ಶಾಪಿಂಗ್‌ಗೆ ದೊಡ್ಡ ಮಾಲ್‌ಗಳಿಗೆ ಹೋಗುವವರ ಗಮನಕ್ಕೆ
ಈ ತಂತ್ರಗಳಿಗೆ ಬಲಿ ಬೀಳಬೇಡಿ
.jpg)
ಈ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ನಡೆಸಲೆಂದು ನೀವು ಯೋಜನೆ ಹಾಕಿದ್ದರೆ ಅಂತರ್ಜಾಲ ಮತ್ತು ಹೊರಗೆ ರಿಟೇಲರ್‌ಗಳ ಈ ತಂತ್ರಗಳಿಗೆ ಮೋಸ ಹೋಗಬೇಡಿ.
ಬಲೆ ಬೀಸುವ ಬೆಲೆ
ಅಧಿಕ ಬೆಲೆಯ ವಸ್ತುಗಳನ್ನು ಕಡಿಮೆ ಬೆಲೆಯ ವಸ್ತುಗಳನ್ನು ಪಕ್ಕದಲ್ಲಿಟ್ಟು ಅದನ್ನು ಕೊಳ್ಳುವಂತೆ ಗ್ರಾಹಕರಲ್ಲಿ ಆಕರ್ಷಣೆ ತುಂಬುವುದು. ಹೊಟೇಲ್ ಮೆನುಗಳಲ್ಲೂ ಈ ಉಪಾಯ ಮಾಡಲಾಗುತ್ತದೆ.
ಸಣ್ಣ ವಸ್ತುಗಳ ಆಮಿಷ
ಚೆಕೌಟ್ ಕೌಂಟರ್ ಬಳಿ ಕಡಿಮೆ ಬೆಲೆಯ ವಾಲೆಟ್ ಗಳು, ಅಕ್ಸಸರಿಗಳು, ಸ್ನಾಕ್ ಗಳು ಮತ್ತು ಚಾಕಲೇಟುಗಳು ಇರುತ್ತವೆ. ದೊಡ್ಡ ಶಾಪಿಂಗ್ ನಂತರ ಇಂತಹ ಸಣ್ಣ ವಸ್ತುಗಳಿಗೆ ಬಲೆ ಬೀಳುವುದು ಸಹಜವೆನ್ನುವುದಕ್ಕಾಗಿ ಈ ಆಮಿಷ.
ಗ್ರುವೆನ್ ಟ್ರಾನ್ಸ್‌ಫರ್
ಇದು ದೊಡ್ಡ ಮಾಲ್‌ಗಳಲ್ಲಿ ಶಾಪಿಂಗ್ ಮಾಡುವವರಿಗೆ ಅನ್ವಯಿಸುತ್ತದೆ. ಮಾಲ್ ವಾಸ್ತುಶಿಲ್ಪಿ ವಿಕ್ಟರ್ ಗ್ರುವೆನ್ ಹೆಸರಲ್ಲಿ ಇದನ್ನು ಕರೆಯಲಾಗುತ್ತಿದೆ. ದೊಡ್ಡ ಮಾಲ್‌ಗಳಲ್ಲಿ ಯಾವ ಕಡೆ ಹೋಗಬೇಕು ಎಂದು ತಿಳಿಯದೆ ಮತ್ತೆ ಮತ್ತೆ ಅದೇ ಜಾಗಕ್ಕೆ ಬಂದು ವಸ್ತುಗಳನ್ನು ನೋಡುತ್ತಾ ಬಹಳ ಸಮಯ ಕಳೆಯುವ ಮೂಲಕ ಖರೀದಿಯ ಒತ್ತಡ ಹೆಚ್ಚಾಗುತ್ತದೆ. ಪದೇ ಪದೇ ಒಂದೇ ಬೆಲೆ ನೋಡಿದಾಗ ಅದು ಹೆಚ್ಚು ಅಗ್ಗ ಎನಿಸಿಬಿಡುತ್ತದೆ.
