ಬಿಹಾರ: ಕೆರೆಗೆ ಉರುಳಿದ ಬಸ್ 50 ಮಂದಿ ಮೃತಪಟ್ಟಿರುವ ಶಂಕೆ

ಮಧುಬನಿ,ಸೆ.19:ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಕೆರೆಯಲ್ಲಿ ಬಿದ್ದಿದ್ದು, ಸುಮಾರು 50 ಜನರು ಸಾವನ್ನಪ್ಪಿರುವರೆಂದು ಭೀತಿಪಡಲಾಗಿದೆ.
ಸಿತಾಮಡಿಯಿಂದ ಮಧುಬನಿಗೆ ಬರುತ್ತಿದ್ದ ಈ ನತದೃಷ್ಟ ಬಸ್ ಜಿಲ್ಲಾಕೇಂದ್ರದಿಂದ 50 ಕಿ.ಮೀ.ಅಂತರದಲ್ಲಿರುವ ಬೆನ್ನಿಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸೈತ್ ಚೌಕ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಉರುಳಿದೆ. ಸುಮಾರು 25 ಅಡಿ ಆಳವಿರುವ ಕೆರೆಯಲ್ಲಿ ಮುಳುಗಿರುವ ಬಸ್ಸಿನಲ್ಲಿ 55 ಪ್ರಯಾಣಿಕರಿದ್ದರೆಂದು ಅನಧಿಕೃತ ವರದಿಗಳು ತಿಳಿಸಿವೆ. ರಾತ್ರಿಯವರೆಗೆ ಮೂವತ್ತೈದು ಮಂದಿಯ ಶವಗಳನ್ನು ಕೆರೆಯಿಂದ ಹೊರಕ್ಕೆ ತೆಗೆಯಲಾಗಿತ್ತು.
ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಲ್ಲಿ ವಿಳಂಬಿಸಿತೆಂದು ಆರೋಪಿಸಿ ಗ್ರಾಮಸ್ಥರು ಕಲ್ಲುತೂರಾಟ ನಡೆಸಿದ್ದರಿಂದ ಕೆಲಕಾಲ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.
Next Story





