟಿಂಬರ್ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟು, 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
ಐಗೂರು ಗ್ರಾಮದ ನಿವಾಸಿಗಳಾದ ಸತೀಶ್(33) ಹಾಗೂ ರಾಮು(40) ಮೃತಪಟ್ಟವರು. ಮುರುಗ ಎಂಬವರ ಎರಡು ಕಾಲುಗಳು ಮುರಿದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಲೋಕನಾಥ್, ಮಂಜುನಾಥ್, ರಾಮದಾಸ್, ಶಿವರಾವ್, ಡ್ರೈವರ್ ಸುನಿಲ್ ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊಡ್ಲಿಪೇಟೆಯ ಮರ ವ್ಯಾಪಾರಿ ಮಣಿ ಎಂಬವರಿಗೆ ಸೇರಿದ ಶಬರಿಗಿರಿ ಲಾರಿಯಲ್ಲಿ, ತಾಕೇರಿ ಗ್ರಾಮದಿಂದ ಸಿಲ್ವರ್ ಮರದ ನಾಟಗಳನ್ನು ತುಂಬಿಸಿಕೊಂಡು ಸಾಗಿಸಲಾಗುತ್ತಿತ್ತು. ಈ ಸಂದರ್ಭ, ಕಿರಗಂ ದೂರು ಕೆ.ಟಿ.ಪೂವಯ್ಯ ಎಂಬವರ ಮನೆಯ ಮುಂಭಾಗದ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ತುಂಬಿದ್ದ ಮರದ ನಾಟಗಳ ಮೇಲೆ ಕುಳಿತ್ತಿದ್ದವರು, ನಾಟಗಳ ಅಡಿಯಲ್ಲಿ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಿದರು.
ಮೃತ ಸತೀಶ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮತ್ತು ರಾಮು ಪತ್ನಿ ಹಾಗೂ ಒಬ್ಬ ಪುತ್ರಿ, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಶಿಕ್ಷಕರಿಗೆ