ಬ್ಯಾಗ್ ಕೊಡುವುದು
ಮಾಲ್‌ಗಳಲ್ಲಿ ದೊಡ್ಡ ಬ್ಯಾಗ್‌ಗಳನ್ನೇಕೆ ಇಟ್ಟಿರುತ್ತಾರೆ? ಕೈಯಲ್ಲಿ ಹೆಚ್ಚು ವಸ್ತುಗಳು ಹಿಡಿಯುವುದಿಲ್ಲ. ದೊಡ್ಡ ಬ್ಯಾಗ್ ಇದ್ದರೆ ಹೆಚ್ಚು ವಸ್ತುಗಳನ್ನು ಖರೀದಿಸುತ್ತಾರೆ ಎನ್ನುವ ಸಿದ್ಧಾಂತ. ಹೀಗಾಗಿ ಬ್ಯಾಗ್ ಹಿಡಿದು ಹೋಗಬೇಡಿ.
ಕಡಿಮೆ ಬೆಲೆಯ ಆಕರ್ಷಣೆ
ಒಂದೇ ಬ್ರಾಂಡ್‌ನ ಶಾಂಪೂ ಹಲವು ಬೆಲೆಗಳಲ್ಲಿ ಸಿಗುತ್ತವೆ. ನೀವು ಹೆಚ್ಚು ದುಬಾರಿ ವಸ್ತುಗಳನ್ನು ಕೊಳ್ಳುವವರು ಅಲ್ಲದೆ ಇದ್ದಲ್ಲಿ ಅದೇ ಶಾಂಪುವಿನ ಕಡಿಮೆ ಪ್ರಮಾಣವನ್ನು ಕಡಿಮೆ ಬೆಲೆಗೆ ಖರೀದಿಸಲು ಹಿಂಜರಿಯುವುದಿಲ್ಲ. ಆದರೆ ರೂ. 400ಕ್ಕೆ 1 ಲೀಟರ್ ಶಾಂಪೂ ಕೊಳ್ಳುವ ಬದಲಾಗಿ ರೂ.100ಕ್ಕೆ 250 ಮಿಲಿಲೀಟರ್ ಶಾಂಪೂ ಕೊಳ್ಳುತ್ತೀರಿ. ವಾಸ್ತವದಲ್ಲಿ ನೀವು ಅದೇ ಮೊತ್ತವನ್ನು ಕೊಟ್ಟೇ ಖರೀದಿಸಿರುತ್ತೀರಿ ಎನ್ನುವುದು ನಿಮಗೆ ತಿಳಿಯುವುದೇ ಇಲ್ಲ.
ಡೈನಾಮಿಕ್ ಬೆಲೆ
ಹಲವಾರು ರಿಟೇಲರ್‌ಗಳು ವಿಭಿನ್ನ ಗ್ರಾಹಕರಿಗೆ ವಿಭಿನ್ನ ಬೆಲೆಗೆ ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ಮಾರುತ್ತಾರೆ. ಆನ್‌ಲೈನ್ ರಿಟೇಲರ್‌ಗಳು ಈ ತಂತ್ರ ಬಳಸುತ್ತಾರೆ. ಒಂದು ವೆಬ್‌ತಾಣದಲ್ಲಿ ನೀವು ಬಹಳ ಹೊತ್ತು ಇದ್ದಲ್ಲಿ ಕಡಿಮೆ ಸಮಯ ಇದ್ದವರಿಗಿಂತ ಹೆಚ್ಚು ಬೆಲೆಯನ್ನು ನಿಮಗೆ ವೆಬ್‌ತಾಣ ತೋರಿಸಬಹುದು. ಬಳಕೆದಾರರ ಬ್ರೌಸಿಂಗ್ ಮತ್ತು ವೆಚ್ಚ ಮಾಡುವ ರೀತಿಯನ್ನು ಆನ್‌ಲೈನ್ ರಿಟೇಲರ್‌ಗಳು ಟ್ರಾಕ್ ಮಾಡಿರುತ್ತಾರೆ. ಇದನ್ನು ತಪ್ಪಿಸಲು ಕನ್‌ಕಾಗ್ನಿಟೋದಲ್ಲಿ ಬ್ರೌಸ್ ಮಾಡಿ. ಕುಕೀಸ್ ರದ್ದು ಮಾಡಿ. ಖಾತೆಗೆ ಲಾಗೌಟ್ ಮಾಡಿ.
