Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಲ್ಕತಾದಿಂದ ಲಂಡನ್‌ವರೆಗೆ-ಪೋಲಿಯೊದಿಂದ...

ಕೊಲ್ಕತಾದಿಂದ ಲಂಡನ್‌ವರೆಗೆ-ಪೋಲಿಯೊದಿಂದ ಪೈಲಟ್‌ವರೆಗೆ...!

ಆಗಸದ ಹಾರಾಟಕ್ಕೆ ಅಡ್ಡಿಯಾಗದ ಅಂಗ ವೈಕಲ್ಯ!

ವಾರ್ತಾಭಾರತಿವಾರ್ತಾಭಾರತಿ19 Sept 2016 11:57 PM IST
share
ಕೊಲ್ಕತಾದಿಂದ ಲಂಡನ್‌ವರೆಗೆ-ಪೋಲಿಯೊದಿಂದ ಪೈಲಟ್‌ವರೆಗೆ...!

ಸತ್ಯಾ ಕೆ.
ಮಂಗಳೂರು, ಸೆ. 19: ಬಾಲ್ಯದಲ್ಲೇ ಪೋಲಿಯೋ ಪೀಡಿತನಾಗಿ ಸೊಂಟದ ಕೆಳಗಿನ ಸ್ವಾಧೀನವನ್ನೆ ಕಳೆದುಕೊಂಡಿದ್ದರೂ, ತನ್ನ ಅಶಕ್ತತೆಯನ್ನೇ ಜೀವನೋತ್ಸಾಹವಾಗಿಸಿ ವಿಮಾನವನ್ನು ಓಡಿಸಬಲ್ಲ ಶಕ್ತ ಪೈಲಟ್ ಆಗಿ ರೂಪುಗೊಡಿರುವ, ಪ್ರಸಕ್ತ ಲಂಡನ್ ನಿವಾಸಿ ಗೌತಮ್ ಲೂಯಿಸ್‌ರವರು ಸೋಮವಾರ ನಗರದ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯಲ್ಲಿ ತಮ್ಮ ಜೀವನದ ಯಶೋಗಾಥೆಯನ್ನು ತೆರೆದಿಟ್ಟರು. ವಿಶೇಷ ಮಕ್ಕಳು, ಅವರ ಪೋಷಕರು ಹಾಗೂ ಶಿಕ್ಷಕರ ಜತೆ ಕಾರ್ಯಕ್ರಮದಲ್ಲಿ ಊರುಗೋಲಿನ ಸಹಾಯದಿಂದಲೇ ನಿಂತು ಮಾತನಾಡುವ ಮೂಲಕ ಅಲ್ಲಿದ್ದ ನೂರಾರು ವಿಶೇಷ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಕರಲ್ಲಿ ಅವರು ಉತ್ಸಾಹ ತುಂಬಿದರು. ‘‘ನನ್ನ ಜೀವನ ಕೊಂಚ ಭಿನ್ನ. ನಾನು ಹುಟ್ಟಿದ ನಿರ್ದಿಷ್ಟ ದಿನಾಂಕ, ಇಸವಿ ನನಗೆ ತಿಳಿದಿಲ್ಲ. ಅಷ್ಟೇ ಏಕೆ ನನ್ನ ಹೆತ್ತ ತಾಯಿ ತಂದೆ, ಕುಟುಂಬದ ಬಗ್ಗೆ ನನಗೆ ನೆನಪಿಲ್ಲ. ಮೂರು ವರ್ಷದಲ್ಲೇ ಪೋಲಿಯೊ ಪೀಡಿತನಾಗಿದ್ದ ನನ್ನನ್ನು ಕೊಲ್ಕತಾದ ಮದರ್ ತೆರೇಸಾರವರ ಮಿಶಿನರೀಸ್ ಆಫ್ ಚಾರಿಟೀಸ್ ಸಂಸ್ಥೆಗೆ ಸೇರಿಸಲಾಗಿತ್ತು. ಆ ಸಂಸ್ಥೆ ನನ್ನ ಜೀವನದ ಬದಲಾವಣೆಗೊಂದು ಹೊಸ ತಿರುವನ್ನು ನೀಡಿತೆಂದೇ ಹೇಳಬಹುದು. ಅಲ್ಲಿ ಎರಡು ವರ್ಷಗಳ ಕಾಲ ಇದ್ದು ಬಳಿಕ ನಗರದ ಹೊರಗಡೆಯ ಶಿಶು ಮಂದಿರವೊಂದರಲ್ಲಿ ಶಸ್ತ್ರ ಚಿಕಿತ್ಸೆಗಾಗಿ ನನ್ನನ್ನು ಎರಡು ವರ್ಷಗಳ ಕಾಲ ಇರಿಸಲಾಗಿತ್ತು. ಅದೊಂದು ದಿನ ಶಿಶು ಮಂದಿರದ ತಾರಸಿ ಹತ್ತಿದ್ದ ನನಗೆ ಅಲ್ಲಿ ಗಾಳಿಪಟಗಳ ಹಾರಾಟ ಕಂಡು ನಾನೂ ಅದರಂತೆ ಸ್ವತಂತ್ರನಾಗಿ ಆಗಸದಲ್ಲಿ ಹಾರಾಡಬೇಕೆಂಬ ಕನಸು ಮೂಡಿತ್ತು. ಅಂಗವೈಕಲ್ಯ ನನ್ನ ಕನಸಿಗೆ ಅಡ್ಡಿಯಾಗದು ಎಂಬ ದೃಢ ವಿಶ್ವಾಸವೇ ನನ್ನನ್ನು ಆಗಸದಲ್ಲಿ ಹಾರಾಡುವ ವಿಮಾನದ ಪೈಲಟ್ ಆಗುವವರೆಗೆ ಬೆಳೆಸಿದೆ’’ ಎಂದು ಗೌತಮ್ ಲೂಯಿಸ್ ತಮ್ಮ ಜೀವನದ ಪಯಣವನ್ನು ಬಿಚ್ಚಿಟ್ಟರು.
‘‘ಆ ಶಿಶು ಮಂದಿರದಿಂದ ಲಂಡನ್‌ನ ಡಾ. ಪಟ್ರಿಶಿಯಾಲೂಯಿಸ್ ಎಂಬಾಕೆ ನನ್ನನ್ನು ದತ್ತು ಪಡೆಯುವ ಮೂಲಕ ಆ ಮಹಾಮಾತೆ ನನ್ನ ಕನಸಿಗೆ ರೆಕ್ಕೆಯಾದರು. ಬಾಲ ಶಿಶು ಮಂದಿರದಿಂದ ನನ್ನ ಕನಸಿನ ಪಯಣಕ್ಕೆ ಹಾದಿ ದೊರಕಿತ್ತು. 1984ರ ಫೆ.12ರಂದು ನನ್ನನ್ನು ನ್ಯಾಯಾಲಯದ ಮೂಲಕ ಡಾ. ಪಟ್ರಿಶಿಯಾ ದತ್ತು ಸ್ವೀಕರಿಸಿದ ಸಂದರ್ಭ ದತ್ತು ಪ್ರಕ್ರಿಯೆ ನೆರವೇರಿಸಿದ ನ್ಯಾಯಾಧೀಶರು ಅಂದಿನ ದಿನವನ್ನೇ ನನ್ನ ಜನ್ಮ ದಿನವಾಗಿ ಘೋಷಿಸಿ ನನಗೆ ಮರು ಹುಟ್ಟು ನೀಡಿದ್ದರು. ಆ ಸಂದರ್ಭ 7ರ ಹರೆಯದಲ್ಲಿ ವಿಮಾನದ ಮೂಲಕ ನಾನು ದಿನಬೆಳಗಾಗುವುರೊಳಗೆ ವಿಮಾನ ಹತ್ತಿ ಲಂಡನ್ ಸೇರಿದ್ದೆ. ವಿಶೇಷವೆಂದರೆ ಇಂಗ್ಲೆಂಡ್‌ನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಶಿಕ್ಷಣ ಪಡೆದ ಲಂಡನ್‌ನ ಪ್ರತಿಷ್ಠಿದ ಬಿಡೇಲ್ಸ್ ಸ್ಕೂಲ್‌ನಲ್ಲಿ ನನಗೆ ಶಿಕ್ಷಣ ದೊರೆಯಿತು. ಅಲ್ಲಿಂದ ವ್ಯವಹಾರಾಡಳಿತದಲ್ಲಿ ಪದವಿ ಪಡೆದ ನಾನು ಸಂಗೀತ ಉದ್ಯಮದತ್ತ ಆಸಕ್ತಿ ಬೆಳೆಸಿದೆ. ಆದರೆ ಈ ಅವಧಿಯಲ್ಲಿ ಬಾಲ್ಯದಲ್ಲಿ ಶಿಶು ಮಂದಿರದ ತಾರಸಿ ಮೇಲೆ, ನೀಲಬಾನಿನಲ್ಲಿ ಗಾಳಿಪಟದಂತೆ ಸ್ವಚ್ಛಂದವಾಗಿ ಹಾರಾಡುವ ನನ್ನ ಕನಸು ಮತ್ತೆ ಗರಿಕೆದರಿತು. 2007ರಲ್ಲಿ ನುರಿತ ಪೈಲಟ್ ಆಗುವುದರೊಂದಿಗೆ ಆ ನನ್ನ ಬಾಲ್ಯದ ಕನಸು ಈಡೇರಿತು’’ ಎಂದು ಲೂಯಿಸ್ ಹೇಳಿದರು.
