ದೀಪಾವಳಿ ಕೊಡುಗೆ: ಟಾಟಾದಿಂದ ಉಚಿತ ವಿಮೆ

ಮಂಗಳೂರು, ಸೆ.20: ಬೆಳಕಿನ ಹಬ್ಬ ದೀಪಾವಳಿಗಾಗಿ ಟಾಟಾ ಮೋಟಾರ್ಸ್ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ. ಈ ‘ಹರ್ ವೀಕ್ ದೀಪಾವಳಿ’ ಅಡಿ ಉಚಿತ ವಾಹನ ವಿಮೆ ದೊರೆಯಲಿದೆ.
ಈ ಯೋಜನೆಯಡಿ ಟಾಟಾ ಕಾರು ಕಾಯ್ದಿರಿಸುವ ಏಳು ಅದೃಷ್ಟಶಾಲಿ ಗ್ರಾಹಕರು ತಲಾ 10 ಲಕ್ಷ ರೂ.ಗಳ ಬಹುಮಾನ ಗೆಲ್ಲಲಿದ್ದಾರೆ. ಈ ಆಫರ್ ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಟಿಯಾಗೋ ಸೇರಿದಂತೆ ಎಲ್ಲ ಪ್ರಯಾಣಿಕ ವಾಹನ ಶ್ರೇಣಿಗೆ ಲಭ್ಯ.
‘ಟಾಟಾ ಮೋಟಾರ್ಸ್ ಜಾರಿಗೆ ತಂದಿರುವ ಹರ್ ವೀಕ್ ದೀಪಾವಳಿ ಗ್ರಾಹಕರು ತಮ್ಮ ನೆಚ್ಚಿನ ಟಾಟಾ ಕಾರನ್ನು ಖರೀದಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ವಿಭಾಗದ ಅಧ್ಯಕ್ಷ ಮಾಯಂಕ್ ಪರೀಕ್ ಹೇಳಿದ್ದಾರೆ.
ಇದರ ಜತೆಗೆ ಟಾಟಾ ಮೋಟಾರ್ಸ್ ಆಕರ್ಷಕ ಆಫರ್‌ಗಳನ್ನು ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಗ್ರಾಹಕರಿಗೆ ನೀಡಲಿದೆ. ಭಾರಿ ರಿಯಾಯಿತಿಯು ಲಭ್ಯವಿದ್ದು, ಸಫಾರಿ ಸ್ಟಾರ್ಮ್ ಖರೀದಿಯಲ್ಲಿ 1 ಲಕ್ಷ ರೂ., ಜೆಸ್ಟ್ ಖರೀದಿಯಲ್ಲಿ 20,000 ರೂ. ರಿಯಾಯಿತಿಯನ್ನು ಘೋಷಿಸಿದೆ.
Next Story