ಕಣ್ಣಿಗೆ ಕಾಣುವ ಉತ್ಪನ್ನಗಳು
ಇದು ನಿಮಗೆ ಗೋಚರಿಸದೆ ಇರಬಹುದು. ಮಾಲ್‌ಗಳಲ್ಲಿ ನಿಮ್ಮ ಕಣ್ಣಿಗೆ ಸಮಭಾಗದಲ್ಲಿರುವ ಉತ್ಪನ್ನಗಳು ದುಬಾರಿಯಾಗಿದ್ದು, ಕೆಳಗೆ ಮತ್ತು ಮೇಲೆ ಇರುವ ವಸ್ತುಗಳು ಅಗ್ಗದವಾಗಿರುತ್ತವೆ. ಮಳಿಗೆಗಳು ಗ್ರಾಹಕರನ್ನು ಬಲದಿಂದ ಎಡಕ್ಕೆ ತಿರುಗಿಸುವುದೇ ಹೆಚ್ಚು. ಏಕೆಂದರೆ ಬಹಳಷ್ಟು ಮಂದಿ ಬಲಗೈ ಬಳಸುವ ಕಾರಣ ಉತ್ಪನ್ನ ತೆಗೆಯಲು ಸರಳವಾಗುತ್ತದೆ.
ಅಗತ್ಯ ವಸ್ತುಗಳು ಕೊನೆಗೆ
ನಿತ್ಯ ಬಳಸುವ ವಸ್ತುಗಳು, ಆಹಾರ ವಸ್ತುಗಳು ಮಾಲ್‌ನಲ್ಲಿ ಪೂರ್ಣ ಸುತ್ತಾಡಿದ ಮೇಲೆ ಕೊನೆಗೆ ಸಿಗುತ್ತದೆ. ಹೀಗಾಗಿ ನೀವು ನಿಮ್ಮ ಶಾಪಿಂಗ್ ಪಟ್ಟಿಯಲ್ಲಿ ಇಲ್ಲದ ವಸ್ತುಗಳನ್ನೂ ಕೊಂಡು ಕೊನೆಗೆ ಸರಕು ಖರೀದಿ ಬಳಿ ತಲುಪಿರುತ್ತೀರಿ.
ರಿಯಾಯಿತಿ ಜಾಲ
ಒಂದು ಖರೀದಿಸಿದರೆ ಮತ್ತೊಂದು ಶೇ. 50ರ ರಿಯಾಯಿತಿಯಲ್ಲಿ ಸಿಗುತ್ತದೆ. ಅಥವಾ ಒಂದಕ್ಕೆ ಮತ್ತೊಂದು ಉಚಿತ ಉತ್ತಮ ಕೊಡುಗೆಗಳಲ್ಲ. ಅಂತಹ ಸಂದರ್ಭದಲ್ಲಿ ಮೊದಲ ವಸ್ತು ಶೇ. 25 ಡಿಸ್ಕೌಂಟಲ್ಲಿ ಸಿಕ್ಕರೆ, ಉಳಿದದ್ದರಲ್ಲಿ ಎರಡೂ ಐಟಂಗಳ ಬೆಲೆ ಸಿಗುತ್ತದೆ.