ಕೇವಲ ಆರು ತಿಂಗಳಲ್ಲಿಯೇ ಪೈಲಟ್‌ಗೆ ಸಂಬಂಧಿದ ಎಲ್ಲ ಪರೀಕ್ಷೆಗಳನ್ನು ಪೂರೈಸಿ ನಾನೊಬ್ಬ ಪೈಲಟ್ ಆದೆ. ಊರುಗೋಲಿನೊಂದಿಗೆ ನಾನು ಆಗಸದಲ್ಲಿ ವಿಮಾನವನ್ನು ಹಾರಿಸಬಲ್ಲೆ. ನನ್ನ ಈ ಕನಸು ನನಸಾಗಿಸುವ ಪ್ರೇರಣೆ ನನ್ನಂತೆ ಇತರ ಅಶಕ್ತರಿಗೂ ಆಗಸದಲ್ಲಿ ಹಾರಾಡುವ ವಿಮಾನಗಳ ಪೈಲಟ್‌ಗಳಾಗಿಸುವ ನಿಟ್ಟಿನಲ್ಲಿ 2007ರ ಅಕ್ಟೋಬರ್‌ನಲ್ಲಿ ‘ಪ್ರೀಡಂ ಇನ್ ದಿ ಏರ್’ ಎಂಬ ವಿಮಾನ ಹಾರಾಟ ಸ್ಕೂಲ್ ತೆರೆಯಲು ಪ್ರೋತ್ಸಾಹಿಸಿತು. ಈ ಸಂಸ್ಥೆ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಿಕಲಚೇತನರಿಗಾಗಿ ಪ್ರಥಮ ಶಾಶ್ವತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯಲ್ಲಿ ಕಳೆದ ಸುಮಾರು 10 ವರ್ಷಗಳಲ್ಲಿ ನೂರಾರು ಮಂದಿ ವಿಕಲಚೇತನರು ಪೈಲಟ್ ತರಬೇತಿಯನ್ನು ಪಡೆಯುವ ಮೂಲಕ ಸ್ವತಂತ್ರವಾಗಿ ಜೀವನ ಸಾಗಿಸಲು ಸಾಧ್ಯವಾಗಿದೆ. ಉದ್ಯೋಗಿಗಳಾಗಿ ಗುರುತಿಸಿಕೊಳ್ಳಲು ಪ್ರೋತ್ಸಾಹಿಸಿದೆ’’ ಎಂದು ಗೌತಮ್ ಲೂಯಿಸ್ ಹೆಮ್ಮೆ ಪಡುತ್ತಾರೆ. ‘‘ಇಷ್ಟಕ್ಕೇ ನಾನು ತೃಪ್ತನಾಗಲಿಲ್ಲ, ನನ್ನ ವೈಕಲ್ಯತೆ ಕೇವಲ ದೇಹಕ್ಕೆ ಸೀಮಿತವಾಗಿದ್ದು, ನನ್ನ ಬುದ್ಧಿಶಕ್ತಿ ನಾನು ಮತ್ತೂ ಬೆಳೆದು ಛಾಯಾಚಿತ್ರ ಗ್ರಾಹಕನಾಗುವವರೆಗೆ, ಓರ್ವ ಸಾಕ್ಷಚಿತ್ರ ನಿರ್ಮಾಪಕನಾಗಿಯೂ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ 7ರ ಹರೆಯದಲ್ಲಿ ಕೊಲ್ಕತಾದಿಂದ ಇಂಗ್ಲೆಂಡ್‌ಗೆ ಹೋದ ಬಳಿಕ ಪ್ರಥಮವಾಗಿ ಕೊಲ್ಕತಾದ ಮದರ್ ತೆರೇಸಾ ಮಿಶನರೀಸ್ ಆಫ್ ಚಾರಿಟೀಸ್‌ಗೆ ತೆರಳಿ ಮದರ್ ತೆರೇಸಾರನ್ನು ಭೇಟಿ ಮಾಡಿದ್ದೆ. ‘ಜೀವನದಲ್ಲಿ ಸ್ಪಷ್ಟ ಗುರಿ ಇದ್ದಾಗ, ಅದನ್ನು ತಲುಪಲು ಯಾವ ಅಂಗವೈಕಲ್ಯವೂ ಅಡ್ಡಿಯಾಗದು’’ ಎಂದವರು ನನಗೊಂದು ಕಿವಿಮಾತು