ಸಮುದ್ರದಲ್ಲಿ ನಾಪತ್ತೆಯಾದ 37 ವರ್ಷಗಳ ಬಳಿಕ ಸಿಕ್ಕಿತು ಮದುವೆ ಉಂಗುರ
.jpg)
37 ವರ್ಷಗಳ ಹಿಂದೆ ಸಮುದ್ರದಲ್ಲಿ ಕಳೆದು ಹೋದ ಒಂದು ಚಿನ್ನದ ಮದುವೆ ಉಂಗುರವನ್ನು ಸ್ಕೂಬಾ ಡೈವರ್ ಒಬ್ಬ ನೀರಿನಲ್ಲಿ ಕಂಡು ಮಾಲೀಕನಿಗೆ ಹಿಂತಿರುಗಿಸಿದ್ದಾನೆ. ಡೈವಿಂಗ್ ತರಬೇತುದಾರರಾದ ಜೆಸ್ಸಿಕಾ ಗ್ವೆಸ್ಟಾ ಬೆನಿಡ್ರಾಂ ಕರಾವಳಿ ನಗರದಲ್ಲಿ ಕಳೆದ ತಿಂಗಳು ಈ ಉಂಗುರವನ್ನು ಕಂಡು ಸಾಮಾಜಿಕ ತಾಣದಲ್ಲಿ ಹುಡುಕಾಡಿದ್ದರು. ನಂತರ ಅವರನ್ನು ಕಂಡುಹಿಡಿದು ಝಾರಾಗೋಜಾದ ಈಶಾನ್ಯ ನಗರದ ಬಳಿಯ ಗ್ರಾಮವೊಂದರ ಬಾರ್‌ನಲ್ಲಿದ್ದ ಆಗಸ್ಟಿನ್ ಅಲಿಯಾಗರಿಗೆ ಅದನ್ನು ವಾಪಾಸು ಮಾಡಿದ್ದಾರೆ.
ಕಳೆದ ತಿಂಗಳು ರಿಂಗ್ ಪತ್ತೆ ಮಾಡಿದ ಮೇಲೆ ಜೆಸ್ಸಿಕಾ ಅದರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಆ ರಿಂಗ್‌ನಲ್ಲಿ 1979 ಫೆಬ್ರವರಿ 17 ಎನ್ನುವ ದಿನಾಂಕವಿತ್ತು. ಈ ಪೋಸ್ಟ್‌ನ್ನು 80,000ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಅಂತಿಮವಾಗಿ ಇದನ್ನು ಅಲಿಯಾಗ ಮತ್ತು ಅವರ ಪತ್ನಿ ಜುವಾಣಿ ಸಾನ್ಷೆಜ್ ಕೂಡ ನೋಡಿದರು. ಮದುವೆಯಾದ ಕೆಲ ಸಮಯದ ನಂತರ ಈಜಾಡುವಾಗ ಉಂಗುರ ಕಳೆದುಹೋಗಿತ್ತು ಎಂದು ಅಲಿಯಾಗ ಹೇಳಿದ್ದಾರೆ.
ಕೃಪೆ: http://khaleejtimes.com/
Next Story





