ಹೀಗೊಂದು ಅಪರೂಪದ ಮದುವೆ
ಒಂದಾದರು ಒಂದೇ ಕುಟುಂಬದ ವಿಧುರ-ವಿಧವೆ

ಬೆಂಗಳೂರು, ಸೆ.20: ಕರ್ನಾಟಕ ಗೃಹ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ನಂಜಯ್ಯನ ಮಠ ಅವರು ತಮ್ಮ ಮೊದಲ ಮಗನಿಗೆ 2ನೆ ಮಗನ ಪತ್ನಿಯನ್ನು ಮದುವೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ನಂಜಯ್ಯನ ಮಠ ಅವರ 2ನೆ ಮಗ ಆಕಸ್ಮಿಕವಾಗಿ ಮೃತಪಟ್ಟದ್ದರಿಂದ ಪತ್ನಿ ವಿಧವೆಯಾಗಿದ್ದರು. ಇನ್ನು ಇದೇ ಮನೆಯ ಹಿರಿಯ ಮಗ, ತನ್ನ ಪತ್ನಿಯನ್ನ ಕಳೆದುಕೊಂಡು ವಿಧುರರಾಗಿದ್ದರು. ಈ ಸಮಯದಲ್ಲಿ ಮನೆಯ ಯಜಮಾನ, ವಿಧವೆ ಸೊಸೆಗೂ ಹಾಗೂ ವಿಧುರ ಹಿರಿಯ ಮಗನಿಗೂ ಮದುವೆ ಮಾಡಿಸಿದ್ದಾರೆ.
ಈ ರೀತಿ ಮದುವೆ ಮಾಡಿಸಿ ಹೊಸದೊಂದು ಸಾಮಾಜಿಕ ಕ್ರಾಂತಿಗೆ ಕರ್ನಾಟಕ ಗೃಹ ಮಂಡಳಿ ನಿಗಮದ ಅಧ್ಯಕ್ಷ ಎಚ್.ಸಿ ನಂಜಯ್ಯನ ಮಠ ಮುನ್ನುಡಿ ಬರೆದಿದ್ದಾರೆ. ಬಾಗಲಕೋಟೆ ತಾಲೂಕಿನ ಸುಳೇಭಾವಿಯವರಾದ ಇವರ 2ನೆ ಮಗ ವಿಶ್ವನಾಥ್ 6 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ವಿಶ್ವನಾಥ್ ಪತ್ನಿ ನಂದಿನಿ ಕಳೆದ 6 ವರ್ಷಗಳಿಂದ ವಿಧವೆಯಾಗಿದ್ದರು.
ಈಗ ಒಂದೂವರೆ ವರ್ಷದ ಹಿಂದೆ ಮೊದಲನೆ ಮಗ ರಾಜು ಅವರ ಪತ್ನಿ ಅನಾರೋಗ್ಯದಿಂದ ಸಾವೀಗೀಡಾದರು. ಹೀಗಾಗಿ ಮನೆಯಲ್ಲಿ ಗಂಡನಿಲ್ಲದ ಸೊಸೆ. ಹೆಂಡತಿಲ್ಲದ ವಿಧುರ ಮಗನನ್ನು ನಂಜಯ್ಯನ ಮಠ ಅವರು, ಮಗ, ಸೊಸೆ ಇಬ್ಬರನ್ನು ಒಪ್ಪಿಸಿ ತಮ್ಮ ಕಿರಿಯ ಸೊಸೆ ನಂದಿನಿ ಹಾಗೂ ವಿಧುರನಾಗಿದ್ದ ಮಗ ರಾಜುಗೆ ಮದುವೆ ಮಾಡಿಸಿದ್ದಾರೆ.
ಗಣ್ಯರ ಹಾರೈಕೆ: ಒಂದೇ ಮನೆಯ ವಿಧುರ ಮತ್ತು ವಿಧವೆಗೆ ಕಂಕಣಭಾಗ್ಯ ಕೂಡಿ ಬಂದ್ದಿದ್ದೇ ಶುಭ ಸುದ್ದಿ. ಅಲ್ಲದೇ ಈ ಮದುವೆಗೆ ಅನೇಕ ಗಣ್ಯರು ಬಂದು ಆರ್ಶೀವಾದ ಮಾಡಿದ್ದಾರೆ ಎಂದು ಎಚ್.ಸಿ.ನಂಜಯ್ಯನ ಮಠ ತಮ್ಮ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.