ಸಣ್ಣ ಪ್ಯಾಕೇಜ್‌ಗಳು ದೊಡ್ಡ ಮಾರಾಟ
ಪ್ಯಾಕೇಜಲ್ಲಿ ಬರುವ ವಸ್ತುಗಳನ್ನು ಕೊಂಡು ನೀವು ಹಣ ಉಳಿಸುತ್ತೀರಿ ಎಂದುಕೊಂಡಲ್ಲಿ ತಪ್ಪು. ಹೀಗೆ ಮಾಡುವುದರಿಂದ ಒಂದೇ ಸಮಯಕ್ಕೆ ಹೆಚ್ಚು ವಸ್ತು ಬಳಸುತ್ತೀರಿ. ಒಂದು ಪ್ಯಾಕ್ ಜ್ಯೂಸ್ ಬದಲಾಗಿ ಆರು ಇರುವ ಪ್ಯಾಕೇಜ್ ಖರೀದಿಸಿದರೆ ವಾರದೊಳಗೇ ಅದನ್ನು ಮುಗಿಸಿರುತ್ತೀರಿ. ನಿಮಗೆ ಅತೀ ಅಗತ್ಯವಿಲ್ಲದಿದ್ದರೆ ಹೀಗೆ ಖರೀದಿ ಬೇಡ.
ಉಚಿತ ಸ್ಯಾಂಪಲ್
ಉಚಿತ ಸ್ಯಾಂಪಲ್ ಎನ್ನುವುದು ತಮ್ಮ ಉತ್ಪನ್ನದ ಮಾರುಕಟ್ಟೆ ತಂತ್ರವಾಗಿರುತ್ತದೆ. ಅದನ್ನು ನೋಡುತ್ತಾ ಸುತ್ತಲಿನ ವಸ್ತುಗಳ ಕಡೆಗೆ ಆಕರ್ಷಿತರಾಗಿ ಖರೀದಿಸಲು ಹೂಡುವ ತಂತ್ರ.
ಮೆಶ್ ಬ್ಯಾಗ್ ದುಬಾರಿ
ಮೆಶ್ ಬ್ಯಾಗಲ್ಲಿರುವ ತರಕಾರಿ ಕೊಂಡು ಹೋಗುವುದು ಸರಳ ಎಂದುಕೊಂಡಿರಾ? ಆದರೆ ಬ್ಯಾಗ್ ಒಳಗೆ ಜೋಡಿಸಿಟ್ಟ ವಸ್ತುಗಳಲ್ಲಿ ಕೆಲವೊಂದು ಹಾಳಾಗಿರುವ ತರಕಾರಿಯೂ ಇರಬಹುದು. ಬದಲಾಗಿ ತರಕಾರಿ ಆರಿಸಲು ಇನ್ನೈದು ನಿಮಿಷ ಬಳಸುವುದೇ ಉತ್ತಮ.
ಆ್ಯಪ್ಸ್ ಡೌನ್ಲೋಡ್
ಇಕಾಮರ್ಸ್ ಆ್ಯಪ್ಸ್ ನಿಮ್ಮ ಫೋನಿನಲ್ಲಿದ್ದರೆ ಸದಾ ಅಲರ್ಟ್‌ಗಳು ಮತ್ತು ಸಂದೇಶಗಳು ಬರುತ್ತಿರುತ್ತವೆ. ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವ ಆಸೆಯನ್ನು ನಿಮ್ಮಲ್ಲಿ ಅವು ಹುಟ್ಟಿಸುತ್ತವೆ.
ಒತ್ತಡದ ತುರ್ತು
ಅಂತರ್ಜಾಲದಲ್ಲಿ ಹೊಟೇಲ್ ಬುಕ್ ಮಾಡಲು ಪರೀಕ್ಷಿಸುತ್ತಿದ್ದರೆ, 11 ಮಂದಿ ಈ ಹೊಟೇಲ್ ಬುಕ್ ಮಾಡಲು ಪರಿಶೀಲಿಸುತ್ತಿದ್ದಾರೆ ಎನ್ನುವ ಪಾಪಪ್ ಬರಬಹುದು. ಕೊನೆಯ ಕೆಲವು ದಿನಗಳು, ಐದು ಐಟಂ ಉಳಿದಿವೆ ಮೊದಲಾದ ಜಾಹೀರಾತು ಕೂಡ ಇಂತಹದೇ ತುರ್ತನ್ನು ಸೃಷ್ಟಿಸುತ್ತವೆ.
ಕೃಪೆ: http://economictimes.indiatimes.com/