ಹೇಳಿದ್ದರು. ಅದೇ ನಾನು ಅವರನ್ನು ಕಂಡು ಮಾತನಾಡಿದ ಪ್ರಥಮ ಹಾಗೂ ಕೊನೆಯ ಕ್ಷಣವಾಗಿತ್ತು. ನನ್ನಂತಹ ಅದೆಷ್ಟೋ ಮಂದಿಗೆ ಮಹಾಮಾತೆಯಾಗಿರುವ ಮದರ್ ತೆೆರೇಸಾರ ಜೀವನದ ಕುರಿತು ಜಾಗತಿಕವಾಗಿ ತಿಳಿಸಬೇಕೆಂಬ ಉದ್ದೇಶದಿಂದ, ನನ್ನ ಅನುಭವಗಳೊಂದಿಗೆ ಮದರ್ ತೆರೇಸಾರ ಸಾಕ್ಷಚಿತ್ರವನ್ನು ತಯಾರಿಸಲು ನಿರ್ಧರಿಸಿದೆ. ಇದೀಗ ಅದು ಭಾರತ ಸೇರಿದಂತೆ ವಿದೇಶಗಳಲ್ಲೂ ಪ್ರದರ್ಶಿಸಲ್ಪಡುತ್ತಿದೆ’’ ಎಂದು ಹೇಳಿದರು. ಅಶಕ್ತರು ತಮ್ಮಲ್ಲಿನ ಋಣಾತ್ಮಕ ಮನೋಭಾವವನ್ನು ಹೊರಗೆಡಹಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಆ ಮನೋಭಾವ ಅಶಕ್ತ ಮಕ್ಕಳ ಪೋಷಕರಲ್ಲೂ ಅಗತ್ಯವಾಗಿದೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಮುಂದೆ ಸಾಗುವ ಮನಸ್ಸು ಅತೀ ಅಗತ್ಯವಾಗಿದೆ ಎಂದು ಗೌತಮ್ ಲೂಯಿಸ್ ಹೇಳಿದರು.
ಊರುಗೋಲುಗಳ ಮೂಲಕ ಪಾದರಸದಂತೆ ನಡೆದಾಡುವ ಗೌತಮ್ ಲೂಯಿಸ್‌ರವರು ಕಾರನ್ನು ಚಲಾಯಿಸುತ್ತಾರೆ. ಲಂಡನ್‌ನಲ್ಲಿ ಉದ್ಯಮವನ್ನೂ ನಡೆಸುವ ಅವರು, ತಮ್ಮ ಕಚೇರಿಗೆ ತಮ್ಮ ಕಾರನ್ನು ತಾವೇ ಚಲಾಯಿಸುತ್ತಾ ಹೋಗುತ್ತಾರೆ.
ಭಾರತದಲ್ಲಿ ಮನೆಯೊಂದು ಮಾಡುವಾಸೆ...!
ನಾನು ಕೊಲ್ಕತಾದಲ್ಲಿ ಹುಟ್ಟಿದ್ದರೂ, ನನ್ನ ಜೀವನಕ್ಕೊಂದು ಹೊಸ ನೆಲೆ ಕಂಡುಕೊಂಡಿದ್ದು ಲಂಡನ್‌ನಲ್ಲಿ. ಆದರೆ ನನ್ನ ಹುಟ್ಟೂರಿನ ಬಗ್ಗೆ ನನಗೆ ಗೌರವ ಇದೆ. ಈಗಾಗಲೇ 150ಕ್ಕೂ ಅಧಿಕ ರಾಷ್ಟ್ರಗಳನ್ನು ಸುತ್ತಾಡಿದ್ದೇನೆ. ಇದೀಗ ನನಗೆ ಭಾರತದಲ್ಲೂ ಮನೆಯೊಂದನ್ನು ಮಾಡಿ ವರ್ಷದ ಆರು ತಿಂಗಳು ಭಾರತದಲ್ಲಿ ಇನ್ನಾರು ತಿಂಗಳು ಲಂಡನ್‌ನಲ್ಲಿ ವಾಸವಿರಬೇಕೆಂಬ ಇಚ್ಛೆಯಿದೆ ಎನ್ನುತ್ತಾರೆ ಗೌತಮ್ ಲೂಯಿಸ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X