ನಾಳೆ ಬೆಳ್ಳಿಹಬ್ಬ ಕಾರ್ಯಕ್ರಮ
ಮಂಗಳೂರು, ಸೆ.19: ನಿಟ್ಟೆ ಉಷಾ ಇನ್ಸ್‌ಟಿಟ್ಯೂಟ್ ಆ್ ನರ್ಸಿಂಗ್‌ನ ಬೆಳ್ಳಿಹಬ್ಬ ಕಾರ್ಯಕ್ರಮ ಸೆ.21ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಪಾನೀರು ಕ್ಯಾಂಪಸ್‌ನ ಅಡಿಟೋರಿಯಂನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಪ್ರೊ. ಡಾ. ಾತಿಮಾ ಡಿಸಿಲ್ವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ‘ಆರ್ಯವನ’ ಗಿಡಮೂಲಿಕೆಗಳ ಉದ್ಯಾನದ ಉದ್ಘಾಟನೆ ನಡೆಯಲಿದೆ. ಬಳಿಕ ‘ಉತ್ತಮ ಭವಿಷ್ಯಕ್ಕಾಗಿ ಜೀವವೈವಿಧ್ಯ’ ಅಧ್ಯಯನ ಗೋಷ್ಠಿ ಆಯೋಜಿಸಲಾಗಿದೆ. ಬೆಳ್ಳಿಹಬ್ಬ ಕಾರ್ಯಕ್ರಮ ‘ಸಮ್ಯತ-25’ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಗೊಳ್ಳಲಿದೆ. 3:30ಕ್ಕೆ ಕೆ.ಎಸ್. ಹೆಗ್ಡೆಯ ಕ್ಷೇಮ ಸಭಾಂಗಣದಲ್ಲಿ ಔಪಚಾರಿಕ ಸಮಾರಂಭ ಜರಗಲಿದೆ. ಬೆಳ್ಳಿಹಬ್ಬದ ಸವಿನೆನಪಿಗಾಗಿ ಲಾಂಛನ ಅನಾವರಣ, 25 ಸಂವತ್ಸರದ ಪಯಣದ ಕುರಿತು ಮಾಹಿತಿ, 1992ರಿಂದ ಇಲ್ಲಿಯವರೆಗೆ ಸಂಸ್ಥೆಗೆ ಸಂಬಂಧಪಟ್ಟ ವಿವಿ ಸಿಬಂದಿ ವರ್ಗದ ಕೊಡುಗೆಗಳ ಸ್ಮರಣೆ, ‘ಬೆಳ್ಳಿ ಹಬ್ಬದ ಸಂವತ್ಸರ 2016-17’ ಕುರಿತು ವಿಶ್ಲೇಷಣೆ, ಹಳೆ ವಿದ್ಯಾರ್ಥಿ ಸಂಘದ 4ನೆ ವಾರ್ತಾ ಪ್ರತಿ ‘ಸ್ವರ’ದ ಅನಾವರಣ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಕೂಲ್ ಆ್ ನರ್ಸಿಂಗ್‌ನ ಪ್ರಾಂಶುಪಾಲೆ ಕ್ಲೀಟಾ ಪಿಂಟೊ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಲ್ಲೇಶ್ ಆರ್. ಶೆಟ್ಟಿ ಉಪಸ್ಥಿತರಿದ್ದರು.





