ಇದು ಎರಡು ಮುಖ, ನಾಲ್ಕು ಕಣ್ಣುಗಳ ಕರು

ನ್ಯೂಯಾರ್ಕ್, ಸೆ.20: ಅಮೆರಿಕದ ಸೆಂಟ್ರಲ್ ಕೆಂಟಕಿ ಫಾರ್ಮ್‌ಗೆ ಪ್ರವಾಸಿಗರ ಸಂಖ್ಯೆ ಇದೀಗ ದ್ವಿಗುಣಗೊಂಡಿದೆ. ಫಾರ್ಮ್‌ಗೆ ಹೊಸ ಸೇರ್ಪಡೆಯಾಗಿರುವ ಎರಡು ಮುಖದ ಆಕಳ ಕರು ಇದಕ್ಕೆ ಕಾರಣ.
ನಾನು ಮೊದಲಿಗೆ ಈ ಕರುವನ್ನು ನೋಡಿದಾಗ ಅವಳಿ-ಜವಳಿ ಕರು ಎಂದು ಭಾವಿಸಿದ್ದೆ. ಆದರೆ, ಇದು ಒಂದು ರೀತಿಯ ವಿಚಿತ್ರವಾಗಿದೆ ಎಂದು ತಕ್ಷಣವೇ ತಿಳಿಯಿತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಪ್ರಕೃತಿಯ ವೈಚಿತ್ರಕ್ಕೆ ಸಾಕ್ಷಿಯಾಗಿರುವ ಹೆಣ್ಣು ಕರುವಿಗೆ 2 ಮೂಗು, 2 ಬಾಯಿ ಹಾಗು ನಾಲ್ಕು ಕಣ್ಣುಗಳಿವೆ. ಆದರೆ, ಮಧ್ಯದ ಕಣ್ಣುಗಳಲ್ಲಿ ದೃಷ್ಟಿಯಿಲ್ಲ. ಇಷ್ಟೇಲ್ಲ ಅಂಗವೈಕಲ್ಯವನ್ನು ಹೊಂದಿರುವ ಈ ಕರು ನಡೆಯುತ್ತದೆ. ಈ ರೀತಿ ಜನಿಸುವ ಕರುಗಳು ಬದುಕಿ ಉಳಿಯುವುದೇ ಅಪರೂಪ. ಆದರೆ, ಈ ಎರಡು ಮುಖದ ಕರು ಆಹಾರ ತಿನ್ನುತ್ತದೆ ಹಾಗೂ ಆರೋಗ್ಯವಾಗಿರುವಂತೆ ಕಾಣುತ್ತಿದೆ.
ಐದರ ಹರೆಯದ ಬಾಲಕಿ ಕೆನ್ಲೀ ಈ ವಿಚಿತ್ರ ಕರುವಿಗೆ ಲಕ್ಕಿ ಎಂದು ಹೆಸರಿಟ್ಟಿದ್ದಾರೆ. ಏಕೆಂದರೆ ಈ ಕರು ಬದುಕುವುದೇ ಒಂದು ಅದೃಷ್ಟವಾಗಿದೆ.
Next Story





